ಬಾಲಚಂದ್ರ ಜಾರಕಿಹೊಳಿ ಪರ 20 ಶಾಸಕರು
Team Udayavani, Mar 6, 2021, 7:10 AM IST
ಬೆಂಗಳೂರು: ರಮೇಶ್ ಜಾರಕಿಹೊಳಿ ತ್ಯಜಿಸಿರುವ ಜಲಸಂಪನ್ಮೂಲ ಖಾತೆಯನ್ನು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಿ ಎಂಬುದಾಗಿ ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ಸಿಎಂ ಬಿಎಸ್‌ವೈ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಈ ಸಂಬಂಧ ಶಾಸಕರು ಸಭೆ ಸೇರಿ ಚರ್ಚಿಸಿದ್ದಾರೆ. ಆದರೆ ಈಗಲೇ ಸಚಿವ ಸ್ಥಾನ ನೀಡಿದರೆ ವಿರೋಧ ಉಂಟಾಗಬಹುದು ಎಂಬುದು ಬಿಜೆಪಿಯ ಆತಂಕ ಎನ್ನಲಾಗಿದೆ.
ರಮೇಶ್ ಪರ ಶಾಸಕರು ಬಿಜೆಪಿ ವರಿಷ್ಠರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಸಿಎಂ ಮೇಲೂ ಒತ್ತಡ ಹೇರಲು ಮುಂದಾಗಿದ್ದಾರೆ. ಬಜೆಟ್ ಮಂಡನೆಯ ಬಳಿಕ ಸಿಎಂ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ ಸೋಮವಾರ ಸಂಜೆ ಮತ್ತೂಂದು ಸಭೆ ಸೇರಲು ಶಾಸಕರು ನಿರ್ಧರಿಸಿದ್ದಾರೆ.
ರಾಜೀನಾಮೆ ಅಸ್ತ್ರ?
ಬಾಲಚಂದ್ರ ಅವರಿಗೆ ಸ್ಥಾನ ನೀಡದಿದ್ದರೆ ಕೆಲವು ಶಾಸಕರು ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದ್ದಾರೆ. ಪಕ್ಷದ ವರಿಷ್ಠರು ಅನುಮತಿ ನೀಡಿದರೆ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಸಿಎಂ ಸಹಮತ ಹೊಂದಿದ್ದಾರೆ ಎನ್ನಲಾಗಿದೆ.
5 ಕೋ.ರೂ. ಡೀಲ್: ಎಚ್‌ಡಿಕೆ
ಮೈಸೂರು : ದೊಡ್ಡವರು ಎನ್ನಿಸಿಕೊಂಡವರಿಂದಲೇ ಅಶ್ಲೀಲ ಸಿ.ಡಿ. ಬಿಡುಗಡೆ ಸಂಚು ನಡೆದಿದ್ದು , 5 ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಆರೋಪಿಸಿದ್ದಾರೆ. ಇಂಥ ಬ್ಲ್ಯಾಕ್ ಮೇಲ್ ನಿಲ್ಲಬೇಕು. ಇವು ಹೇಸಿಗೆ ಹುಟ್ಟಿಸುವ ಸ್ಥಿತಿ ನಿರ್ಮಾಣ ಮಾಡಿವೆ ಎಂದು ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್
ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ
ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿದೆ, ವಿಶೇಷ ಕ್ರಮದ ಅವಶ್ಯಕತೆಯಿದೆ: ಸುಧಾಕರ್
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ನಿಧನ
ಯಡಿಯೂರಪ್ಪ ಆರೋಗ್ಯ ಸ್ಥಿರ: ಆಸ್ಪತ್ರೆಯಲ್ಲಿ ಪುಸ್ತಕ ಓದುತ್ತಿದ್ದಾರೆ ಸಿಎಂ ಬಿಎಸ್ ವೈ