ತಮಿಳು ನಟ ಸಿಂಬು ಕಾರು ಹರಿದು ವೃದ್ಧ ಸಾವು ; ಚಾಲಕನ ಬಂಧನ
Team Udayavani, Mar 24, 2022, 12:49 PM IST
ಚೆನ್ನೈ: ತಮಿಳು ನಟ ಸಿಲಂಬರಸನ್ ( ಸಿಂಬು) ಅವರ ಇನ್ನೋವಾ ಕಾರು ದುರದೃಷ್ಟವಶಾತ್ ಢಿಕ್ಕಿ ಹೊಡೆದು ದಾರಿಹೋಕ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ.
ಮಾಧ್ಯಮಗಳ ವರದಿಯ ಪ್ರಕಾರ, ಸಿಂಬು ಅವರ ತಂದೆ ಟಿ. ರಾಜೇಂದ್ರ ಅವರು ತಮ್ಮ ಮೊಮ್ಮಗಳೊಂದಿಗೆ ಮಾರ್ಚ್ 18 ರಂದು ಆಸ್ಪತ್ರೆಗೆ ಇನ್ನೋವಾದಲ್ಲಿ ತೆರಳುತ್ತಿದ್ದ ವೇಳೆ ಅವಘಡ ನಡೆದಿದೆ. ಘಟನೆ ನಡೆದ ವೇಳೆ ಕಾರನ್ನು ಅವರ ಚಾಲಕ ಸೆಲ್ವಂ ಚಲಾಯಿಸುತ್ತಿದ್ದರು. ದುರದೃಷ್ಟವಶಾತ್, ರಾತ್ರಿ 7 ಗಂಟೆ ವೇಳೆ ಎಲಂಗೋ ಸಲೈ-ಪೋಸ್ ರಸ್ತೆಯ ತಿರುವಿನಲ್ಲಿ ರಸ್ತೆ ದಾಟುತ್ತಿದ್ದ 70 ವರ್ಷದ ಮುನುಸ್ವಾಮಿ ಎಂಬ ದಾರಿಹೋಕರಿಗೆ ಕಾರು ಢಿಕ್ಕಿ ಹೊಡೆದು ಅವರು ಸಾವನ್ನಪ್ಪಿದ್ದಾರೆ. ಘಟನೆ ತಡವಾಗಿ ಸುದ್ದಿಯಾಗುತ್ತಿದೆ.
ಮೃತ ಮುನುಸ್ವಾಮಿ ಅಂಗವಿಕಲರಾಗಿದ್ದು, ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಗಂಭೀರವಾಗಿ ಗಾಯಗೊಂಡ ವರನ್ನು ರಾಜೇಂದ್ರ ಅವರು ಕಾರಿನಿಂದ ಕೆಳಗಿಳಿದು ಆಂಬ್ಯುಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತನ್ನ ಚಾಲಕನನ್ನು ಹೇಳಿದ್ದಾರೆ. ಸಿಂಬು ಅವರಿಗಾಗಿ ಮತ್ತೊಂದು ಕಾರನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಮರುದಿನ ಚಾಲಕನನ್ನು ಬಂಧಿಸಲಾಗಿದೆ.
ಘಟನೆಯ ಕುರಿತು ಸುಳ್ಳು ಮಾಹಿತಿಗಳನ್ನು ಹಬ್ಬಲಾಗುತ್ತಿದೆ. ಅವಘಡ ನಡೆದ ವೇಳೆ ಸಿಂಬು ಅವರು ಕಾರಿನಲ್ಲಿರಲಿಲ್ಲ, ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಅವರ ಕಚೇರಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA