ಬಂದಾರು ಗ್ರಾ.ಪಂ.ಗೆ ಆಜಾದಿಕ ಅಮೃತ್‌ ಮಹೋತ್ಸವ್‌ ಗೌರವ


Team Udayavani, Mar 17, 2021, 4:10 AM IST

ಬಂದಾರು ಗ್ರಾ.ಪಂ.ಗೆ ಆಜಾದಿ ಕ ಅಮೃತ್‌ ಮಹೋತ್ಸವ್‌ ಗೌರವ

ಬೆಳ್ತಂಗಡಿ: ಗ್ರಾಮ ಪಂಚಾಯತ್‌ ಮಿಷನ್‌ ಅಂತ್ಯೋದಯದಡಿ 2015ರಿಂದ 2020ರ ವರೆಗೆ ಗ್ರಾಮ ಮಟ್ಟದ ಜನಜೀವನ ಸುಧಾರಣೆಗೆ ಕೈಗೊಂಡ ಅತ್ಯುತ್ತಮ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದ 5 ಗ್ರಾ.ಪಂ.ಗಳ ಪೈಕಿ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ.ನ್ನು ಆಯ್ಕೆ ಮಾಡಿದೆ.

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರೈಸುವ ಹಿನ್ನೆಲೆಯಲ್ಲಿ 75 ವಾರಗಳ ಆಜಾದಿಕ ಅಮೃತ್‌ ಮಹೋತ್ಸವ್‌ ಕಾರ್ಯಕ್ರಮದಡಿ ಭಾರತ ಸರಕಾರವು 75 ಗ್ರಾ.ಪಂ.ನ್ನು ವಿಶೇಷವಾಗಿ ಆಯ್ಕೆ ಮಾಡಿರುವುದರಲ್ಲಿ ಬಂದಾರು ಕೂಡಾ ಸ್ಥಾನ ಪಡೆದಿದೆ.

ಬಂದಾರು ಗ್ರಾ.ಪಂ. ಕಾರ್ಯ ಯೋಜನೆೆ
ಬಂದಾರು ಹಾಗೂ ಮೊಗ್ರು ಗ್ರಾ.ಪಂ.ನ್ನು ಒಳಗೊಂಡು 6,163 ಜನಸಂಖ್ಯೆ ಹೊಂದಿರುವ ಗ್ರಾಮವು ಒಂದೊಮ್ಮೆ ಕುಗ್ರಾಮದಂತೆ ಗೋಚರಿಸಿತ್ತು. ಬದಲಾದ ಸನ್ನಿವೇಶದಲ್ಲಿ ಬಂದಾರು ಗ್ರಾ.ಪಂ. ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ಉದ್ಯೋಗ ಖಾತರಿ ಹಾಗೂ ವಿವಿಧ ಯೋಜನೆಯಡಿ ಮೂರು ಅಂಗನವಾಡಿಗಳಾದ ಕುಂಟಾಲಪಲ್ಕೆ 12 ಲಕ್ಷ ರೂ., ಪೇರಲ್ದಪಲ್ಕೆ-9 ಲಕ್ಷ ರೂ., ಉಳಿಯ ಅಂಗನವಾಡಿ 3.98 ಲಕ್ಷ ರೂ.ನಲ್ಲಿ ನಿರ್ಮಿಸಲಾಗಿದೆ.

ಬಂದಾರು ಗ್ರಾಮ ಪಂಚಾಯತ್‌, ಬೈಪಾಡಿ, ಪೇರಲ್ದಪಲ್ಕೆ ಒಳಚರಂಡಿ ನಿರ್ಮಾಣ, ಪ್ರತಿ ಶನಿವಾರ ಗ್ರಾಮದ ಶಾಲಾ ವಠಾರ, ಪೇಟೆ, ಪ್ರಮುಖ ಆಯಕಟ್ಟು ಪ್ರದೇಶಗಳಲ್ಲಿ ಶಾಲಾ ಮಕ್ಕಳ ಜತೆಗೂಡಿ ಸ್ವತ್ಛತಾ ಸಪ್ತಾಹ ಹಮ್ಮಿಕೊಳ್ಳುತ್ತಾ ಬಂದಿದೆ. ಇನ್ನುಳಿದಂತೆ ರಕ್ತದಾನ ಶಿಬಿರ, ಆರೋಗ್ಯ ಮೇಳ, ಸರಕಾರಿ ಯೋಜನೆ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಮಾಹಿತಿ ಕಾರ್ಯಾಗಾರ ನಡೆಸಿ ಸವಲತ್ತು ಮನೆ ಮನೆಗೆ ತಲುಪಿಸವಲ್ಲಿ ಮಹತ್ತರ ಶ್ರಮ ವಹಿಸಿದೆ.

14, 15ನೇ ಹಣಕಾಸು ಯೋಜನೆಯಡಿ 5 ಪ್ರಯಾಣಿಕರ ತಂಗುದಾಣ, ಪ.ಜಾತಿ/ಪಂಗಡದ ಮಂದಿಗೆ ನೀರಿನ ಟ್ಯಾಂಕ್‌ ವಿತರಣೆ, ಅಂಗವಿಕಲರಿಗೆ ಸಲಕರಣೆ, 30 ಕುಟುಂಬಗಳಿಗೆ ಶೌಚಾಲಯ, ಮುಗೇರಡ್ಕ ಸಮೀಪ ನೀರಿನ ಟ್ಯಾಂಕ್‌ ನಿರ್ಮಿಸಿ 40 ಮನೆಗಳ ನೀರಿನ ದಾಹ ತಣಿಸಿದೆ.

ಉದ್ಯೋಗ ಖಾತರಿ ಯೋಜನೆ ಸಾಧನೆ
ಉದ್ಯೋಗ ಖಾತರಿ ಯೋಜನೆಯಡಿ ಹತ್ತರ ಸಾಧನೆ ತೋರಿದ್ದು, ಬಂದಾರು ಪಾನೆಕಲ್ಲು ಎಂಬಲ್ಲಿ ಪ.ಜಾ.ಯ 2 ಲಕ್ಷ ರೂ. ವೆಚ್ಚದಲ್ಲಿ ರುದ್ರಭೂಮಿ, ಶ್ರೀರಾಮನಗರದಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸಿದೆ. 5 ಶಾಲೆಗಳಿಗೆ ಶೌಚಾಲಯ ನಿರ್ಮಾಣ, ಮಾತ್ರವಲ್ಲದೆ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಂಡ ಜಲಮರುಪೂರಣ ಚಿಂತನೆಯಡಿ ಗ್ರಾಮ ಪಂಚಾಯತ್‌ ಸೇರಿದಂತೆ 7 ಮನೆಗಳಿಗೆ ಜಲಮರುಪೂರಣ ಘಟಕ ಅಳವಡಿಕೆ, ಅನೇಕ ಶಾಲೆ, ಮನೆಗಳಲ್ಲಿ ಖಾಸಗಿ ಜಲಮರುಪೂರಣ ಘಟಕ, 40ಕ್ಕೂ ಅಧಿಕ ಬಾವಿ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದೆ. ಕಜೆಕೋಡಿ ಪ.ಜಾತಿ ಕಾಲನಿ, ಮೊಗ್ರು ಗ್ರಾಮದ ಕೊಲಬೆಗೆ ಸಾರ್ವಜನಿಕ ಕೊಳವೆ ಬಾವಿ, ನೀರಿನ ವ್ಯವಸ್ಥೆ ಕಲ್ಪಿಸಿದೆ.

621 ಮಂದಿಗೆ 94ಸಿ ವಿತರಣೆ
ಸರಕಾರದ ವಿವಿಧ ಯೋಜನೆ ಅನುಷ್ಠಾನದ ಜತೆಗೆ 5 ವರ್ಷಗಳಲ್ಲಿ 94ಸಿ ಯೋಜನೆಯಡಿ 621 ಮಂದಿಗೆ ಹಕ್ಕುಪತ್ರ, 9/11ಎ ಮುಖೇನ 189 ಮಂದಿಗೆ ಹಕ್ಕುಪತ್ರ ವಿತರಿಸಿದ ಹೆಗ್ಗಳಿಕೆ ಗ್ರಾ.ಪಂ.ಗೆ ಸಲ್ಲುತ್ತದೆ. ಬಸವ ವಸತಿ ಯೋಜನೆಯಡಿ 75 ಮನೆಗಳ ನಿರ್ಮಾಣ, ಬಂದಾರು ಗ್ರಾಮದಲ್ಲಿ ನಿವೇಶನ ರಹಿತರಿಗೆ 14 ಸೈಟ್‌ ಗುರುತಿಸಲಾಗಿದೆ. 30 ಕಿ.ಮೀ. ನಷ್ಟು ಕಾಂಕ್ರೀಟ್‌ ಸೇರಿದಂತೆ ಒಳರಸ್ತೆಗಳ ಅಭಿವೃದ್ಧಿ, ಉದ್ಯೋಗ ಖಾತರಿ ಯೋಜನೆಯಡಿ ಬಂದಾರು ಗ್ರಾಮದ ಬಂದಾರು, ಬಾಲಂಪಾಡಿ, ಕಜೆ, ಕುಂಬುಡಂಗೆ, ಮೊಗ್ರು ಗ್ರಾಮದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ನೂರಾರು ಎಕ್ರೆ ಕೃಷಿ ಭೂಮಿಗೆ ನೀರಿನ ಆಶ್ರಯ ನೀಡಿದೆ. ಮಾತ್ರವಲ್ಲದೆ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಹಾಗೂ ವಾರ್ಡ್‌ ಆಧರಿಸಿದ ಸದಸ್ಯರ ವಾಟ್ಸ್‌ಆ್ಯಪ್‌ ಬಳಗ ರಚಿಸಿ ಪ್ರತಿ ಮನೆಗೆ ಗ್ರಾ.ಪಂ. ಕಾರ್ಯಕ್ರಮದ, ಸರಕಾರದ ಯೋಜನೆ ಮಾಹಿತಿ ನೀಡುತ್ತಿದ್ದು, ಜತೆಗೆ ಫ್ಲೆಕ್ಸ್‌, ಕರಪತ್ರ ಹಂಚುವ ಕೆಲಸ ಮಾಡಿದೆ.

ಅಭಿನಂದನೆ
ಮಾ. 12ರಂದು ಭಾರತ ಸರಕಾರದ ಪಂಚಾಯತ್‌ ರಾಜ್‌ ಸಚಿವಾಲಯದ ಕಾರ್ಯದರ್ಶಿ ಆಯ್ಕೆಯಾದ ರಾಷ್ಟ್ರದ ಎಲ್ಲ ಗ್ರಾ.ಪಂ.ನೊಂದಿಗೆ ವೆಬಿನಾರ್‌ ಮುಖೇನ ಸಭೆ ನಡೆಸಿ ಅಭಿನಂದಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಆಯ್ಕೆಯಾದ ಬಂದಾರು ಗ್ರಾ.ಪಂ. 2015ರಿಂದ 2020ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಉದಯ ಬಿ.ಕೆ., ಉಪಾಧ್ಯಕ್ಷೆಯಾಗಿದ್ದ ಚಂದ್ರಾವತಿ ಕೆ.ವೈ. ಹಾಗೂ ಸದಸ್ಯರು, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮೋಹನ್‌ ಬಂಗೇರ, ಸಿಬಂದಿ ಪ್ರಸಕ್ತ ಸಾಲಿನ ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷ ಗಂಗಾಧರ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.