ಬಿಟ್ ಕಾಯಿನ್ ನಿಷೇಧದ ಸುಳಿವು; ಒಂದೇ ದಿನದಲ್ಲಿ ಭಾರೀ ಕುಸಿತ ಕಂಡ ಕ್ರಿಫ್ಟೋ ಕರೆನ್ಸಿ ಮೌಲ್ಯ
ಅಧಿಕೃತ ಡಿಜಿಟಲ್ ಕರೆನ್ಸಿ ವಿಧೇಯಕ 2021 ವಿಧೇಯಕ ಮಂಡನೆಗೆ ಸಿದ್ಧತೆ
Team Udayavani, Nov 24, 2021, 12:34 PM IST
ನವದೆಹಲಿ: ಭಾರತದಲ್ಲಿ ಬಿಟ್ ಕಾಯಿನ್ (ಕ್ರಿಫ್ಟೋಕರೆನ್ಸಿ)ಗೆ ಪೂರ್ಣ ನಿಷೇಧ ಹೇರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿರುವ ನಡುವೆಯೇ ಬುಧವಾರ (ನವೆಂಬರ್ 24) ಕ್ರಿಫ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರೀ ಕುಸಿತ ಕಂಡಿದ್ದು, ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದೆ.
ಇದನ್ನೂ ಓದಿ:ಆದಷ್ಟು ಬೇಗ ವಾಪಸ್ಸಾಗುತ್ತೇನೆ ಎಂದು ವಿಮಾನ ಹತ್ತಿದ ರಶ್ಮಿಕಾ
ನಾವೇ ಡಿಜಿಟಲ್ ಕರೆನ್ಸಿ ಜಾರಿಗೊಳಿಸಬೇಕು ಎಂಬ ಆರ್ ಬಿಐ ಮನವಿ ಬೆನ್ನಲ್ಲೇ ಎಲ್ಲಾ ಕ್ರಿಫ್ಟೋಕರೆನ್ಸಿಗಳು ಶೇ.15ರಷ್ಟು ಕುಸಿತ ಕಂಡಿದೆ. ಇವುಗಳಲ್ಲಿ ಬಿಟ್ ಕಾಯಿನ್ ಮೌಲ್ಯದಲ್ಲಿ ಶೇ.18.53, ಎಥೇರಿಯಂ ಶೇ.15.58 ಹಾಗೂ ಟೆದರ್ ಮೌಲ್ಯದಲ್ಲಿ ಶೇ.18.29ರಷ್ಟು ಕುಸಿತವಾಗಿದೆ.
ಬಿಟ್ ಕಾಯಿನ್ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನ.29ರಿಂದ ಆರಂಭವಾಗಲಿರುವ ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಕ್ರಿಫ್ಟೋ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ವಿಧೇಯಕ 2021 ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಿದೆ.
ಸದ್ಯ ಖಾಸಗಿಯಾಗಿ ಚಾಲ್ತಿಯಲ್ಲಿರುವ ಕ್ರಿಫ್ಟೋ ಕರೆನ್ಸಿಗಳಿಗೆ ನಿಷೇಧ ಹೇರಿ, ಈಗಾಗಲೇ ಚರ್ಚೆಯಲ್ಲಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದಲೇ ಡಿಜಿಟಲ್ ಕರೆನ್ಸಿ ಜಾರಿ ಮಾಡುವ ಬಗ್ಗೆಯೂ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.
ಭಾರತದಲ್ಲಿ ಅಂದಾಜಿನ ಪ್ರಕಾರ 15 ರಿಂದ 20 ಮಿಲಿಯನ್ ಕ್ರಿಫ್ಟೋ ಕರೆನ್ಸಿ ಹೂಡಿಕೆದಾರರಿದ್ದು, ಅಂದಾರು ಮೌಲ್ಯ 40,000 ಕೋಟಿ ಎಂದು ವರದಿ ಹೇಳಿದೆ. ಕ್ರಿಫ್ಟೋ ಕರೆನ್ಸಿ ಮೇಲೆ ಹೂಡಿಕೆ ಮಾಡುವುದರಿಂದ ಅಧಿಕ ಲಾಭವಿದೆ ಎಂಬ ಪ್ರಚಾರವೂ ಹೆಚ್ಚಳವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಿ ಕೊಡುವವರೆಗೆ ಟ್ವಿಟರ್ ಖರೀದಿಸಲ್ಲ ಎಂದ ಮಸ್ಕ್
ಜಿಎಸ್‌ಟಿ ಪೋರ್ಟಲ್ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?
1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿ
ಇಂದು ಷೇರು ಮಾರುಕಟ್ಟೆಯಲ್ಲಿ ಎಲ್ಐಸಿ ಲಿಸ್ಟಿಂಗ್
ಬ್ಯಾಂಕ್ಗಳಿಗೆ ವಂಚನೆ ಶೇ. 51ರಷ್ಟು ಇಳಿಕೆ; ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ