ಹಟ್ಟಿ ಚಿನ್ನದ ಗಣಿ: ಯೋಧನ ತಾಯಿಯನ್ನು ಹತ್ಯೆಗೈದ 6 ಆರೋಪಿಗಳ ಬಂಧನ
Team Udayavani, Feb 18, 2022, 6:48 PM IST
ಹಟ್ಟಿ ಚಿನ್ನದ ಗಣಿ: ಸಮೀಪದ ನಿಲೋಗಲ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸೈನಿಕನ ತಾಯಿಯನ್ನು ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಮುಖ ಆರೋಪಿ ಶರಣಪ್ಪಗೌಡ ಹಾಗೂ ಆತನ ಸಹಚರರ ವಿರುದ್ಧ ಹಟ್ಟಿ ಠಾಣೆಯಲ್ಲಿ ಮೃತಳ ಮಗ ಯೋಧ ಅಮರೇಶ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಎಸ್‌ಪಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ರಚಿಸಿದ್ದ ಪೊಲೀಸರ ತಂಡ ಹನುಮಂತ ಚನ್ನಪ್ಪ, ಶಂಕ್ರಪ್ಪ ಈರಪ್ಪ, ಹನುಮಂತ ದುರಗಪ್ಪ, ವೀರೇಶ ಅಮರಪ್ಪ, ಸಿದ್ದಣ ಮಲ್ಲಪ್ಪ, ಬಸಲಿಂಗಪ್ಪ ಅಮರಪ್ಪರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.