ಕಾಫಿನಾಡು ಚಿಕ್ಕಮಗಳೂರಿನಲ್ಲಿ 207 ಮಂದಿಗೆ ಕೋವಿಡ್ ಸೋಂಕು ದೃಢ! ಇಬ್ಬರು ಸಾವು
Team Udayavani, Aug 30, 2020, 6:21 PM IST
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರವಿವಾರ 207 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲೆಯ ಸೋಂಕಿತರಲ್ಲಿ ಚಿಕ್ಕಮಗಳೂರು 67, ಕಡೂರು 69, ತರೀಕೆರೆ 35, ಮೂಡಿಗೆರೆ 32, ಕೊಪ್ಪ 3, ಎನ್.ಆರ್.ಪುರದಲ್ಲಿ 1 ಪ್ರಕರಣ ದೃಢಪಟ್ಟಿದೆ.
ಕೋವಿಡ್ ಸೋಂಕಿನಿಂದ ಇಂದು ಜಿಲ್ಲೆಯಲ್ಲಿ 118 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1164 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಇಲ್ಲಿವರೆಗೂ 70 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಒಟ್ಟು ಸೋಂಕಿತರ ಸಂಖ್ಯೆ 3951 ಕ್ಕೆ ಏರಿಕೆಯಾಗಿದೆ.