ಸೈಕಲ್ ಸಾಧಕಿ ಜ್ಯೋತಿಗೆ ಇವಾಂಕಾ ಟ್ರಂಪ್ ಅಭಿನಂದನೆ
Team Udayavani, May 23, 2020, 9:59 PM IST
ವಾಷಿಂಗ್ಟನ್: ಲಾಕ್ಡೌನ್ ನಡುವೆ ತನ್ನ ಗಾಯಾಳು ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಗುರುಗ್ರಾಮದಿಂದ 1,200 ಕಿ.ಮೀ. ದೂರದ ಬಿಹಾರದ ಸ್ವಗ್ರಾಮಕ್ಕೆ ಕರೆತಂದ 15ರ ಹರೆಯದ ಬಾಲಕಿ ಜ್ಯೋತಿ ಕುಮಾರಿ ಸಾಹಸವೀಗ ಅಮೆರಿಕದ ವೈಟ್ಹೌಸ್ನಲ್ಲೂ ಪ್ರತಿಧ್ವನಿಸಿದೆ. ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ, ವೈಟ್ಹೌಸ್ನ ಹಿರಿಯ ಸಲಹೆಗಾರ್ತಿ ಇವಾಂಕಾ ಟ್ರಂಪ್ ಅವರ ಪ್ರಶಂಸೆಗೆ ಪಾತ್ರವಾಗಿದೆ.
“ಇದೊಂದು ವಾತ್ಸಲ್ಯ ಹಾಗೂ ಸಹಿಷ್ಣುತೆಯ ಸುಮಧುರ ಹೆಜ್ಜೆ’ ಎಂಬುದಾಗಿ ಇವಾಂಕಾ ಟ್ರಂಪ್ ಹೊಗಳಿದ್ದಾರೆ. ತಂದೆಯೊಂದಿಗೆ ಮೇ 10ರಂದು ಸೈಕಲ್ ಪಯಣ ಆರಂಭಿಸಿದ್ದ ಜ್ಯೋತಿ, ಮೇ 16ರಂದು ಸ್ವಗ್ರಾಮ ತಲುಪಿದ್ದರು. 8ನೇ ತರಗತಿಯ ಈ ವಿದ್ಯಾರ್ಥಿನಿಯ ಸಾಹಸವನ್ನು ಗಮನಿಸಿದ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಸಿಎಫ್ಐ), ಆಕೆಯನ್ನು ಟ್ರಯಲ್ಸ್ಗೆ ಆಹ್ವಾನಿಸಿತ್ತು. ಈಗ ಜ್ಯೋತಿ ಕುಮಾರಿ ಟ್ರಯಲ್ಸ್ನಲ್ಲೂ ಉತ್ತೀರ್ಣರಾಗಿದ್ದು, ಇನ್ನು ಟ್ರೇನಿಯಾಗಿ ಕರ್ತವ್ಯ ನಿಭಾಯಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್