ಅಪ್ಪನ ಹುಚ್ಚಾಟ : ಪುಟ್ಟ ಮಗಳಿಗೆ ಬೀಡಿ ಸೇದಿಸಿ ಮೂಗಿನಲ್ಲಿ ಹೊಗೆ ಬಿಡಲು ಹೇಳಿದ ಧೂರ್ತ
Team Udayavani, Nov 11, 2021, 8:13 PM IST
ಚಿಕ್ಕಮಗಳೂರು: ಮಕ್ಕಳನ್ನು ತಿದ್ದಿ ತೀಡಿ ಬದುಕಿನ ನೇರ ದಾರಿ ತೋರಬೇಕಾದವರೇ ಅಡ್ಡದಾರಿ ತೋರಿದರೆ? ಧೂರ್ತನೊಬ್ಬ ಪುಟ್ಟ ಬಾಲಕಿಗೆ ಬೀಡಿ ಕೊಟ್ಟು ಮೂಗಿನಲ್ಲಿ ಹೊಗೆ ಬಿಡಲು ಹೇಳಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾನೆ.
ಮೂಡಿಗೆರೆ ತಾಲೂಕಿನ ಅಂಗಡಿ ಸಮೀಪದ ಜಾಣಿಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪುಟ್ಟ ಮಗಳ ಕೈಗೆ ಬೀಡಿ ಕೊಟ್ಟು, ಸೇದಿಸಿ ಅದರ ವಿಡಿಯೋ ತೆಗೆದು ವಿಕೃತ ಆನಂದ ಪಡೆದಿದ್ದಾನೆ. ಆತನ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಳೆಯುವ ಮಕ್ಕಳ ಮುಂದೆ ಧೂಮಪಾನ, ಮಧ್ಯಪಾನದಂತಹ ದುಶ್ಚಟ ಮಾಡುವುದೇ ತಪ್ಪು. ಅದರಲ್ಲೂ ತಮ್ಮ ಮಗಳ ಕೈಗೆ ಬೀಡಿ ಕೊಟ್ಟು ವಿಡಿಯೋ ಮಾಡಿದ್ದಲ್ಲದೆ ಮೂಗಿನಿಂದ ಹೊಗೆ ಬಿಡು ಎಂದು ಹೇಳಿದ್ದಾನೆ.ಈ ವಿಡಿಯೋ ನೋಡಿದ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಮಾಷೆಗೋ ಅಥವಾ ಹುಚ್ಚಾಟಕ್ಕೂ ಮಗಳ ಕೈಗೆ ಬೀಡಿ ಕೊಟ್ಟು ವಿಡಿಯೋ ಮಾಡಿರುವುದು ಸರಿಯಲ್ಲ. ಆ ವ್ಯಕ್ತಿ ಯಾರೇ ಆಗಿದ್ದರೂ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್ಡಿಡಿ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ