
ಪಂಜಾಬ್:ಆಮ್ ಆದ್ಮಿ ಪಕ್ಷದ 10 ಶಾಸಕರನ್ನು ಬಿಜೆಪಿ ಸಂಪರ್ಕಿಸಿ, ಆಫರ್ ನೀಡಿತ್ತು: ಕೇಜ್ರಿವಾಲ್
ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಮಂಗಳವಾರ ಬಹಿರಂಗವಾಗಿ ಆರೋಪಿಸಿದ್ದರು.
Team Udayavani, Sep 14, 2022, 3:26 PM IST

ನವದೆಹಲಿ: ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಹತ್ತು ಶಾಸಕರನ್ನು ಭಾರತೀಯ ಜನತಾ ಪಕ್ಷ ಸಂಪರ್ಕಿಸಿರುವುದಾಗಿ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಬುಧವಾರ (ಸೆಪ್ಟೆಂಬರ್ 14) ಆರೋಪಿಸಿದ್ದಾರೆ.
ಇದನ್ನೂ ಓದಿ:ಗುಜರಾತ್ ಕರಾವಳಿ ಪ್ರದೇಶದಲ್ಲಿ ಪಾಕ್ ಬೋಟ್ ವಶಕ್ಕೆ, 200 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ
ಬಿಜೆಪಿ ಮುಖಂಡರು ಆಮ್ ಆದ್ಮಿ ಪಕ್ಷದ ಹತ್ತು ಶಾಸಕರನ್ನು ಸಂಪರ್ಕಿಸಿದ್ದರು. ಬಿಜೆಪಿ ಇತರ ಪಕ್ಷದ ಶಾಸಕರನ್ನು ಖರೀದಿಸಿ, ಸರ್ಕಾರವನ್ನು ಪತನಗೊಳಿಸುತ್ತಿದೆ ಎಂದು ಕೇಜ್ರಿವಾಲ್ ದೂರಿರುವುದಾಗಿ ಪಿಟಿಐ ವರದಿ ಮಾಡಿದೆ.
ಭಗವಂತ್ ಮನ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುವ ನಿಟ್ಟಿನಲ್ಲಿ ಬಿಜೆಪಿ ಆಮ್ ಆದ್ಮಿಯ ಹತ್ತು ಶಾಸಕರನ್ನು ಸಂಪರ್ಕಿಸಿ 20ರಿಂದ 25 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿತ್ತು ಎಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಮಂಗಳವಾರ ಬಹಿರಂಗವಾಗಿ ಆರೋಪಿಸಿದ್ದರು.
ಆಮ್ ಆದ್ಮಿ ಪಕ್ಷದ ಶಾಸಕರಿಗೆ ಹಣ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿರುವುದಾಗಿ ಚೀಮಾ ತಿಳಿಸಿದ್ದರು. ಸರ್ಕಾರವನ್ನು ಉರುಳಿಸುವಂತೆ ಬಿಜೆಪಿ ಹೈಕಮಾಂಡ್ ನೀಡುವ ನಿರ್ದೇಶನದಂತೆ ಬಿಜೆಪಿ ಕೆಲವು ಮುಖಂಡರು, ಆಮ್ ಆದ್ಮಿ ಪಕ್ಷದ ಶಾಸಕರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದರು ಎಂದು ದೂರಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದಲ್ಲಿ ದ್ವೇಷದ ವಾತಾವರಣ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ರಾಹುಲ್ 3,000 ಕಿ.ಮೀ. ನಡೆಯಬೇಕಾಯಿತು!

ಸಿದ್ದರಾಮಯ್ಯನವರಿಗೆ ವರುಣಾದಲ್ಲಿ ಅವಕಾಶ ತೆರೆದ ಬಾಗಿಲು: ಡಾ.ಯತೀಂದ್ರ

ಆಗ-ಈಗ-ಕಣ ಕಥನ: ಆಗ ಚುನಾವಣೆ ಎಂದರೆ ಎಲ್ಲೆಡೆ ಹಬ್ಬದ ವಾತಾವರಣ

ಪದ್ಮವಿಭೂಷಣ ನೀಡಿ ಮುಲಾಯಂ ಅಪಹಾಸ್ಯ; ಭಾರತ ರತ್ನ ಬೇಕು ಎಂದ ಎಸ್ಪಿ ನಾಯಕರು

ಅಂಜನಾದ್ರಿ ಅಭಿವೃದ್ಧಿ ಕಾರ್ಯಕ್ಕೆ ಅಮಿತ್ ಶಾರಿಂದ ಚಾಲನೆ : ಸಚಿವ ಆನಂದ ಸಿಂಗ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
