ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ :ಪೊಲೀಸರ ವಿರುದ್ಧ ಘೋಷಣೆ, ರಸ್ತೆ ತಡೆ
Team Udayavani, Jan 7, 2022, 1:08 PM IST
ಹುಬ್ಬಳ್ಳಿ: ಪ್ರಧಾನಿ ಅವರಿಗಾದ ಭದ್ರತಾ ಲೋಪ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಪೊಲೀಸರ ವಿರುದ್ಧ ತಿರುಗಿದ ಘಟನೆ ಶುಕ್ರವಾರ ನಡೆಯಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್ ನಲ್ಲಿ ಸರಕಾರಿ ಕಾರ್ಯಕ್ರಮಕ್ಕೆ ತೆರಳಿದಾಗ ಅಲ್ಲಿನ ಸರಕಾರ ಸೂಕ್ತ ಭದ್ರತೆ ನೀಡಿಲ್ಲ. ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನಾ ನಿರತರು ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದರು. ನಂತರ ಕಾರ್ಯಕರ್ತನೊಬ್ಬ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಅಳವಡಿಸಿದ್ದ ನಾಯಕರ ಭಾವಚಿತ್ರಗಳಿಗೆ ಸಗಣಿ ಎರಚುವ ಪ್ರಯತ್ನ ಮಾಡಿದ. ಇದರ ನಡುವೆ ಕಾರ್ಯಕನೊಬ್ಬ ಪೊಲೀಸರಿಂದ ನುಸಳಿ ಭಾವಚಿತ್ರಗಳಿಗೆ ಸಗಣಿ ಹಚ್ಚಲು ಮುಂದಾದನು.ಕುಪಿತಗೊಂಡ ಪೊಲೀಸ್ ಅಧಿಕಾರಿ ಪ್ರಶ್ನೆ ಮಾಡಿದರು.ಅಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ಪ್ರಶ್ನೆ ಮಾಡಿದ್ದು ಯಾಕೆ ಎಂದು ಪೊಲೀಸರ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿದರು.
ಪಕ್ಷದ ಹಿರಿಯ ಮುಖಂಡರು ಸಮಾಧಾನ ಪಡಿಸಿದರೂ ಕಿವಿಗೊಡದೆ ರಸ್ತೆ ತಡೆಗೆ ಮುಂದಾದರು.ಪ್ರತಿಭಟನೆ ಮುಗಿಸಿ ತೆರಳುವ ವೇಳೆಗೆ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಆಗಮಿಸುತಿದ್ದಂತೆ ಪುನಃ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಾಲೇಜು ಅಧ್ಯಕ್ಷ,ಪ್ರಾಂಶುಪಾಲರ ಮೇಲೆ ಎಫ್ಐಆರ್
ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ವಯಸ್ಕ ಸಂಬಂಧಿಯಿಂದಲೇ ಅತ್ಯಾಚಾರ!
ದೇಶಭಕ್ತಿ ಕಿಚ್ಚು ಹೊತ್ತಿಸಿದ 9 ಕಿಮೀ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ
ತುಪ್ಪರಿಯಿಂದ 10 ಸಾವಿರ ಹೆಕ್ಟೆರ್ಗೆ ನೀರಾವರಿ
ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ತಿಳಿದುಕೊಂಡಿಲ್ಲ; ಜಗದೀಶ್ ಶೆಟ್ಟರ್
MUST WATCH
ಹೊಸ ಸೇರ್ಪಡೆ
ಕೋಡಿ ಹೊಸಬೆಂಗ್ರೆಯಲ್ಲಿ ಕಡಲ್ಕೊರೆತ : ಮನೆ, ರಸ್ತೆ ಅಪಾಯದಲ್ಲಿ; ತಾತ್ಕಾಲಿಕ ಪರಿಹಾರ
ಎಪಿಕ್ ಕಾರ್ಡ್ಗೆ ಆಧಾರ್ ನಂಬರ್ ಲಿಂಕ್ : ಪ್ರಕ್ರಿಯೆ ಚುರುಕುಗೊಳಿಸಲು ಡಿಸಿ ಸೂಚನೆ
ಹೆಚ್ಚುತ್ತಿರುವ ಅಪರಾಧ ಪ್ರಕರಣ : ಮತ್ತೆ ವಾಹನಗಳ ಟಿಂಟ್ ಮೇಲೆ ಪೊಲೀಸ್ ಕಣ್ಣು
ಫಾಝಿಲ್ ಹತ್ಯೆ ಪ್ರಕರಣ : ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದಾತ ಪೊಲೀಸರ ವಶಕ್ಕೆ
ವಿವೋ ವಿ25 ಪ್ರೋ ಫೋನ್ ಬಿಡುಗಡೆ; ಕಲರ್ ಚೇಂಜ್ ಮಾಡಿಕೊಳ್ಳುವ ಫೋನ್