ಚಿಕ್ಕಮಗಳೂರು: ಮದುವೆಗೆ ತೆರಳುತ್ತಿದ್ದ ಕಾರು ಪಲ್ಟಿ; ನಾಲ್ವರು ಪಾರು
Team Udayavani, Jan 24, 2022, 11:05 AM IST
ಚಿಕ್ಕಮಗಳೂರು: ಸೋಮವಾರ ಪೇಟೆ ಮೂಲದ ಕುಟುಂಬವೊಂದು ಮದುವೆಗೆ ಬರುತ್ತಿದ್ದ ವೇಳೆ ಕಾರು ಪಲ್ಟಿಯಾದ ಘಟನೆ ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಅಡ್ಲಗದ್ದೆಯಲ್ಲಿ ನಡೆದಿದೆ.
ಸೋಮವಾರಪೇಟೆಯಿಂದ ಚಿಕ್ಕಮಗಳೂರಿಗೆ ಮದುವೆಗೆ ಕಾರಿನಲ್ಲಿ ಬರುತ್ತಿರುವ ವೇಳೆ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ರಸ್ತೆ ಕಾಣದೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಅದೃಷ್ಟವಶಾತ್ ನಾಲ್ವರು ಅಪಾಯದಿಂದ ಪಾರಾಗಿದ್ದು, ಮೂಡಿಗೆರೆ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.