ಅಸ್ಸಾಂನಲ್ಲಿ ಪೊಲೀಸ್ ಫೈರಿಂಗ್: ಗ್ಯಾಂಗ್ ರೇಪ್ ಆರೋಪಿ ಹತ್ಯೆ
2021 ರ ಮೇ ಬಳಿಕ ಈ ರೀತಿ ಬಲಿಯಾದ ಆರೋಪಿಗಳೆಷ್ಟು ?
Team Udayavani, Mar 16, 2022, 12:48 PM IST
ಗುವಾಹಟಿ : ಸಾಮೂಹಿಕ ಅತ್ಯಾಚಾರ ಕೇಸ್ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಗುಂಡಿಗೆ ಬಲಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕೃತ್ಯ ನಡೆದ ಸ್ಥಳ ಮಹಜರು ನಡೆಸಲು ತೆರಳಿದ್ದ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಘಟನೆಯಲ್ಲಿ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ ಎಂದು ಗುವಾಹಟಿ ಸಿಟಿ ಪೊಲೀಸರು ತಿಳಿಸಿದ್ದಾರೆ.
20 ವರ್ಷ ಪ್ರಾಯದ ಬಿಕಿ ಅಲಿ ಎಂಬಾತನ್ನು ಪೊಲೀಸರು ಹತ್ಯೆಗೈದಿದ್ದು, ಆತನ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಎದೆಯಲ್ಲಿ ಒಂದು ಗುಂಡು ಮತ್ತು ಬೆನ್ನಿಗೆ 3 ಗುಂಡು ಹೊಕ್ಕಿವೆ ಎಂದು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
16 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ಆರೋಪದಲ್ಲಿ ಅಲಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿ ತನಿಖೆ ನಡೆಸುತ್ತಿದ್ದರು. ಫೆ. 16 ರಂದು ನಗರದ ಹೋಟೆಲ್ ಒಂದರಲ್ಲಿ ಕೃತ್ಯ ನಡೆದಿದ್ದು, ಘಟನೆಯ ವಿಡಿಯೋ ಚಿತ್ರೀಕರಣ ಕೂಡ ನಡೆದಿದೆ ಎಂದು ದೂರಿನಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಹಿಜಾಬ್ ತೀರ್ಪಿಗೆ ಅಸಮಾಧಾನ: ನಾಳೆ ಕರ್ನಾಟಕ ಬಂದ್ ಗೆ ಕರೆ
ಅಸ್ಸಾಂ ನಲ್ಲಿ ಮೇ 2021 ರಿಂದ ಈ ರೀತಿ 28 ಎನ್ ಕೌಂಟರ್ ಗಳು ನಡೆದಿದ್ದು, ಈ ಬಗ್ಗೆ ವಕೀಲ ಆರೀಫ್ ಜ್ವಾದರ್ ಎನ್ನುವವರು ಇವೆಲ್ಲ ನಕಲಿ ಎಂದು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಬಿ ಐ , ಹೊರ ರಾಜ್ಯಗಳ ಪೊಲೀಸ್ ತಂಡಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಗೃಹ ಖಾತೆಯನ್ನೂ ನಿಭಾಯಿಸುತ್ತಿದ್ದು, ಕ್ರಿಮಿನಲ್ ಗಳ ಮೇಲೆ ಕಠಿಣ ಕ್ರಮ ಮತ್ತು ಪೊಲೀಸರಿಗೆ ಇಂತಹ ತುರ್ತು ಕ್ರಮ ಕೈಗೊಳ್ಳಲು ಆದೇಶ ನೀಡಿ ಸುದ್ದಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದೊಂದು ಆಗುವವರೆಗೆ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲ…; ಪ್ರಶಾಂತ್ ಕಿಶೋರ್
ಪರೀಕ್ಷೆ ಬರೆದು ಹೋಗುವಾಗ ಅಪಘಾತ: ಆಂಬ್ಯುಲೆನ್ಸ್ ನಲ್ಲಿ ಮಲಗಿಕೊಂಡೇ ಉಳಿದ ಪರೀಕ್ಷೆ ಬರೆದಳು.!
ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳ ಬಂಧನ
ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸರ್ಕಾರಿ ಅಧಿಕಾರಿ ಮೃತ್ಯು
ಆನೆ ದಾಳಿ: 3 ವರ್ಷಗಳಲ್ಲಿ 1,581 ಮಂದಿ ಸಾವು