ಕಲಬುರಗಿ ಕಳ್ಳರ ಕೈಚಳಕ : ಎಟಿಎಂ ಒಡೆದು ಹಣ ದೋಚಿದ ಕಳ್ಳರು
ಈ ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡೂ ಇಲ್ಲ, ಸಿಸಿಟಿವಿಯೂ ಇಲ್ಲ
Team Udayavani, Aug 28, 2020, 10:34 AM IST
ಕಲಬುರಗಿ: ಕಲಬುರಗಿಯಲ್ಲಿ ಕಳ್ಳರು ತಮ್ಮ ಕೈಚಳವನ್ನು ತೋರಿಸಿದ್ದಾರೆ ಆಕ್ಸಿಸ್ ಬ್ಯಾಂಕ್ ಎಟಿಎಂ ಒಡೆದು ಹಣ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ.
ಬಸ್ ನಿಲ್ದಾಣ ಬಳಿಯ ಎಟಿಎಂ ಒಡೆದ ದುಷ್ಕರ್ಮಿಗಳು ಎಟಿಎಂನಲ್ಲಿದ್ದ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಮತ್ತು ಸಿಸಿಟಿವಿ ಇಲ್ಲದೆ ಇರುವುದನ್ನು ಗಮನಿಸಿಯೇ ಕಬ್ಬಿಣದ ರಾಡ್ ನಿಂದ ಎಟಿಎಂ ಮಷಿನ್ ಒಡೆದು ಕೃತ್ಯ ಎಸಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಮತ್ತು ಶ್ವಾನ ದಳ ಭೇಟಿ ಪರಿಶೀಲನೆ ನಡೆಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.