
ಬಜರಂಗ್, ವಿನೇಶ್ ವಿದೇಶಿ ತರಬೇತಿಗೆ ಒಪ್ಪಿಗೆ
Team Udayavani, Mar 22, 2023, 8:11 AM IST

ನವದೆಹಲಿ: ಕ್ರೀಡಾ ಸಚಿವಾಲಯದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೊಜನೆಯಡಿ ಖ್ಯಾತ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶ್ ಪೋಗಟ್ ಅವರ ವಿದೇಶದಲ್ಲಿ ತರಬೇತಿ ಪಡೆಯುವ ಮನವಿಗೆ ಒಪ್ಪಿಗೆ ನೀಡಲಾಗಿದೆ.
ಬಜರಂಗ್ ಕಿರ್ಗಿಸ್ಥಾನದ ಚೋ ನ್-ಅಟಾದಲ್ಲಿ 16 ದಿನಗಳ ಕಾಲ ತರಬೇತಿ ಪಡೆಯಲು ವಿನಂತಿಸಿದರೆ, ವಿನೇಶ್ ಪೋಲೆಂಡ್‌ನ ಸ್ಪಾಲಾದಲ್ಲಿರುವ ಒಲಿಂಪಿಕ್ ತಯಾರಿ ಕೇಂದ್ರದಲ್ಲಿ 11 ದಿನಗಳ ಕಾಲ ತರಬೇತಿ ಪಡೆಯಲು ಬಯಸಿದ್ದರು.
ಕ್ರೀಡಾಪಟುಗಳ ವಿಮಾನ ಟಿಕೆಟ್, ತರಬೇತಿ, ಊಟ ಮತ್ತು ವಸತಿ ವೆಚ್ಚ ಸೇರಿದಂತೆ ಶಿಬಿರದ ವೆಚ್ಚಗಳು ಮತ್ತು ವಿಮಾನ ನಿಲ್ದಾಣ ವರ್ಗಾವಣೆ, ವಿಮೆ ಮತ್ತು ಆಂತರಿಕ ಪ್ರಯಾಣದಂತಹ ವಿವಿಧ ವೆಚ್ಚಗಳು, ಇತರ ವೆಚ್ಚಗಳು ಆರ್ಥಿಕ ನೆರವಿನಲ್ಲಿ ಒಳಗೊಂಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ವಿನೇಶ್ ಅವರ ಜತೆಗಾರ್ತಿ ಸಂಗೀತಾ ಪೋಗಟ್ ಮತ್ತು ಫಿಸಿಯೋಥೆರಪಿ, ಅಶ್ವಿನಿ ಜೀವನ್ ಪಾಟೀಲ್ ಮತ್ತು ಬಜರಂಗ್ ಅವರ ಕೋಚ್ ಸುಜೀತ್ ಮಾನ್, ಭೌತಚಿಕಿತ್ಸಕ ಆನಂದ್ ಕುಮಾರ್ ಮತ್ತು ಕಾಝಿ ಕಿರಣ್ ಮುಸ್ತಫಾ ಹಸನ್ ಅವರ ವೆಚ್ಚವನ್ನು ಸಹ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೊಜನೆ ಭರಿಸಲಿದೆ.
ಕುಸ್ತಿಗಾಗಿ ಮೇಲುಸ್ತುವಾರಿ ಸಮಿತಿಯು ನಡೆಸಿದ ಆಯ್ಕೆ ಪ್ರಯೋಗಗಳ ಆಧಾರದ ಮೇಲೆ, ಮುಂಬರುವ ಸೀನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಭಾರತೀಯ ತಂಡಕ್ಕಾಗಿ ರಾಷ್ಟ್ರೀಯ ತರಬೇತಿ ಶಿಬಿರವನ್ನು ಸಹ ನಡೆಸಲಾಗುವುದು.
ರಾಷ್ಟ್ರೀಯ ಶಿಬಿರವು ಭಾರತೀಯ ಕ್ರೀಡಾ ಪ್ರಾಧಿಕಾರದ ಸೋನಿಪತ್ ಪ್ರಾದೇಶಿಕ ಕೇಂದ್ರದಲ್ಲಿ ನಡೆಯಲಿದೆ ಮತ್ತು ಈ ಶಿಬಿರದಲ್ಲಿ 108 ಕುಸ್ತಿಪಟುಗಳು ಇರಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surfing: ಮೊದಲ ದಿನ ಕರ್ನಾಟಕ, ತಮಿಳುನಾಡು ಪಾರಮ್ಯ: ಗಮನ ಸೆಳೆದ ಕಿಶೋರ್, ತಯಿನ್ ಅರುಣ್

French Open ಗ್ರ್ಯಾನ್ ಸ್ಲಾಮ್: ಜೊಕೋವಿಕ್, ರಿಬಕಿನಾ ಮುನ್ನಡೆ

Khelo India: ಆಳ್ವಾಸ್‌ಗೆ ಪದಕಗಳ ಸರಮಾಲೆ

Under-20 World Cup Football: ಇಟಲಿ, ನೈಜೀರಿಯ ಕ್ವಾರ್ಟರ್ ಫೈನಲಿಗೆ

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ