ಇಂದಿನಿಂದ ಆಸ್ಟ್ರೇಲಿಯನ್‌ ಓಪನ್‌ : ಪ್ರಧಾನ ಸುತ್ತು ಪ್ರವೇಶಿಸಿದ ಅಂಕಿತಾ

Team Udayavani, Feb 8, 2021, 6:40 AM IST

ಇಂದಿನಿಂದ ಆಸ್ಟ್ರೇಲಿಯನ್‌ ಓಪನ್‌ : ಪ್ರಧಾನ ಸುತ್ತು ಪ್ರವೇಶಿಸಿದ ಅಂಕಿತಾ

ಮೆಲ್ಬರ್ನ್: ಸೋಮವಾರದಿಂದ ಆರಂಭವಾಗಲಿರುವ “ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌’ನಲ್ಲಿ ಭಾರತದ ಭರವಸೆಯ ಆಟಗಾರ್ತಿ ಅಂಕಿತಾ ರೈನಾ ಅವರಿಗೆ ಅದೃಷ್ಟ ಒಲಿದಿದೆ. ಅವರು ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಿದ್ದು, ರೊಮೇನಿಯಾದ ಮೈಕೆಲಾ ಬುಜರ್ನೆಕು ಜತೆಗೂಡಿ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

5ನೇ ಆಟಗಾರ್ತಿ
ಅಂಕಿತಾ ರೈನಾ ಗ್ರ್ಯಾನ್‌ಸ್ಲಾಮ್‌ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದ ಭಾರತದ 5ನೇ ಆಟಗಾರ್ತಿ. ಉಳಿದವರೆಂದರೆ ನಿರುಪಮಾ ಮಂಕಡ್‌ (1971), ನಿರುಪಮಾ ವೈದ್ಯನಾಥನ್‌ (1998), ಶಿಖಾ ಒಬೇ ರಾಯ್‌ (2004) ಮತ್ತು ಸಾನಿಯಾ ಮಿರ್ಜಾ. ಇವರಲ್ಲಿ ನಿರುಪಮಾ ಮಂಕಡ್‌ 1971ರ ವಿಂಬಲ್ಡನ್‌ನಲ್ಲಿ ಆನಂದ್‌ ಅಮೃತ್‌ರಾಜ್‌ ಅವರೊಂದಿಗೆ ಮಿಶ್ರ ಡಬಲ್ಸ್‌ ನಲ್ಲಿ ಆಡಿದ್ದರು. ನಿರುಪಮಾ ವೈದ್ಯನಾಥನ್‌ 1998ರ ಆಸ್ಟ್ರೇಲಿಯನ್‌ ಓಪನ್‌ ಕೂಟದಲ್ಲೇ ಕಣಕ್ಕಿಳಿದಿದ್ದರು. ಶಿಖಾ 2004ರ ಯುಎಸ್‌ ಓಪನ್‌ನಲ್ಲಿ ದ್ವಿತೀಯ ಸುತ್ತು ತಲುಪಿದ್ದರು. ಅನಂತರದ್ದು ಸಾನಿಯಾ ಮಿರ್ಜಾ ಸರದಿ. ಸ್ಟಾರ್‌ ಆಟಗಾರ್ತಿಯಾಗಿ ಮೆರೆದ ಸಾನಿಯಾ 6 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನೆತ್ತಿದ್ದಾರೆ.
ಅಂಕಿತಾ-ಬುಜರೆರ್ಕು ಮೊದಲ ಸುತ್ತಿನಲ್ಲಿ ಆಸ್ಟ್ರೇಲಿ ಯದ ಒಲಿವಿಯಾ ಗಡೇಕಿ-ವೆಲಿಂಡಾ ವೂಲ್‌ಕಾಕ್‌ ವಿರುದ್ಧ ಸೆಣಸಲಿದ್ದಾರೆ.

ಪುರುಷರ ವಿಭಾಗ
ಪುರುಷರ ವಿಭಾಗದಲ್ಲಿ ಭಾರತದ ಮೂವರು ಸ್ಪರ್ಧೆಯಲ್ಲಿದ್ದಾರೆ. ಇವರೆಂದರೆ ಸುಮಿತ್‌ ನಾಗಲ್‌, ದಿವಿಜ್‌ ಶರಣ್‌ ಮತ್ತು ರೋಹನ್‌ ಬೋಪಣ್ಣ.

ಇವರಲ್ಲಿ ಸುಮಿತ್‌ ನಾಗಲ್‌ ಸಿಂಗಲ್ಸ್‌ನಲ್ಲಿ ಸೆಣಸಲಿದ್ದಾರೆ. ಇವರ ಮೊದಲ ಸುತ್ತಿನ ಎದುರಾಳಿ ಲಿಥುವೇನಿಯಾದ ರಿಕಾರ್ಡಸ್‌ ಬೆರಂಕಿಸ್‌.

ಬೋಪಣ್ಣ ಮತ್ತು ಶರಣ್‌ ಡಬಲ್ಸ್‌ ಸ್ಪರ್ಧಿಗಳಾಗಿದ್ದಾರೆ. ಜಪಾನಿನ ಬೆನ್‌ ಮೆಕ್‌ಲಾಕನ್‌ ಮತ್ತು ಸ್ಲೊವಾಕಿಯಾದ ಐಗರ್‌ ಜೆಲೆನಾಯ್‌ ಇವರ ಜತೆಗಾರರಾಗಿದ್ದಾರೆ.

ಟಾಪ್ ನ್ಯೂಸ್

1

ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದ ಭಟ್ರು ಟೀಮ್ : ಶೀಘ್ರದಲ್ಲೇ ಬಾಕಿ ಸುದ್ದಿ

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

ರಾಹುಲ್‌ ಟೀಮ್‌ ಇಂಡಿಯಾದ ದೊಡ್ಡ ಆಸ್ತಿ: ಕಪಿಲ್‌

ರಾಹುಲ್‌ ಟೀಮ್‌ ಇಂಡಿಯಾದ ದೊಡ್ಡ ಆಸ್ತಿ: ಕಪಿಲ್‌

ಆರಂಭಿಕ ಪಂದ್ಯಗಳಿಗೆ ಕೇನ್‌ ವಿಲಿಯಮ್ಸನ್‌ ಗೈರು?

ಆರಂಭಿಕ ಪಂದ್ಯಗಳಿಗೆ ಕೇನ್‌ ವಿಲಿಯಮ್ಸನ್‌ ಗೈರು?

MUST WATCH

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ಹೊಸ ಸೇರ್ಪಡೆ

ನಿರ್ಗತಿಕ ಮಕ್ಕಳಿಗಾಗಿ ತಲೆಯೆತ್ತುತ್ತಿದೆ “ಚಿಣ್ಣರ ಧಾಮ”

ನಿರ್ಗತಿಕ ಮಕ್ಕಳಿಗಾಗಿ ತಲೆಯೆತ್ತುತ್ತಿದೆ “ಚಿಣ್ಣರ ಧಾಮ”

1

ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದ ಭಟ್ರು ಟೀಮ್ : ಶೀಘ್ರದಲ್ಲೇ ಬಾಕಿ ಸುದ್ದಿ

9

ಬಾಂಗ್ಲಾ ಹತ್ಯಾಕಾಂಡಕ್ಕೆ ಖಂಡನೆ

8

ರಾಜ್ಯೋತ್ಸವ: ಸರಳ ಆಚರಣೆಗೆ ನಿರ್ಧಾರ

ನವೆಂಬರ್‌ನಲ್ಲೇ 150 ಐಟಿಐ ಉನ್ನತೀಕರಣ

ನವೆಂಬರ್‌ನಲ್ಲೇ 150 ಐಟಿಐ ಉನ್ನತೀಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.