ಸ್ಪಷ್ಟವಾಗಿ ಹೇಳುತ್ತೇನೆ,ಬೊಮ್ಮಾಯಿ ಮುಂದುವರೆಯಲಿದ್ದಾರೆ: ಸಚಿವ ಕೋಟ
Team Udayavani, Dec 20, 2021, 10:40 AM IST
ಬೆಳಗಾವಿ : ನಾನು ನನ್ನ ಪ್ರಕಾರ ಸ್ಪಷ್ಟವಾಗಿ ಹೇಳುತ್ತೇನೆ,ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ,ಅವರ ನಾಯಕತ್ವದಲ್ಲಿ ಎಲ್ಲವೂ ನಡೆಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ತಮ್ಮಜಿಲ್ಲೆಯಲ್ಲಿ ಮಾತನಾಡುವಾಗ ಭಾವನಾತ್ಮಕವಾಗಿ ಮಾತನಾಡಿದ್ದು, ಆಡಳಿತಾತ್ಮಕ ವಾಗಿ ಕ್ಷೇತ್ರದಲ್ಲಿ ಕುಟುಂಬದ ಸದಸ್ಯ ಅಂತ ಹೇಳಿದರು. ಅದರಲ್ಲಿ ಪ್ರೀತಿ, ಭಾವುಕ ವಿಚಾರ ಹೇಳಿದ್ದಾರೆ.ರಾಜ್ಯದ ಬೆಳವಣಿಗೆಗೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ.ಯಾರು ಯಾರು ಏನೇನು ಹೇಳಿದ್ದಾರೋ ಅವರವರಿಗೆ ಬಿಟ್ಟಿದ್ದು ಎಂದರು.
ಎಂ.ಇ.ಎಸ್ ಪುಂಡಾಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಾಷೆಯ ಹೆಸರಿನಲ್ಲಿ ಗೂಂಡಾಗಿರಿ ಮಾದುವುದು ಸರಿಯಲ್ಲ.ಪುಂಡಾಟವನ್ನು ಕಾನೂನು ರೀತಿಯಲ್ಲೇ ಕ್ರಮ ಕೈಗೊಂಡು ಬಗೆಹರಿಸಲಿದ್ದೇವೆ ಎಂದರು.