ಡಿಎಂಕೆ ಮಾಜಿ ಕೌನ್ಸಿಲರ್ ನಿಂದ ಹಲ್ಲೆ: ಬಿಜೆಪಿ ಕಾರ್ಯಕರ್ತ ಸಾವು
Team Udayavani, Dec 31, 2021, 7:18 PM IST
ಈರೋಡ್ : ಡಿಎಂಕೆಗೆ ಸೇರಿದ ಮಾಜಿ ಕೌನ್ಸಿಲರ್ ಒಬ್ಬ ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು,ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ವೃತ್ತಿಯಲ್ಲಿ ಟೈಲರ್ ಆಗಿದ್ದ ವಡಿವೇಲ್ (50) ಡಿಎಂಕೆ ತೊರೆದು ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ್ದರು. ಇದು ಮಾಜಿ ಪಾಲಿಕೆ ಸದಸ್ಯ ಈಶ್ವರಮೂರ್ತಿ ಅವರನ್ನು ಕೆರಳಿಸಿದೆ ಎನ್ನಲಾಗಿದೆ. ಇಬ್ಬರ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ವಡಿವೇಲ್ ತನ್ನ ಸ್ನೇಹಿತರೊಂದಿಗೆ ಗುರುವಾರ ಇಲ್ಲಿನ ತಾಳವುಮಲೈನಲ್ಲಿ ನಿಂತಿದ್ದಾಗ ಈಶ್ವರಮೂರ್ತಿ ವಾಗ್ವಾದಕ್ಕಿಳಿದು ವಡಿವೇಲ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ವಡಿವೇಲ್‌ಗೆ ಗಾಯಗಳಾಗಿ ಕೆಳಗೆ ಬಿದ್ದಿದ್ದಾರೆ. ಸ್ನೇಹಿತರು ವಡಿವೇಲರನ್ನು ರಕ್ಷಿಸಿ ನೀರು ಕೊಟ್ಟು ಮನೆಗೆ ಕರೆದೊಯ್ದಿದ್ದರು. ಮನೆಯಲ್ಲಿ ಮಲಗಿದ್ದವರು ಇಂದು ಬೆಳಗ್ಗೆ ಶವವಾಗಿ ಬಿದ್ದಿರುವುದನ್ನು ಅವರ ಪತ್ನಿ ಕಂಡಿದ್ದಾರೆ.
ಅವರು ಪೊಲೀಸರಿಗೆ ದೂರು ನೀಡಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ. ಸಾವಿನ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು ಈಶ್ವರಮೂರ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಮರಣೋತ್ತರ ಪರೀಕ್ಷೆ ವರದಿ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ನೀವು ಬಿಜೆಪಿಗೆ ಸೇರಿ, ನಾವು ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ : ರಾವತ್
13,940 ಮೊಳೆಗಳಲ್ಲಿ ಕಲಾಕೃತಿ : India Book of Records ಗೆ ದಾಖಲಾದ ಕಾಪುವಿನ ಶಶಾಂಕ್
ಮನುಷ್ಯನ ಮನಸ್ಸು ಒಂದೇ ರೀತಿ ಇರುವುದಿಲ್ಲ.. ಯಾಕೆ ?
ಹೊಸ ಸೇರ್ಪಡೆ
ಇಂದು ಶ್ರೀಲಂಕಾ- ಭಾರತ ದ್ವಿತೀಯ ಟಿ20: ಅಗ್ರ ಕ್ರಮಾಂಕದತ್ತ ಗಮನ
ಬಾಲ್ಯವಿವಾಹ ತಡೆಗೆ ರಾಜ್ಯಾದ್ಯಂತ ಸ್ಫೂರ್ತಿ: ಹೆಚ್ಚುತ್ತಿರುವ ಪಿಡುಗು ನಿಯಂತ್ರಣಕ್ಕೆ ಈ ಕ್ರಮ
ಕಪಿಲ್ದೇವ್ ಸಾರಥ್ಯದ ವಿಶ್ವಕಪ್ ಗೆಲುವಿಗೆ 39ರ ಸಂಭ್ರಮ
ಮುಳುಗಿದ ಪ್ರಿನ್ಸೆಸ್ ಮಿರಾಲ್ ಹಡಗು: ಇನ್ನು ತೈಲ ಸೋರಿಕೆ ತಡೆಯುವ ಸವಾಲು
ಏಕನಾಥ ಶಿಂಧೆ ಪರ 50ಕ್ಕೂ ಹೆಚ್ಚು ಶಾಸಕರು: ಮಹಾ ಪತನ ನಿಶ್ಚಿತ