ಬಿಜೆಪಿ ನನಗೆ ಎರಡು ಸಲ ಮಂತ್ರಿ ಮಾಡಿದೆ, ಕಾಂಗ್ರೆಸ್ ಗೆ ಹೋಗುವುದಿಲ್ಲ: ಯೋಗೇಶ್ವರ್
Team Udayavani, Jan 25, 2022, 5:38 PM IST
ಬೆಂಗಳೂರು : ಬಿಜೆಪಿ ನನಗೆ ಎರಡು ಸಲ ಮಂತ್ರಿ ಮಾಡಿದೆ, ಪರಿಷತ್ ಸದಸ್ಯನನ್ನಾಗಿ ಮಾಡಿದೆ, ನನ್ನ ಅಚಲ ವಿಶ್ವಾಸವನ್ನು ಯಾರೂ ಅಲುಗಾಡಿಸಲು ಆಗುವುದಿಲ್ಲ, ನಾನು ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದು ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಇದು ಚುನಾವಣಾ ವರ್ಷ ಇರುವುದರಿಂದ ಇಂತಹ ಹೇಳಿಕೆಗಳು ಸಹಜ.ಇಲ್ಲಿಯವರೆಗೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಹೋದವರು ಕಡಿಮೆ. ಕಳೆದೆರಡು ವರ್ಷದ ಹಿಂದೆ ಕಾಂಗ್ರೆಸ್, ಜೆಡಿಎಸ್ ನಿಂದ ಬೇಸತ್ತು ಹಲವರು ಬಿಜೆಪಿಗೆ ಬಂದರು. ಈಗ ಸಿದ್ದರಾಮಯ್ಯ, ಡಿಕೆಶಿ ಸುಮ್ಮನೆ ಗೊಂದಲ ಸೃಷ್ಟಿಸುವ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸೇರುವ ವಿಚಾರ ತಳ್ಳಿಹಾಕಿದ ಯೋಗೇಶ್ವರ್, ಮುಂದಿನ ದಿನಗಳಲ್ಲಿ ನಾನು ಇದರ ಬಗ್ಗೆ ಸುದ್ದಿಗೋಷ್ಠಿ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದರು.