ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತ: ಸಿಡಿಲು ಬಡಿದು ಮಹಿಳೆ ಸಾವು
Team Udayavani, Apr 14, 2021, 7:13 PM IST
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತ ಗೊಂಡಿತು.
ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಾಗಮ್ಮ ಮೃತಪಟ್ಟಿದ್ದಾಳೆ ಆಕೆಯೊಂದಿಗೆ ಜೊತೆಯಲ್ಲಿದ್ದ ಅರುಣ ಎಂಬುವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಸಂಜೆ ಸುರಿದ ಮಳೆಯಿಂದಾಗಿ ಚರಂಡಿ ನೀರು ಸರಾಗವಾಗಿ ಹರಿಯದಿದ್ದರಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು ಪರದಾಡುವ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು ನಗರದ ಶ್ರೀ ಮಹಾಕಾಳಿ ದೇವಾಲಯ ಮುಂಭಾಗ ಮಳೆ ನೀರು ನಿಂತಿದ್ದನ್ನು ಅರಿತು ಸಮಾಜ ಸೇವಕ ಮಹಾಕಾಳಿ ಬಾಬು ರಸ್ತೆಯಲ್ಲಿ ನಿಂತಿದ್ದ ನೀರು ಸರಾಗ ಹರಿಯಲು ವ್ಯವಸ್ಥೆ ಮಾಡಿದರು.
ಇದನ್ನೂ ಓದಿ :
ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗ ಮಧ್ಯೆ ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿ ಹರಿದಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮಳೆಯ ಪ್ರಭಾವದಿಂದ ಮೂರು ಹೋಬಳಿಗಳಲ್ಲಿ ಯಾವುದೇ ರೀತಿಯ ನಷ್ಟ ಸಂಭವಿಸುವ ವರದಿಗಳು ಬಂದಿಲ್ಲ ಎಂದು ತಹಸಿಲ್ದಾರ್ ತುಳಸಿ ಉದಯವಾಣಿಗೆ ತಿಳಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮಕ್ಕೆ ತಹಸಿಲ್ದಾರ್ ಬಿಎಸ್ ರಾಜು ಮತ್ತು ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ
ಬಾಂಗ್ಲಾದೇಶಿಯರ ಆಧಾರ್ ದಾಖಲೆ ಪರಿಶೀಲನೆಗೆ ಹೈಕೋರ್ಟ್ ಅನುಮತಿ
ವಿವಾಹಿತ ಹೆಣ್ಮಕ್ಕಳು ಅಪಘಾತ ವಿಮೆ ಪರಿಹಾರಕ್ಕೆ ಅರ್ಹರು: ಹೈಕೋರ್ಟ್
ರಾಯರಿಗೆ ಶ್ರೀರಂಗಂ ದೇವಸ್ಥಾನದಿಂದ ಶೇಷವಸ್ತ್ರ: ಮೊದಲ ಬಾರಿ ತಮಿಳುನಾಡು ಸರ್ಕಾರದಿಂದ ಸೇವೆೆ
ರಾಜ್ಯದಲ್ಲಿಂದು 2032 ಮಂದಿಗೆ ಕೋವಿಡ್ ಸೋಂಕು ದೃಢ; ಐವರ ಸಾವು
MUST WATCH
ಹೊಸ ಸೇರ್ಪಡೆ
ಕೆನಡಿಯನ್ ಮಾಸ್ಟರ್’ ಟೆನಿಸ್: ಕ್ವಾರ್ಟರ್ ಫೈನಲ್ ಗೆ ನಿಕ್ ಕಿರ್ಗಿಯೋಸ್
ಯುಎಇ ಇಂಟರ್ನ್ಯಾಶನಲ್ ಕ್ರಿಕೆಟ್ ಲೀಗ್: ಮೈ ಎಮಿರೇಟ್ಸ್ ಟಿ 20 ತಂಡ ಘೋಷಣೆ
ಏಷ್ಯಾ ಕಪ್ ಕ್ರಿಕೆಟ್: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ
ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್ಐಎ