ಬಾಲಕಿ ಮೇಲೆ ಅತ್ಯಾಚಾರ ಆರೋಪ : ದೇವಾಲಯದ ಪೂಜಾರಿ ಬಂಧನ
Team Udayavani, Jan 25, 2022, 8:54 PM IST
ಚಾಮರಾಜನಗರ : ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ದೇವಾಲಯದ ಪೂಜಾರಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಬೇಡಗುಳಿ ಗ್ರಾಮದಲ್ಲಿ ನಡೆದಿದೆ.
ಬೇಡಗುಳಿಯ ದೇವಾಲಯದಲ್ಲಿ ಪೂಜಾರಿಯಾಗಿದ್ದ ರವಿ (23) ಎಂಬಾತ 17 ವರ್ಷದ ಬಾಲಕಿಯ ಜೊತೆ ದೈಹಿಕ ಸಂಬಂಧ ಹೊಂದಿದ್ದ. ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆಶಾ ಕಾರ್ಯಕರ್ತರು ಕೋವಿಡ್ ಸಂಬಂಧ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾಗ, ಬಾಲಕಿ ಗರ್ಭಿಣಿಯಾಗಿರುವುದನ್ನು ಗಮನಿಸಿ ವಿಚಾರಿಸಿದಾಗ ಆಕೆ ಈ ವಿಷಯ ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
ಇದನ್ನೂ ಓದಿ : ನಾಗರಹೊಳೆಯಲ್ಲಿ ಮೊದಲ ಹಂತದ ಗಣತಿ ಮುಕ್ತಾಯ: ಮಲ,ಹಿಕ್ಕೆ, ಲದ್ದಿ ಸಂಗ್ರಹ, ಆ್ಯಪ್ ಮೂಲಕ ದಾಖಲು