Udayavni Special

ಬಿಎಂಟಿಸಿ ಪ್ರಯಾಣ ದರ ಹೆಚ್ಚಿಸಲು ಸರಕಾರದ ಚಿಂತನೆ


Team Udayavani, Feb 25, 2021, 9:32 PM IST

ಬಿಎಂಟಿಸಿ ಪ್ರಯಾಣ ದರ ಹೆಚ್ಚಿಸಲು ಸರಕಾರದ ಚಿಂತನೆ

ಬೆಂಗಳೂರು: ತೈಲ ಬೆಲೆ ಗಗನಕ್ಕೇರಿ ಆಯ್ತು. ಅಡುಗೆ ಅನಿಲ ದರವೂ ಹೆಚ್ಚಳವಾಯ್ತು. ಈಗ ಬಸ್‌ ಪ್ರಯಾಣ ದರದ ಸರದಿ!
ಬಿಎಂಟಿಸಿ ಬಸ್‌ ಪ್ರಯಾಣ ದರ ಏರಿಕೆಗೆ ಸರ್ಕಾರ ಚಿಂತನೆ ನಡೆಸಿದ್ದು, ಸಾಧ್ಯವಾದರೆ ಬಜೆಟ್‌ ಅಧಿವೇಶನ ಅವಧಿಯಲ್ಲೇ ಇದಕ್ಕೆ ಅನುಮೋದನೆ ಪಡೆದು ಜಾರಿಗೊಳಿಸುವ ಉದ್ದೇಶ ಇದೆ. ಹಾಗಾಗಿ, ತಿಂಗಳಲ್ಲಿ ಇದರ ಬಿಸಿ ಬಸ್‌ ಪ್ರಯಾಣಿಕರಿಗೆ ತಟ್ಟುವ ನಿರೀಕ್ಷೆ ಇದೆ.

ಸ್ವತಃ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಗರ ಸಾರಿಗೆಗಳ ಪ್ರಯಾಣ ದರ ಏರಿಕೆ ಸುಳಿವು ನೀಡಿದ್ದಾರೆ. ಇದಕ್ಕೆ ಸಚಿವರು ನೀಡಿದ ಸಮಜಾಯಿಷಿ- “ಕಳೆದ ವರ್ಷ ಕೆಎಸ್‌ಆರ್‌ಟಿಸಿ ಸೇರಿ ಮೂರು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ದರ ಏರಿಕೆ ಮಾಡಲಾಗಿತ್ತು. ಬಿಎಂಟಿಸಿ ಮಾತ್ರ ಹೊರಗುಳಿದಿತ್ತು. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿದ್ದು, ಈ ಮಧ್ಯೆ ಡೀಸೆಲ್‌ ಬೆಲೆ ಕೂಡ ಹೆಚ್ಚಳವಾಗಿದೆ. ಹಾಗಾಗಿ, ಬಸ್‌ ಪ್ರಯಾಣ ದರ ಹೆಚ್ಚಿಸುವ ಚಿಂತನೆ ಮಾಡಬೇಕಾಗಿದೆ’.

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಾಸರಿ ಶೇ. 18ರಿಂದ 20ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳ ಮಾಡಿದರೆ, ಪ್ರಯಾಣಿಕರಿಗೆ ಹೊರೆ ಆಗಲಿದೆ. ಈ ಹಿನ್ನೆಲೆಯಲ್ಲಿ ಹೊರೆ ಆಗದಂತೆ ಮುಖ್ಯಮಂತ್ರಿಗಳ ಅನುಮತಿ ಪಡೆದು ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ :ಮಿಸ್ ಮೈಸೂರು ಆಗಿ ಆಯ್ಕೆಯಾದ ಚಾಮರಾಜನಗರದ ಯುವತಿ

ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂ ಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ಕೂಡ ಸರಾಸರಿ ಶೇ. 18-20ರಷ್ಟು ಏರಿಕೆಗೆ ಪ್ರಸ್ತಾವನೆ ಇಟ್ಟಿದ್ದವು. ಈ ಪೈಕಿ ಶೆ. 12ರಷ್ಟು ಹೆಚ್ಚಳ ಮಾಡಲಾಗಿತ್ತು. “ಈಚೆಗೆ ಸಿಟಿ ಟ್ಯಾಕ್ಸಿಗಳ ಬಾಡಿಗೆ ದರವನ್ನೂ ಶೇ. 15ರಷ್ಟು ಹೆಚ್ಚಿಸಲಾಗಿದೆ. ಆ್ಯಪ್‌ ಆಧಾರಿತ ಸೇವೆಗಳಾದ ಓಲಾ, ಉಬರ್‌ ಕೂಡ ಪ್ರಸ್ತಾವನೆ ಸಲ್ಲಿಸಿವೆ’ ಎಂದೂ ಹೇಳಿದರು.

ನಾಲ್ಕೂ ನಿಗಮಗಳು ಸೇರಿ ನಾಲ್ಕು ಸಾವಿರ ಕೋಟಿ ರೂ. ಆದಾಯದಲ್ಲಿ ಖೋತಾ ಆಗಿದ್ದು, 2,780 ಕೋಟಿ ರೂ. ನಷ್ಟ ಉಂಟಾಗಿದೆ. ಕೊರೊನಾ ಹಾವಳಿಗೂ ಮುನ್ನ 1,508 ಕೋಟಿ ರೂ. ನಷ್ಟ ಆಗಿತ್ತು. ಬಿಎಂಟಿಸಿಯಲ್ಲಿ ಕೋವಿಡ್‌ ಪೂರ್ವದ ಸ್ಥಿತಿಗೆ ಹೋಲಿಸಿದರೆ, ಶೇ. 60ರಷ್ಟು ಪ್ರಯಾಣಿಕರು ಬರುತ್ತಿದ್ದು, ಉಳಿದ ನಿಗಮಗಳ ಬಸ್‌ಗಳಲ್ಲಿ ಶೇ. 85ರಷ್ಟು ಪ್ರಯಾಣಿಕರು ವಾಪಸ್ಸಾಗಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ, ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣ ಸಹಜಸ್ಥಿತಿಗೆ ಹಿಂತಿರುಗಲಿದ್ದೇವೆ ಎಂದ ಅವರು, ಡೀಸೆಲ್‌ ದರ ಏರಿಕೆ ಬಿಸಿ ತಕ್ಷಣಕ್ಕೆ ನಿಗಮಗಳಿಗೆ ತಟ್ಟುವುದಿಲ್ಲ. ಯಾಕೆಂದರೆ, ಒಪ್ಪಂದದ ಪ್ರಕಾರ 15 ದಿನಗಳಿಗೊಮ್ಮೆ ಪಾವತಿ ಆಗುತ್ತದೆ. ಜತೆಗೆ ಪ್ರತಿ ಲೀಟರ್‌ಗೆ 3.20 ರೂ. ರಿಯಾಯ್ತಿ ದರದಲ್ಲಿ ಪೂರೈಕೆ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

3 ಸಾವಿರ ಬಸ್‌ಗಳಿಗೆ ಪ್ರಸ್ತಾವ
3 ಸಾವಿರ ಬಸ್‌ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಎಲೆಕ್ಟ್ರಿಕ್‌ ಬಸ್‌ಗಳೂ ಸೇರಿವೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

9 ಲಕ್ಷ ಕಿ.ಮೀ. ದಾಟಿದ ನೂರಾರು ಬಸ್‌ಗಳು ಗುಜರಿಗೆ ಹೋಗಲಿವೆ. ಇದಕ್ಕೆ ಪ್ರತಿಯಾಗಿ ಬ್ಯಾಂಕಿನಲ್ಲಿ ಪಡೆದ ಸಾಲದಿಂದ ಸುಮಾರು 600-700 ಬಸ್‌ಗಳ ಖರೀದಿಸಲಾಗುತ್ತಿದೆ. ಇದಲ್ಲದೆ, 300 ಎಲೆಕ್ಟ್ರಿಕ್‌ ಬಸ್‌ಗಳೂ ಬರಲಿವೆ. ಜತೆಗೆ ಇನ್ನೂ 3 ಸಾವಿರ ಬಸ್‌ಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಅಧಿವೇಶನ ನಂತರ ಕ್ರಮ
ಬಜೆಟ್‌ ಅಧಿವೇಶನ ಮುಗಿದ ನಂತರ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗ ಜಾರಿ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಒಟ್ಟು ಒಂಬತ್ತು ಬೇಡಿಕೆಗಳ ಪೈಕಿ ಈಗಾಗಲೇ ಆರು ಈಡೇರಿಸಲಾಗಿದೆ. ಉಳಿದ ಮೂರರಲ್ಲಿ 6ನೇ ವೇತನ ಆಯೋಗ ಜಾರಿಗೆ ಸಮಿತಿ ರಚಿಸಲಾಗಿದೆ. ಅಧಿವೇಶನ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ರೈತ ಮುಖಂಡ ಕೋಡೀಹಳ್ಳಿ ಚಂದ್ರಶೇಖರ್‌ ಅವರಿಗೂ ಸಾರಿಗೆ ನಿಗಮಗಳಿಗೂ ಸಂಬಂಧ ಇಲ್ಲ ಎಂದು ಪುನರುತ್ಛರಿಸಿದರು.

ಟಾಪ್ ನ್ಯೂಸ್

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

ಕ,ಜಹಗ್ರೆ

ಗಿನ್ನೆಸ್ ದಾಖಲೆ ಬರೆದ ಮೊಲ ಕಳ್ಳತನ : ಹುಡುಕಿ ಕೊಟ್ಟವರಿಗೆ ಸಿಗುತ್ತೆ 2 ಲಕ್ಷ ಬಹುಮಾನ!

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ

ಗಹಜಕಜುಹಯತ

ಭಾನುವಾರ ಉತ್ತರ ಪ್ರದೇಶ ಲಾಕ್ ಡೌನ್ : ಮಾಸ್ಕ್ ಹಾಕದಿದ್ದರೆ 10,000 ದಂಡ!

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

‍‍ಗಜಗ್ಹದದ್ದಸ

ಬಾಕ್ಸಿಂಗ್ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಿದ್ದ ವ್ಯಕ್ತಿ ಇಂದು ಆಟೋ ಚಾಲಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್

ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್

ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಕ್ ಆಸ್ಪತ್ರೆಗೆ ಶಿಫ್ಟ್

ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್

ಹಗದ್ಹಸದ್

ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ

MUST WATCH

udayavani youtube

ಮಂಗಳೂರು: ಬೊಟ್ ದುರಂತ ಪ್ರಕರಣ; ಮೂರು ದಿನಗಳಾದರೂ ಪತ್ತೆಯಾಗದ ಮೀನುಗಾರರು

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

ಹೊಸ ಸೇರ್ಪಡೆ

Let communities cooperate in the prevention of covid

ಕೋವಿಡ್‌ ತಡೆಗೆ ಸಮುದಾಯಗಳು ಸಹಕರಿಸಲಿ

Request for vaccination

ಲಸಿಕೆ ಹಾಕಿಸಿಕೊಳ್ಳಲು ಮನವಿ

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

The disappearance of the rules

ನಾಮಪತ್ರ ಸಲ್ಲಿಕೆಗೆ ತೆರೆ:ನಿಯಮಾವಳಿ ಕಣ್ಮರೆ

Ranked in the “Golden Book of World Records”

“ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌’ ನಲ್ಲಿ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.