ಕಣ್ಣಿಗೆ ಕಂಡರೂ ಕಿವಿಗೆ ಕೇಳಿಸುತ್ತಿಲ್ಲ! ಆಲೂರು- ಹರ್ಕೂರು: BSNL‌ ಬಳಕೆದಾರರು ಹೈರಾಣು

Team Udayavani, Mar 13, 2021, 6:00 AM IST

ಕಣ್ಣಿಗೆ ಕಂಡರೂ ಕಿವಿಗೆ ಕೇಳಿಸುತ್ತಿಲ್ಲ! ಆಲೂರು- ಹರ್ಕೂರು: BSNL‌ ಬಳಕೆದಾರರು ಹೈರಾಣು

ಆಲೂರು : ನೆಟ್ ವರ್ಕ್‌ ತೋರಿಸುತ್ತಿದೆ. ಆದರೆ ಕರೆ ಮಾಡಲು ಹೋದರೆ ಕರೆ ಹೋಗಲ್ಲ. ಆಚೆ ಕಡೆಯಿಂದ ಕರೆ ಮಾಡಿದಾಗಲೂ ನಾಟ್‌ ರೀಚೆಬಲ್‌ ಅಥವಾ ಸ್ವಿಚ್‌ ಆಫ್‌ ಅಂತ ಬರುತ್ತಿದೆ.

ಇನ್ನು ಅಂತರ್ಜಾಲ ಬಳಸಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಿತ್ರ ಡೌನ್‌ಲೋಡ್‌ ಮಾಡಬೇಕಾದರೆ 1 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಇದು ಆಲೂರು, ಹರ್ಕೂರು ಭಾಗದ ಸಾವಿರಾರು ಮಂದಿ ಬಿಎಸ್ಸೆನ್ನೆಲ್‌ ಮೊಬೈಲ್‌ ಬಳಕೆದಾರರು ಕಳೆದ 10-12 ದಿನಗಳಿಂದ ಅನುಭವಿಸುತ್ತಿರುವ ಹೊಸ ಸಮಸ್ಯೆ. ಈ ಬಗ್ಗೆ ಸಂಬಂಧಪಟ್ಟ ಬಿಎಸ್ಸೆನ್ನೆಲ್‌ ಸಿಬಂದಿಯಲ್ಲಿ ಕೇಳಿದರೆ ನಮಗೂ ಏನು ಸಮಸ್ಯೆ ಎಂಬು ದು ಗೊತ್ತಿಲ್ಲ. ಪರಿಶೀಲಿಸಿ ಹೇಳುತ್ತೇವೆ ಎಂದು ಸಮಜಾಯಿಸಿ ಕೊಡುತ್ತಾರಷ್ಟೇ.

ಎಲ್ಲೆಲ್ಲ ಸಮಸ್ಯೆ?
ಪ್ರಮುಖವಾಗಿ ಆಲೂರು ಸುತ್ತಮುತ್ತಲಿ ನಲ್ಲಿ ಬಿಎಸ್ಸೆನ್ನೆಲ್‌ ಬಳಕೆದಾರರು ನೆಟ್ ವರ್ಕ್ ಸಮಸ್ಯೆಯಿಂದಾಗಿ ಭಾರೀ ತೊಂದರೆ ಎದುರಿಸುತ್ತಿದ್ದಾರೆ. ಇದಲ್ಲದೆ ಹರ್ಕೂರು, ಮುತ್ತಬೇರು, ಹೇರೂರಿನ ಕೆಲವು ಭಾಗದವರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ನೆಟ್ ವರ್ಕ್‌ ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಈ ಭಾಗದಲ್ಲಿ ಬೇರೆ ಬೇರೆ ಕಂಪೆನಿಗಳ ಸಿಮ್‌ ಬಳಕೆದಾರರಿದ್ದರೂ, ಗ್ರಾಮೀಣ ಭಾಗವಾಗಿರುವುದರಿಂದ ಬಿಎಸ್ಸೆನ್ನೆಲ್‌ ಬಳಕೆದಾರರೇ ಹೆಚ್ಚು ಮಂದಿಯಿದ್ದಾರೆ.

ಹಿಂದೆ ಕರೆಂಟ್‌ ಇಲ್ಲದಾಗ ಮಾತ್ರ ನೆಟ್ ವರ್ಕ್ ಸಮಸ್ಯೆಯಿತ್ತು. ಆದರೆ ಈಗ ಕರೆಂಟ್‌ ಇದ್ದರೂ ಒಂದೇ, ಇಲ್ಲದಿದ್ದರೂ ಈ ನೆಟ್ ವರ್ಕ್‌ ಸಮಸ್ಯೆಯಿದೆ. ಈಗ ಇದರ ನಿರ್ವಹಣೆಯನ್ನು ಬೇರೆಯವರಿಗೆ ವಹಿಸಿಕೊಡಲಾಗಿದ್ದು, ಅದರ ಬಳಿಕ ಕೆಲವು ದಿನಗಳಿಂದ ನೆಟ್ ವರ್ಕ್‌ ತೋರಿಸುತ್ತಿದ್ದರೂ, ಕರೆ ಹೋಗುತ್ತಿಲ್ಲ ಎನ್ನುವುದಾಗಿ ಆ ಭಾಗದ ಜನರು ದೂರಿದ್ದಾರೆ.

ದೂರು ಕೊಟ್ಟಿದ್ದೇವೆ
ನೆಟ್ ವರ್ಕ್ ತೋರಿಸುತ್ತಿದೆ. ಆದರೆ ಕರೆ ಮಾಡಿದಾಗ ಕರೆ ಹೋಗಲ್ಲ. ಬೇರೆಯವರು ನಮಗೆ ಕರೆ ಮಾಡಿದರೂ ಸ್ವಿಚ್‌ ಆಫ್‌ ಅಥವಾ ನಾಟ್‌ ರೀಚೆಬಲ್‌ ಬರುತ್ತಿದೆ. ನಾವು ಈಗ ಕರೆ ಮಾಡಬೇಕಾದರೆ ಬೇರೆ ಕಡೆಗೆ ಹೋಗಿ ಮಾಡಬೇಕಿದೆ. ಈ ಬಗ್ಗೆ ದೂರು ಕೊಟ್ಟಿದ್ದೇವೆ. ನಾವು ವರ್ಷ, 6 ತಿಂಗಳುಗಳದ್ದು ರೀಚಾರ್ಜ್‌ ಮಾಡಿಸಿದ್ದೇವೆ. ಈಗ ಬೇರೆ ಸಿಮ್‌ಗೆ ಬದಲಾಯಿಸುವುದಾದರೂ ಹೇಗೆ?
– ಪ್ರಶಾಂತ್‌ ಕುಲಾಲ್‌ ಆಲೂರು, ಬಿಎಸ್ಸೆನ್ನೆಲ್‌ ಬಳಕೆದಾರರು

ಶೀಘ್ರ ಪರಿಹಾರ
ಆಲೂರು ಹಾಗೂ ಗುಡ್ಡೆಯಂಗಡಿಯಲ್ಲಿ ಬಿಎಸ್ಸೆನ್ನೆಲ್‌ ನೆಟ್ ವರ್ಕ್‌ ಸಮಸ್ಯೆ ಬಗ್ಗೆ ದೂರು ಬಂದಿದೆ. ಒಎಫ್‌ಸಿಯಲ್ಲಿ ಸಮಸ್ಯೆ ಇರುವುದರಿಂದ ಕರೆ ಕಡಿತ ಆಗುತ್ತಿದೆ. ಆದಷ್ಟು ಶೀಘ್ರ ಸರಿಪಡಿಸಲಾಗುವುದು.
– ರಾಮಚಂದ್ರ, ಬಿಎಸ್ಸೆನ್ನೆಲ್‌ ಎಜಿಎಂ, ಕುಂದಾಪುರ

ಟಾಪ್ ನ್ಯೂಸ್

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ, ವಿವಿಗೆ ಮುತ್ತಿಗೆ

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ, ವಿವಿಗೆ ಮುತ್ತಿಗೆ

ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿಯೇದೆ ಪತನದ ನಿಗೂಢ ಕಾರಣ…

ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿದೆಯೇ ಪತನದ ನಿಗೂಢ ಕಾರಣ…

ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ಕರ್ನಾಟಕ ನಂ. 1 ಸ್ಥಾನಕ್ಕೆ: ಸಚಿವ ಸುಧಾಕರ್

ಮೊದಲ ಡೋಸ್ ವ್ಯಾಕ್ಸಿನೇಷನ್ ನಲ್ಲಿ ಕರ್ನಾಟಕ ನಂ. 1 ಸ್ಥಾನಕ್ಕೆ: ಸಚಿವ ಸುಧಾಕರ್

bommai

ನೈಟ್ ಕರ್ಫ್ಯೂ ಬಗ್ಗೆ ಸದ್ಯದಲ್ಲೇ ನಿರ್ಧಾರ: ಸಿಎಂ ಬೊಮ್ಮಾಯಿ

ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್: ಇಲ್ಲಿದೆ ವಿಡಿಯೋ

ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್: ಇಲ್ಲಿದೆ ವಿಡಿಯೋ

17accident

ಉಪ್ಪಿನಂಗಡಿ: ಸರಣಿ ಅಪಘಾತ, ತಪ್ಪಿದ ಭಾರಿ ದುರಂತ

ಚುನಾವಣೆ : ನಾಳೆ 228 ಮತಗಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿದೆ ಮತದಾನ

ಪರಿಷತ್ ಚುನಾವಣೆ : ನಾಳೆ 228 ಮತಗಟೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದೆ ಮತದಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಂದೂ ಜಗತ್ತಿನ ಜೀವಂತ ಪುರಾತನ ನಾಗರಿಕತೆ: ಡಾ| ಸುಬ್ರಮಣಿಯನ್‌ ಸ್ವಾಮಿ

ಹಿಂದೂ ಜಗತ್ತಿನ ಜೀವಂತ ಪುರಾತನ ನಾಗರಿಕತೆ: ಡಾ| ಸುಬ್ರಮಣಿಯನ್‌ ಸ್ವಾಮಿ

ಕೃಷ್ಣಾಪುರ ಪರ್ಯಾಯದ ಭತ್ತ ಮುಹೂರ್ತ

ಕೃಷ್ಣಾಪುರ ಪರ್ಯಾಯದ ಭತ್ತ ಮುಹೂರ್ತ

ಲೋವೋಲ್ಟೆಜ್‌ನಿಂದಾಗಿ ಪಂಪ್‌ಸೆಟ್‌ ಬಳಕೆಗೆ ಸಮಸ್ಯೆ: ಕೃಷಿ ನಾಶ

ಲೋವೋಲ್ಟೆಜ್‌ನಿಂದಾಗಿ ಪಂಪ್‌ಸೆಟ್‌ ಬಳಕೆಗೆ ಸಮಸ್ಯೆ: ಕೃಷಿ ನಾಶ

ಕಾಡು ಪ್ರಾಣಿಗಳಿಂದ ಬೆಳೆ ಹಾನಿ: ಪರಿಹಾರಕ್ಕೆ ಮೀನಮೇಷ

ಕಾಡು ಪ್ರಾಣಿಗಳಿಂದ ಬೆಳೆ ಹಾನಿ: ಪರಿಹಾರಕ್ಕೆ ಮೀನಮೇಷ

ಸಂತೆಕಟ್ಟೆ ಜಂಕ್ಷನ್‌ ಸಮಸ್ಯೆಗೆ ಮುಕ್ತಿ ಯಾವಾಗ?

ಸಂತೆಕಟ್ಟೆ ಜಂಕ್ಷನ್‌ ಸಮಸ್ಯೆಗೆ ಮುಕ್ತಿ ಯಾವಾಗ?

MUST WATCH

udayavani youtube

ಅಕಾಲಿಕ ಮಳೆಯ ಆತಂಕ.. ಯಂತ್ರದ ಮೂಲಕ ಭತ್ತದ ಒಕ್ಕಲು

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

ಹೊಸ ಸೇರ್ಪಡೆ

covid news

ಕೋವಿಡ್‌ ಪತ್ರದ ಚಿಕ್ಕ ಕಾರ್ಡ್‌ಗೆ ಡಿಮ್ಯಾಂಡ್‌

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ, ವಿವಿಗೆ ಮುತ್ತಿಗೆ

ಹುಬ್ಬಳ್ಳಿ: ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆಗೆ ಎಬಿವಿಪಿ ಬೆಂಬಲ, ವಿವಿಗೆ ಮುತ್ತಿಗೆ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಭತ್ತದ ಜಮೀನಿಗೆ‌ ನುಗ್ಗಿದ ಕಾಲುವೆ ನೀರು: ಅಪಾರ ಹಾನಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಭತ್ತದ ಜಮೀನಿಗೆ‌ ನುಗ್ಗಿದ ಕಾಲುವೆ ನೀರು: ಅಪಾರ ನಷ್ಟ

ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿಯೇದೆ ಪತನದ ನಿಗೂಢ ಕಾರಣ…

ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿದೆಯೇ ಪತನದ ನಿಗೂಢ ಕಾರಣ…

ಎರಡು ವರ್ಷದಿಂದ ಕುಂಟುತಲೇ ಸಾಗಿದ ಮೇಲ್ಸೇತುವೆ ಕಾಮಗಾರಿ

ಎರಡು ವರ್ಷದಿಂದ ಕುಂಟುತಲೇ ಸಾಗಿದ ಮೇಲ್ಸೇತುವೆ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.