ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿಗೆ ಮೀನ ಮೇಷ: ಸುಪ್ರೀಂ ಗರಂ
Team Udayavani, Mar 2, 2021, 10:25 PM IST
ನವದೆಹಲಿ: ಸಿಬಿಐ, ಇಡಿ, ಎನ್‌ಐಎನಂಥ ತನಿಖಾ ಸಂಸ್ಥೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ವಿಚಾರವನ್ನು ಮುಂದೂಡುತ್ತಿರುವ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಗರಂ ಆಗಿದೆ.
“ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತೀದ್ದೀರಿ ಎನ್ನುವುದು ಸ್ಪಷ್ಟವಾಗಿ ನಮ್ಮ ಅರಿವಿಗೆ ಬರುತ್ತಿದೆ. ಈ ವಿಚಾರ ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ್ದು. ಆದರೆ, ಇಂಥ ವಿಚಾರವನ್ನೇ ಮುಂದೂಡುವಂತೆ ಕೋರಿ ನೀವು ಪತ್ರ ಬರೆದಿರುವುದು ಸ್ವೀಕಾರಾರ್ಹವಲ್ಲ’ ಎಂದು ನ್ಯಾ. ಆರ್.ಎಫ್. ನಾರಿಮನ್ ನೇತೃತ್ವದ ಪೀಠ ತೀವ್ರ ಅಸಮಾಧಾನ ಸೂಚಿಸಿದೆ.
ತನಿಖಾ ಸಂಸ್ಥೆಗಳ ವಿಚಾರಣಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಕೆ ಕುರಿತು ಸುಪ್ರೀಂ ಡಿ.2ರಂದೇ ನಿರ್ದೇಶನ ನೀಡಿತ್ತು. ಆದರೆ, ಇದಕ್ಕೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಕೇಂದ್ರ ಪತ್ರ ಬರೆದಿತ್ತು.
ಇದನ್ನೂ ಓದಿ :ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ : ಯತ್ನಾಳಗೆ ಜಿಗಜಿಣಗಿ ಎಚ್ಚರಿಕೆ