ತಪ್ಪಿದ ಅವಘಡ : ಬೆಂಗಳೂರಿಂದ ಹೊರಟ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ
Team Udayavani, Nov 27, 2021, 1:00 PM IST
ನಾಗ್ಪುರ : ಬೆಂಗಳೂರು-ಪಾಟ್ನಾ ವಿಮಾನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಶನಿವಾರ ನಡೆದಿದೆ.
139 ಪ್ರಯಾಣಿಕರೊಂದಿಗೆ ಬೆಂಗಳೂರಿನಿಂದ ಪಾಟ್ನಾಗೆ ಹೊರಟಿದ್ದ ಗೋಏರ್ ವಿಮಾನವು ಇಂಜಿನ್ ಒಂದರಲ್ಲಿ ದೋಷ ಕಂಡು ಬಂದ ನಂತರ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋಏರ್ ವಿಮಾನದ ಪೈಲಟ್ ನಾಗ್ಪುರ ಎಟಿಸಿಯನ್ನು ಸಂಪರ್ಕಿಸಿ, ವಿಮಾನದ ಇಂಜಿನ್‌ಗಳಲ್ಲಿ ಒಂದರಲ್ಲಿ ಸಮಸ್ಯೆ ಇದೆ ಎಂದು ತಿಳಿಸಿ ತುರ್ತು ಭೂಸ್ಪರ್ಶಕ್ಕೆ ಮನವಿ ಮಾಡಿದರು. ಬೆಳಗ್ಗೆ 11.15ಕ್ಕೆ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ರನ್‌ವೇಗಳು, ಅಗ್ನಿಶಾಮಕ ಟೆಂಡರ್‌ಗಳು, ವೈದ್ಯರು, ಆಂಬ್ಯುಲೆನ್ಸ್‌ಗಳನ್ನು ಲಭ್ಯವಾಗುವಂತೆ ಮಾಡಿ, ಪೊಲೀಸರೊಂದಿಗೆ ಸಮನ್ವಯದ ಅಗತ್ಯವಿರುವ ಪೂರ್ಣ ಪ್ರಮಾಣದ ತುರ್ತುಸ್ಥಿತಿ ಎಂದು ಘೋಷಿಸಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವು. ಅದೃಷ್ಟವಶಾತ್, ವಿಮಾನ ಸುರಕ್ಷಿತ ಲ್ಯಾಂಡಿಂಗ್ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋವಾದಲ್ಲಿ ಸನ್ಬರ್ನ್ ಫೆಸ್ಟಿವಲ್ ಆಯೋಜನೆಗೆ ಅವಕಾಶವಿಲ್ಲ : ಸಚಿವ ಖಂವಟೆ
ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ
ಭದ್ರತಾಲೋಪ? ತಮಿಳುನಾಡಿನಲ್ಲಿ ಬಿಜೆಪಿ ಮುಖಂಡನ ಹತ್ಯೆ, ಎಐಡಿಎಂಕೆ ಆಕ್ರೋಶ
ಮತ್ತೊಂದು ಶಾಕ್: ಹಿರಿಯ ನಾಯಕ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಗುಡ್ ಬೈ, ಎಸ್ಪಿ ಬೆಂಬಲ
ಮತ್ತೆ ಪ್ರಧಾನಿ ಮೋದಿ ಭೇಟಿ ತಪ್ಪಿಸಿಕೊಂಡ ತೆಲಂಗಾಣ ಸಿಎಂ ಕೆಸಿಆರ್