
ಶಿರಸಿಯಲ್ಲಿ ಅಡಿಕೆ ಕಳ್ಳರ ಕಾಟ : ರೈತರಲ್ಲಿ ಆತಂಕ ಸೃಷ್ಟಿ
Team Udayavani, Nov 7, 2021, 12:49 PM IST

ಶಿರಸಿ: ಅಡಿಕೆಗೆ ಧಾರಣೆ ಬಂದ ಬೆನ್ನಲ್ಲೇ ರಾತ್ರಿ ವೇಳೆ ಮರ ಹತ್ತಿ ಚೋರರು ಅಡಿಕೆ ಕೊನೆ ಕೊಯ್ದ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಮಣ್ಕಣಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ನಾಯಿ ಕೂಗುವ ಶಬ್ದ ಕೇಳಿ ತೋಟಕ್ಕೆ ಹಂದಿ ಬಂದಿರಬಹುದು ಎಂದು ತೆರಳಿದ ಗ್ರಾಮಸ್ಥರಿಗೆ ಕಳ್ಳತನ ಬೆಳಕಿಗೆ ಬಂದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮಣ್ಕಣಿಯ ಸೀತಾರಾಮ ಹೆಗಡೆ, ಪ್ರಭಾಕರ ಹೆಗಡೆ, ನಾಗರಾಜ ಹೆಗಡೆ,ಗುರುನಾಥ ಹೆಗಡೆ, ರವೀಂದ್ರ ಹೆಗಡೆ , ರಾಮಚಂದ್ರ ಹೆಗಡೆ ಅವರ ಮನೆ ತೋಟದಲ್ಲಿ ಕಳ್ಳತನ ನಡೆದಿದೆ. ಆದರೆ, ಊರವರು ಬರುವ ವೇಳೆಗೆ ಕತ್ತಲೆಯಲ್ಲಿಯೇ ಕಳ್ಳರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ನೆಗ್ಗು ಗ್ರಾಮ ಪಂಚಾಯಿತಿ, ಸುತ್ತಲಿನ ನೇರ್ಲವಳ್ಳಿ, ಮತ್ತಿಗಾರ, ಕೊಪ್ಪೆಸರ ಭಾಗದ ರೈತರಳ್ಳಿ ಆತಂಕ ಸೃಷ್ಟಿಸಿದೆ. ಗ್ರಾಮೀಣ ಭಾಗದಲ್ಲಿ ಗ್ರಾಮಸ್ಥರ ತೋಟಗಾವಲು ಹಾಗೂ ಪೊಲೀಸರ ಗಸ್ತು ಬಿಗಿಗೊಳಿಸುವ ಬಗೆಗೂ ಆಗ್ರಹ, ಚಿಂತನೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
