ಬಿ. ಎಲ್‌ ಸಂತೋಷ್‌ ಭಾಷಣಕ್ಕೆ ಅಧಿಕಾರಿಗಳ ಆಕ್ಷೇಪ… ಬಿಜೆಪಿ ಸಭೆಯಲ್ಲಿ ಆಗಿದ್ದೇನು?


Team Udayavani, Apr 2, 2023, 4:08 PM IST

b-l-santhosh

ಗಂಗಾವತಿ: ಕಾರ್ಯಕ್ರಮದ ಪರವಾನಿಗೆಯ ಅವಧಿ ಮುಗಿದರೂ ಭಾಷಣ ಮುಂದುವರಿಸಿದ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ. ಎಲ್ .ಸಂತೋಷ್ ಅವರ ಭಾಷಣಕ್ಕೆ ಚುನಾವಣಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಬಿ.ಎಲ್. ಸಂತೋಷ ಅವರು ಭಾಷಣವನ್ನು ಮೊಟಕುಗೊಳಿಸಿದ ಘಟನೆ ಗಂಗಾವತಿ ತಾಲೂಕಿನ ಮರಳಿ ಹತ್ತಿರ ಇರುವ ಖಾಸಗಿ ರೆಸಾರ್ಟ್ ಹೊಟೇಲ್ ನಲ್ಲಿ ರವಿವಾರ ಮಧ್ಯಾಹ್ನ ಜರುಗಿದೆ.

ಬಿಜೆಪಿ ಡಿಜಿಟಲ್ ಮಾಧ್ಯಮ ಕಾರ್ಯಕರ್ತರ ಬಳ್ಳಾರಿ ವಿಭಾಗೀಯ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ .ಎಲ್. ಸಂತೋಷ ಅವರು ಮಾತನಾಡುವ ಸಂದರ್ಭದಲ್ಲಿ ಚುನಾವಣಾ ಸೆಕ್ಟರ್ ಅಧಿಕಾರಿಗಳಾದ ಗುರಪ್ಪ ನಾಯಕ ಮತ್ತು ಗುರುವಿನ ಗೌಡ ನಾಯಕ ಹಾಗೂ ಗ್ರಾಮೀಣ ಸಿಪಿಐ ಮಂಜುನಾಥ್ ಅವರು ವೇದಿಕೆಯ ಮೇಲೆ ಹತ್ತಿ ಕಾರ್ಯಕ್ರಮಕ್ಕೆ ಪರವಾನಿಗೆ ಪಡೆದ ಅವಧಿ ಮುಕ್ತಾಯವಾಗಿದ್ದು ಭಾಷಣ ನಿಲ್ಲಿಸುವಂತೆ ಸೂಚಿಸಿದರು ಇದಕ್ಕೆ ವೇದಿಕೆ ಮೇಲಿದ್ದ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು .

ಈ ಸಂದರ್ಭದಲ್ಲಿ ಬಿ. ಎಲ್ .ಸಂತೋಷ್‌ ಮಾತನಾಡಿ ಚುನಾವಣಾ ಅಧಿಕಾರಿಗಳು ತಮ್ಮ ಕರ್ತವ್ಯ ತಾವು ಮಾಡುತ್ತಿದ್ದಾರೆ. ಈಗಾಗಲೇ ಕಾರ್ಯಕರ್ತರಿಗೆ ನಾನು ಎಲ್ಲವನ್ನು ಹೇಳಿದ್ದೇನೆ. ನನ್ನ ಭಾಷಣವನ್ನು ಮುಗಿಸುತ್ತೇನೆ. ಒಂದು ವೇಳೆ ಅವಧಿ ಮುಗಿದರು ಭಾಷಣ ಮಾಡಿದ ಆರೋಪದಲ್ಲಿ ನನ್ನ ಮೇಲೆ ಅಧಿಕಾರಿಗಳು ಕೇಸನ್ನು ಹಾಕಿಕೊಳ್ಳಬಹುದು ಎಂದರು.

ನಂತರ ಅಧಿಕಾರಿಗಳು ಯಾವುದೇ ನೋಟಿಸನ್ನು ನೀಡದೆ ಎಚ್ಚರಿಕೆಯನ್ನು ನೀಡಿ ಅಲ್ಲಿಂದ ತೆರಳಿದರು.

ಬಿಜೆಪಿ ಬಳ್ಳಾರಿ ವಿಭಾಗದ ಬಳ್ಳಾರಿ,ವಿಜಯನಗರ,ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಬಿಜೆಪಿ ಸೋಶಿಯಲ್ ಡಿಜಿಟಲ್ ಮೀಡಿಯಾ ಕಾರ್ಯಕರ್ತರ ಸಮ್ಮೇಳನವನ್ನು ತಾಲೂಕಿನ ಮರಳಿ ಹತ್ತಿರದ ರಾಜ್ ಕೌಂಟಿ ರೆಸಾರ್ಟ್ ನಲ್ಲಿ ಬೆಳ್ಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಚುನಾವಣಾ ಅಧಿಕಾರಿಗಳಿಂದ ಪರವಾನಿಗೆ ಪಡೆದು ಆಯೋಜಿಸಲಾಗಿತ್ತು.

ಬಿ.ಎಲ್. ಸಂಸಂತೋಷ ಅವರು ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರಿಂದ ಕಾರ್ಯಕ್ರಮ ಕೊನೆಗೊಳ್ಳುವ ಅವಧಿ ಮುಗಿದು ೧೦ ನಿಮಿಷಗಳಾಗಿದ್ದರಿಂದ ಚುನಾವಣಾ ಸೆಕ್ಟರ್ ಅಧಿಕಾರಿಗಳಾದ ಗುರ್ರಪ್ಪ ನಾಯಕ,ಗುರುವಿನಗೌಡ ನಾಯಕ ಮತ್ತು ಗ್ರಾಮೀಣ ಸಿಪಿಐ ಮಂಜುನಾಥ ಕಾರ್ಯಕ್ರಮದ ವೇದಿಕೆಗೆ ಆಗಮಿಸಿ ನಿಗದಿ ಅವಧಿ ಮುಕ್ತವಾಗಿ ೧೦ ನಿಮಿಷಗಳಾಗಿದ್ದು ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿದ ಘಟನೆ ಜರುಗಿದೆ.

ಟಾಪ್ ನ್ಯೂಸ್

prabhakar

ಮಾಧ್ಯಮದವರ ಸಮಸ್ಯೆಗಳಿಗೆ ಸದಾ ಸ್ಪಂದನೆ: ಪ್ರಭಾಕರ್‌

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

MOBILE FRAUD MONEY

ಬ್ಯಾಂಕ್‌ ಖಾತೆ ವಿವರ ಪಡೆದು 1.21 ಲ.ರೂ. ವಂಚನೆ

power lines

kadaba: ಲೈನ್‌ಮನ್‌ ಸಾವು ಪ್ರಕರಣ: ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹರಪನಹಳ್ಳಿ: ರೈಲು ಡಿಕ್ಕಿ ಹೊಡೆದು ನಾಲ್ಕು ಕುರಿಗಳು ಸಾವು

ಹರಪನಹಳ್ಳಿ: ರೈಲು ಡಿಕ್ಕಿ ಹೊಡೆದು ನಾಲ್ಕು ಕುರಿಗಳು ಸಾವು

ಮೈಸೂರು ದುರ್ಘಟನೆ; ಸಂಗನಕ್ಕಲ್ಲು ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ

ಮೈಸೂರು ದುರ್ಘಟನೆ; ಸಂಗನಕ್ಕಲ್ಲು ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ

1-sasd

T Narasipura ಭೀಕರ ಅಪಘಾತ: ಮೈಸೂರು ಆಸ್ಪತ್ರೆಗೆ ಸಚಿವ ನಾಗೇಂದ್ರ ಭೇಟಿ

ಹೊಸಪೇಟೆ: ಸುಡು ಬಿಸಿಲಲ್ಲೂ ಹಂಪಿಗೆ ಪ್ರವಾಸಿಗರ ದಂಡು!

ಹೊಸಪೇಟೆ: ಸುಡು ಬಿಸಿಲಲ್ಲೂ ಹಂಪಿಗೆ ಪ್ರವಾಸಿಗರ ದಂಡು!

TRUCK BUS ACCIDENT

Accident: ಲಾರಿ, ಬಸ್ ನಡುವೆ ಡಿಕ್ಕಿ- ಡ್ರೈವರ್, ಪ್ರಯಾಣಿಕರು ಪ್ರಾಣಪಾಯದಿಂದ ಪಾರು

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

prabhakar

ಮಾಧ್ಯಮದವರ ಸಮಸ್ಯೆಗಳಿಗೆ ಸದಾ ಸ್ಪಂದನೆ: ಪ್ರಭಾಕರ್‌

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

CONGRESS GUARENTEE

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾಗರಿಕರ ಸಹಕಾರವೂ ಅಗತ್ಯ

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು