ಪಾಕಿಸ್ತಾನದ ಐಎಸ್ಐ ಜತೆ ಹಲವು ಬಾಲಿವುಡ್ ತಾರೆಯರ ಸಂಪರ್ಕ ಬಯಲು, ಯಾರೀದು ಟೋನಿ?
ಕಾಶ್ಮೀರದ ವಿಚಾರದಲ್ಲಿ, ಕಾಶ್ಮೀರಿ ಯುವಕರು ಕಲ್ಲು ಮತ್ತು ಗನ್ ಗಳನ್ನು ಕೈಗೆತ್ತಿಕೊಳ್ಳಿ ಎಂದು ಪ್ರಚೋದನಕಾರಿ ಹೇಳಿಕೆ
Team Udayavani, Jul 23, 2020, 1:28 PM IST
ನವದೆಹಲಿ: ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳಿಗೆ ಪಾಕಿಸ್ತಾನದ ಐಎಸ್ ಐ ಜತೆ ನಿಕಟ ಸಂಬಂಧವಿದೆ ಎಂದು ಬಿಜೆಪಿ ಹಿರಿಯ ಮುಖಂಡ ಬೈಜಯಂತ್ ಜಯ್ ಪಾಂಡಾ ಆರೋಪಿಸಿದ್ದ ಬೆನ್ನಲ್ಲೇ ಮೂಲಗಳ ಪ್ರಕಾರ, ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ರೇಹಾನ್ ಸಿದ್ದಿಖಿ ಮತ್ತು ಟೋನಿ ಅಶಾಯ್ ಜತೆ ವ್ಯವಹಾರದ ನಂಟು ಹೊಂದಿರುವುದಾಗಿ ಹೇಳಿದೆ. ಸಿದ್ದಿಖಿ, ಟೋನಿ ಭಾರತ ವಿರೋಧಿ ಹೇಳಿಕೆ ಹಾಗೂ ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಆರ್ಥಿಕ ನೆರವು ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಮೂಲಗಳ ಪ್ರಕಾರ, ಶಾರುಖ್ ಖಾನ್, ಗೌರಿ ಟೋನಿ ಅಶಾಯ್ ಜತೆ ವ್ಯವಹಾರದ ನಂಟು ಹೊಂದಿದ್ದಾರೆ. ಅಶಾಯ್ ಅಮೆರಿಕದಲ್ಲಿ ನೆಲೆಸಿದ್ದು, ಕಾಶ್ಮೀರ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಟೋನಿ ಅಶಾಯ್ ಅಂತಾರಾಷ್ಟ್ರೀಯ ಖ್ಯಾತಿಯ ವಾಸ್ತುಶಿಲ್ಪಿ, ಟೋನಿ ಜನಿಸಿದ್ದು ಕಾಶ್ಮೀರದಲ್ಲಿ. ಲಾಸ್ ಏಂಜಲೀಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಟೋನಿ ಬಾಲಿವುಡ್ ಸ್ಟಾರ್ ಗಳ ಬಂಗಲೆಗಳನ್ನೂ ವಿನ್ಯಾಸಗೊಳಿಸಿರುವುದಾಗಿ ವರದಿ ಹೇಳಿದೆ. ಕಾಶ್ಮೀರದ ವಿಚಾರದಲ್ಲಿ, ಕಾಶ್ಮೀರಿ ಯುವಕರು ಕಲ್ಲು ಮತ್ತು ಗನ್
ಗಳನ್ನು ಕೈಗೆತ್ತಿಕೊಳ್ಳಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ರೇಹಾನ್ ಸಿದ್ದಿಖಿ ಪಾಕಿಸ್ತಾನದ ವ್ಯಕ್ತಿ, ಹೂಸ್ಟನ್ ನಲ್ಲಿರುವ ಸಿದ್ದಿಖಿ ಸ್ವಂತ ರೇಡಿಯೋ ಚಾನಲ್ ಹೊಂದಿದ್ದು, ನಿರಂತರವಾಗಿ ಕಾಶ್ಮೀರದಲ್ಲಿರುವ ಉಗ್ರರನ್ನು ಬೆಂಬಲಿಸುತ್ತಿರುತ್ತಾನೆ. ಸಿದ್ದಿಖಿಗೆ ಸಂಗೀತ ಮತ್ತು ರೇಡಿಯೋ ಇಂಡಸ್ಟ್ರಿ ಬಗ್ಗೆ ವ್ಯಾಪಕವಾದ ಅನುಭವ ಹೊಂದಿದ್ದ. ಈ ಹಿನ್ನೆಲೆಯಲ್ಲಿಯೇ ಸಿದ್ದಿಖಿ ದಕ್ಷಿಣ ಏಷ್ಯಾ ಮತ್ತು ಬಾಲಿವುಡ್ ನ ಘಟಾನುಘಟಿ ಸ್ಟಾರ್ ನಟರನ್ನು ಸೇರಿಸಿ 400 ಅಧಿಕ ಯಶಸ್ವಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಎಂದು ವರದಿ ವಿವರಿಸಿದೆ.
ಸಿದ್ದಿಖಿ ತನ್ನದೇ ಸ್ವಂತ ರೇಡಿಯೋ ಚಾನಲ್ ಹೊಂದಿದ್ದಾನೆ. ಈಗ ಬಾಲಿವುಡ್ ಸೆಲೆಬ್ರಿಟಿಗಳನ್ನು ಹೂಸ್ಟನ್ ಗೆ ಕರೆತಂದು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸುತ್ತಿರುತ್ತಾನೆ. ಅಷ್ಟೇ ಅಲ್ಲ ಈತ ತನ್ನ ರೇಡಿಯೋ ಚಾನೆಲ್ ಅನ್ನು ಭಾರತ ವಿರೋಧಿ ಪ್ರಚಾರಕ್ಕೆ ಮೀಸಲಿಟ್ಟಿದ್ದಾನೆ ಎಂದು ಹೂಸ್ಟನ್ ನಲ್ಲಿರುವ ಭಾರತೀಯ ಸಮುದಾಯದ ಪ್ರಮುಖ ಸದಸ್ಯರೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾಕ್ವೆಲಿನ್ ಫರ್ನಾಂಡಿಸ್ ಗೆ ಅಬುಧಾಬಿಗೆ ತೆರಳಲು ಕೋರ್ಟ್ ಅನುಮತಿ
‘ಸ್ವತಂತ್ರ ವೀರ್ ಸಾವರ್ಕರ್’ ಫಸ್ಟ್ ಲುಕ್ ಹಂಚಿಕೊಂಡ ರಣದೀಪ್ ಹೂಡಾ
ಕಂಗನಾ ರಣಾವತ್ ‘ಧಾಕಡ್’ 8 ದಿನದಲ್ಲಿ ಗಳಿಸಿದ್ದು ಕೇವಲ 4,420 ರೂ..!?
10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ
ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್