ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ
Team Udayavani, Jun 11, 2021, 6:32 PM IST
ಬೆಂಗಳೂರು : ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ. ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದುದು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.
ಇದನ್ನೂ ಓದಿ :ಶಿಕ್ಷಕರಿಗೆ ಯುವಾ ಬ್ರಿಗೇಡ್ ಗುರು ಗೌರವ ಕಿಟ್ ವಿತರಣೆ
ಅವರ ನಿಧನದಿಂದ ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ
ಬಿಲ್ ತುಂಬದ ಗ್ರಾ. ಪಂಚಾಯತ್ :ವಾರದಿಂದ ಗ್ರಾಮದಲ್ಲಿ ಬೆಳಗದ ಬೀದಿ ದೀಪ, ಗ್ರಾಮಸ್ಥರ ಹಿಡಿಶಾಪ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು – ನನಸು
ಚಂದ್ರಶೇಖರ್ ಗುರೂಜಿ ಹತ್ಯೆ : ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಲು ಕ್ರಮ : ಬೊಮ್ಮಾಯಿ
ಶಿವಮೊಗ್ಗ: ಮಂಡಗದ್ದೆ ಬಳಿಯ ಚಂದ್ರಶೇಖರ ಗುರೂಜಿ ಹೆಂಡತಿ ಮನೆಯಲ್ಲಿ ನೀರವ ಮೌನ
MUST WATCH
ಹೊಸ ಸೇರ್ಪಡೆ
ಮೂಳೂರು ತೊಟ್ಟಂ ಪರಿಸರದ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಶಾಸಕರ ಭೇಟಿ ; ಪರಿಶೀಲನೆ
ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ
ಬಿಲ್ ತುಂಬದ ಗ್ರಾ. ಪಂಚಾಯತ್ :ವಾರದಿಂದ ಗ್ರಾಮದಲ್ಲಿ ಬೆಳಗದ ಬೀದಿ ದೀಪ, ಗ್ರಾಮಸ್ಥರ ಹಿಡಿಶಾಪ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು – ನನಸು
ಮಳೆಯ ಅಬ್ಬರ : ಉಡುಪಿ, ದ.ಕನ್ನಡದಲ್ಲಿ ನಾಳೆಯೂ ಶಾಲಾ – ಕಾಲೇಜುಗಳಿಗೆ ರಜೆ