ಆರ್ಯನ್ ಡ್ರಗ್ಸ್ ಕೇಸ್ : ಎನ್‌ಸಿಬಿ ತನಿಖಾ ತಂಡದಿಂದ ಸಮೀರ್ ವಾಂಖೆಡೆಗೆ ಕೊಕ್
Team Udayavani, Nov 5, 2021, 7:54 PM IST
ಮುಂಬಯಿ : ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಸಮೀರ್ ವಾಂಖೆಡೆ ಅವರನ್ನು ತನಿಖಾ ತಂಡದಿಂದ ಕೈಬಿಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ವರದಿಯ ಪ್ರಕಾರ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಮತ್ತು ಇತರ ಐದು ಪ್ರಕರಣಗಳಿಂದ ತೆಗೆದುಹಾಕಲಾಗಿದ್ದು, ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ತನಿಖೆ ನಡೆಸಲಾಗುತ್ತಿದೆ.ಸಂಜಯ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ಮುಂದುವರಿಸಲಿದೆ.
ವಾಂಖೆಡೆ ಅವರು 8 ಕೋಟಿ ರೂಪಾಯಿ ಪಾವತಿ ಮತ್ತು ಸುಲಿಗೆ ಆರೋಪ ಎದುರಿಸುತ್ತಿದ್ದಾರೆ.
ಎನ್‌ಸಿಪಿ ನಾಯಕ ನವಾಬ್ ಮಲಿಕ್ ಕೂಡ ಟ್ವೀಟ್ ಮಾಡಿದ್ದು, “ಆರ್ಯನ್ ಖಾನ್ ಪ್ರಕರಣ ಸೇರಿದಂತೆ 5 ಪ್ರಕರಣಗಳಿಂದ ಸಮೀರ್ ವಾಂಖೆಡೆಯನ್ನು ತೆಗೆದುಹಾಕಲಾಗಿದೆ. 26 ಪ್ರಕರಣಗಳಲ್ಲಿ ತನಿಖೆಯಾಗಬೇಕಿದೆ. ಇದು ಕೇವಲ ಆರಂಭವಾಗಿದೆ. ಈ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ.’ ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಶ್ಮೀರದಲ್ಲಿ ಈ ವರ್ಷ 26 ವಿದೇಶಿ ಭಯೋತ್ಪಾದಕರ ಸಂಹಾರ
ಶ್ರೀನಗರ: ಮಲಿಕ್ ಗೆ ಶಿಕ್ಷೆ, ದೇಶದ್ರೋಹ ಘೋಷಣೆ; 10 ಮಂದಿ ಬಂಧನ, UAPA ಕಾಯ್ದೆ ದಾಖಲು
ವಿಡಿಯೋ ವೈರಲ್: ಪತ್ನಿಯ ಥಳಿತಕ್ಕೆ ಕಂಗಾಲಾದ ಪ್ರಿನ್ಸಿಪಾಲ್, ಭದ್ರತೆ ಕೊಡಿ ಎಂದ ಕೋರ್ಟ್!
8 ವರ್ಷಗಳನ್ನು ಹಿಂದಿನ 3 ದಶಕಗಳೊಂದಿಗೆ ಹೋಲಿಕೆ ಮಾಡಿ: ಪ್ರಧಾನಿ ಮೋದಿ
ಭಾರತದಲ್ಲಿ 24ಗಂಟೆಯಲ್ಲಿ 2,628 ಕೋವಿಡ್ ಪ್ರಕರಣ ದೃಢ, 18 ಮಂದಿ ಸಾವು