ಎಂಟು ಸೋಲಿನೊಂದಿಗೆ ಕೂಟ ಮುಗಿಸಿದ ಆನಂದ್
Team Udayavani, Jul 31, 2020, 6:09 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚೆನ್ನೈ: ಲೆಜೆಂಡ್ಸ್ ಆಫ್ ಚೆಸ್ ಟೂರ್ನಮೆಂಟ್ನಲ್ಲಿ ವಿಶ್ವನಾಥನ್ ಆನಂದ್ ಎಂಟು ಸೋಲಿನೊಂದಿಗೆ ಕೂಟ ಮುಗಿಸಿದ್ದಾರೆ.
ಕಳೆದ ರಾತ್ರಿ ನಡೆದ 9ನೇ ಹಾಗೂ ಕೊನೆಯ ಸುತ್ತಿನಲ್ಲೂ ಆನಂದ್ ಪರಾಭವಗೊಂಡರು. ದೀರ್ಘಕಾಲದ
ಎದುರಾಳಿ ವ್ಯಾಸಿಲ್ ಇವಾನ್ಚುಕ್ ಎದುರಿನ ಈ ಮುಖಾಮುಖಿಯಲ್ಲಿ ಅವರು 2.5-2.5 ಸಮಬಲ ಸಾಧಿಸಿದರೂ ಕಪ್ಪು ಕಾಯಿಗಳಿಂದ ಆಡಿದ ಉಕ್ರೇನಿಯನ್ ಆಟಗಾರನನ್ನು ವಿಜಯಿ ಎಂದು ಘೋಷಿಸಲಾಯಿತು.
59 ನಡೆಗಳ ಬಳಿಕ ಟೈ-ಬ್ರೇಕರ್ ಪಂದ್ಯವನ್ನು ಇಬ್ಬರೂ ಡ್ರಾ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರು.
150,000 ಬಹುಮಾನದ ಈ ಕೂಟದಲ್ಲಿ ಆನಂದ್ 9 ಪಂದ್ಯಗಳಲ್ಲಿ ಕೇವಲ ಒಂದು ಜಯವನ್ನಷ್ಟೇ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಅವರಿಗೆ ಶರಣಾದ ಆಟಗಾರ ಬೊರಿಸ್ ಗೆಲ್ಫಾಂಡ್. 10 ಆಟಗಾರರ ಟೂರ್ನಿಯಲ್ಲಿ ಆನಂದ್ ಒಟ್ಟು 7
ಅಂಕಗಳೊಂದಿಗೆ 9ನೇ ಸ್ಥಾನಿಯಾದರು. 6 ಅಂಕಗಳನ್ನಷ್ಟೇ ಹೊಂದಿದ ಪೀಟರ್ ಲೆಕೊ ಅಂತಿಮ ಸ್ಥಾನಕ್ಕೆ ಕುಸಿದರು.
ಕಾರ್ಲ್ಸೆನ್ ಅಜೇಯ ಓಟ
ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸೆನ್ ಅಂತಿಮ ಮುಖಾಮುಖಿಯಲ್ಲಿ ನಾರ್ವೆಯ ವ್ಲಾದಿಮಿರ್ ಕ್ರಾಮ್ನಿಕ್ ವಿರುದ್ಧ 3-1 ಅಂತರದ ಜಯ ಸಾಧಿಸಿದ ಅಜೇಯ ದಾಖಲೆ ಕಾಯ್ದುಕೊಂಡರು. 25 ಅಂಕಗಳೊಂದಿಗೆ ಅವರು ಲೀಗ್ ಹಂತದ ಅಗ್ರಸ್ಥಾನದ ಗೌರವ ಸಂಪಾದಿಸಿದರು. ಕಾರ್ಲ್ಸೆನ್ ಅವರಿನ್ನು ಸೆಮಿಫೈನಲ್ನಲ್ಲಿ ರಶ್ಯದ ಪೀಟರ್ ಸ್ವಿಡ್ಲರ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಇನ್ನೊಂದು ಉಪಾಂತ್ಯದಲ್ಲಿ ಹಂಗೇರಿಯ ಅನಿಶ್ ಗಿರಿ ಮತ್ತು ರಶ್ಯದ ಇಯಾನ್ ನೆಪೊಮ್ನಿಯಾಚಿ ಎದುರಾಗುವರು. ಇದು ‘ಚೆಸೇಬಲ್ ಮಾಸ್ಟರ್’ ಸೆಮಿಫೈನಲ್ನ ಮರು ಪಂದ್ಯವಾಗಲಿದೆ.
ಅಂತಿಮ ಲೀಗ್ ಫಲಿತಾಂಶ: 1. ಮ್ಯಾಗ್ನಸ್ ಕಾರ್ಲ್ಸೆನ್ (25). 2. ಇಯಾನ್ ನೆಪೊಮ್ನಿಯಾಚಿ (20), 3. ಅನಿಶ್ ಗಿರಿ (18), 4. ಪೀಟರ್ ಸ್ವಿಡ್ಲರ್ (14), 5. ವ್ಯಾಸಿಲ್ ಇವಾನ್ಚುಕ್ (13), 6. ವ್ಲಾದಿಮಿರ್ ಕ್ರಾಮ್ನಿಕ್ (12), 7. ಬೊರಿಸ್ ಗೆಲ್ಫಾಂಡ್ (11), 8. ಡಿಂಗ್ ಲಿರೆನ್ (7), 9. ವಿಶ್ವನಾಥನ್ ಆನಂದ್ (7), 10. ಪೀಟರ್ ಲೆಕೊ (6).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ