ಆನ್‌ಲೈನ್‌ ನಡುವೆ ಆಫ್ಲೈನ್‌ ಪುಸ್ತಕ ಪ್ರೇಮ : ಪುಸ್ತಕೋತ್ಸವದಲ್ಲಿ ಅಧ್ಯಯನ ಪ್ರೀತಿ

ಬಗೆಬಗೆಯ ಆಫ‌ರ್

Team Udayavani, Mar 6, 2021, 5:00 AM IST

ಆನ್‌ಲೈನ್‌ ನಡುವೆ ಆಫ್ಲೈನ್‌ ಪುಸ್ತಕ ಪ್ರೇಮ : ಪುಸ್ತಕೋತ್ಸವದಲ್ಲಿ ಅಧ್ಯಯನ ಪ್ರೀತಿ

ಉಡುಪಿ: ಆನ್‌ಲೈನ್‌ ಮಾರಾಟದ ಭರಾಟೆಯಲ್ಲಿ ಆಫ್ಲೈನ್‌ ಮೂಲಕವೂ ಅದೇ ಚಾರ್ಮ್ ಗಿಟ್ಟಿಸಿಕೊಳ್ಳಬಹುದು ಎಂಬುವುದಕ್ಕೆ ಒಂದು ಉತ್ತಮ ಉದಾಹರಣೆ ಇಲ್ಲಿದೆ. ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರ, ಯೋಗಕ್ಷೇಮ, ಜೀವನ ಚರಿತ್ರೆ, ಉದ್ಯೋಗ, ಕಥೆಗಳು, ಕವನಗಳ ಸಂಗ್ರಹ ಸಹಿತ ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ತದೇಕಚಿತ್ತದಿಂದ ಪರಿಶೀಲಿಸಿ ಖರೀದಿಸುವ ವರ್ಗ ಅಲ್ಲಿ ಸೇರಿತ್ತು. ಜತೆಗೆ ವಿವಿಧ ಬಗೆಯ ಆಫ‌ರ್‌ಗಳು ಪುಸ್ತಕಾಭಿಮಾನಿಗಳನ್ನು ಮತ್ತಷ್ಟು ಸನಿಹಕ್ಕೆ ಕೊಂಡೊಯ್ದವು.

ಇದು ಕಂಡು ಬಂದಿದ್ದು, ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಎಂಜಿಎಂ ಪುಸ್ತಕೋತ್ಸವ ಕಾರ್ಯಕ್ರಮದಲ್ಲಿ. ಕನ್ನಡ ಪುಸ್ತಕ ಪ್ರಾಧಿಕಾರ, ನವಕರ್ನಾಟಕ, ಮಣಿಪಾಲ್‌ ಯೂನಿವರ್ಸಲ್‌ ಪ್ರಸ್‌, ಭಾರತ್‌ ಬುಕ್‌ ಮಾರ್ಕ್‌, ಬಿಬ್ಲಿಯೋಸ್‌, ಸ್ಕೂಲ್‌ ಬುಕ್‌ ಕಂಪೆನಿ ಸೇರಿದಂತೆ 15ಕ್ಕೂ ಅಧಿಕ ಮಳಿಗೆಗಳು ಲಭ್ಯವಿದ್ದವು. ಹಲವಾರು ಮಂದಿ ಪ್ರಕಾಶಕರು, ಲೇಖಕರೂ ಕೂಡ ಸ್ಥಳದಲ್ಲಿದ್ದರು. ಸ್ಥಳೀಯ ಸಹಿತ ಜಿಲ್ಲೆ, ರಾಜ್ಯ, ಹೊರದೇಶಗಳ ಲೇಖಕರು ಬರೆದ ಪುಸ್ತಕಗಳೂ ಶೇ.10ರಿಂದ ಶೇ.70 ರಿಯಾಯಿತಿ ದರದಲ್ಲಿ ಲಭ್ಯವಿದ್ದವು. ಕುಂದಾಪುರ ಕನ್ನಡ ನಿಘಂಟು ಪುಸ್ತಕಗಳು 100 ರೂ. ರಿಯಾಯಿತಿ ದರದಲ್ಲಿ ಮಾರಾಟವಾದವು.

ಕೋಂಬೋ ಆಫ‌ರ್‌!
ಯುವ ಓದುಗರನ್ನು ಆಕರ್ಷಿಸಲು ವಿವಿಧ ರೀತಿಯ ಆಫ‌ರ್‌ಗಳನ್ನು ನೀಡಲಾಗಿತ್ತು. ಲೇಖಕ ಮಂಜುನಾಥ್‌ ಕಾಮತ್‌ ಅವರ “ನಾನು ಸನ್ಯಾಸಿಯಾಗಲು ಹೊರಟಿದ್ದೆ’, “ದಾರಿ ತಪ್ಪಿಸು ಓ ದೇವರೆ’, ಚೆಂದದ ಹಲ್ಲಿನ ಹುಡುಗಿ’ ಈ ಮೂರು ಪುಸ್ತಕಗಳನ್ನು ಕೊಂಡರೆ ಎನ್‌ 95 ಮಾಸ್ಕ್, ಬಟ್ಟೆ ಚೀಲ ಜತೆಗೆ ಶೇ.10 ರಿಯಾಯಿತಿ ಲಭ್ಯವಿದ್ದವು. ಇದರೊಂದಿಗೆ ಸೆಲ್ಫಿà ಸ್ಟಾಂಡ್‌, ಪುಸ್ತಕದ ಸಾರಾಂಶ ನೋಡಿ ಖರೀದಿಸುವ ಸಪ್ರೈಸ್‌ ಬುಕ್‌ ಇತ್ಯಾದಿ ಆಕರ್ಷಣೆಗಳೂ ಕಂಡು ಬಂದವು. ಸಾಹಿತ್ಯ ಕೃತಿಗಳಿಗಿಂತಲೂ ಮಹಾನ್‌ ವ್ಯಕ್ತಿಗಳಜೀವನ ಚರಿತ್ರೆ, ಸ್ಫೂರ್ತಿದಾಯಕ ಕಥೆಗಳು ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾದವು. ಸ್ಟೀವ್‌ ಜಾಬ್ಸ್, ಸ್ಟೀಫ‌ನ್‌ ಹ್ಯಾಕಿಂಗ್‌, ಭಗತ್‌ ಸಿಂಗ್‌, ಸುಭಾಷ್‌ ಚಂದ್ರಬೋಸ್‌, ಷೇಕ್‌ಸ್ಪಿಯರ್‌ನ ಮಹಾನಾಟಕ ಪುಸ್ತಕಗಳನ್ನು ಹೆಚ್ಚಿನ ಓದುಗರು ಆಯ್ಕೆ ಮಾಡಿಕೊಂಡರು.

ಪುಸ್ತಕ ದಾನ ಕೌಂಟರ್‌
ಕಾರ್ಯಕ್ರಮದ ಹೊರಭಾಗದಲ್ಲಿ ಪುಸ್ತಕ ದಾನ ಕೌಂಟರ್‌ ಅನ್ನು ಮಾಡಲಾಗಿತ್ತು. ಖರೀದಿಸಿದ ಯಾವುದೇ ಪುಸ್ತಕವನ್ನು ಹೆಸರಿನ ಜತೆಗೆ ದಾನ ಮಾಡಬಹುದಾಗಿತ್ತು. ಹಳೆಯ ಪುಸ್ತಕಗಳನ್ನೂ ಇಲ್ಲಿ ನೀಡಬಹುದಾಗಿತ್ತು. ಹೀಗೆ ಒಟ್ಟಾದ ಪುಸ್ತಕಗಳನ್ನು ಉಡುಪಿಯ ಕನ್ನಡ ಶಾಲೆಗಳಿಗೆ ಹಂಚಲಿದ್ದೇವೆ. ಪ್ರಾಥಮಿಕ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸಲು ಇದು ಪುಟ್ಟ ಪ್ರಯತ್ನ ಎನ್ನುತ್ತಾರೆ ಉಪನ್ಯಾಸಕ ಮಂಜುನಾಥ್‌ ಕಾಮತ್‌.

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.