ಬಾದಾಮಿಯಲ್ಲಿ ಕಣ್ಣೀರಿಟ್ಟ ಚಿಮ್ಮನಕಟ್ಟಿ ಪುತ್ರ ; ಸಿದ್ದರಾಮಯ್ಯಗೆ ಸಂದೇಶ?


Team Udayavani, Dec 27, 2021, 1:44 PM IST

1-fdsfdf

ಬಾದಾಮಿ: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಬಿ.ಬಿ. ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಅವರು ತಮ್ಮ ಜನ್ಮ ದಿನ ಸಮಾರಂಭದಲ್ಲಿ ಅಭಿಮಾನಿಗಳ ಎದುರು ಭಾವುಕವಾಗಿ ಕಣ್ಣೀರಿಟ್ಟ ಪ್ರಸಂಗ ಸೋಮವಾರ ನಡೆದಿದೆ.

ಪಟ್ಟಣದ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ನಡೆದ ಹುಟ್ಟು ಹಬ್ಬ ಕಾಯ೯ಕ್ರಮದಲ್ಲಿ ಕ್ಷೇತ್ರದ ಜನತೆಯ ಪ್ರೀತಿ-ಅಭಿಮಾನಕ್ಕೆ ಭಾವುಕರಾಗಿ ಭೀಮಸೇನ ಕಣ್ಣೀರಿಟ್ಟು, ನನ್ನ ಜನ್ಮ ದಿನಕ್ಕೆ ಇಷ್ಟು ಜನ ಸೇರ್ತಿರಿ ಅಂತಾ ಅಂದುಕೊಂಡಿದ್ದಿಲ್ಲ.ನನಗೆ ನೀವು ಆಸರೆಯಾಗಿರಿ,ನನಗೆ ನೀವೇ ತಂದೆ-ತಾಯಿ. ನನ್ನ ತಂದೆಯವರಿಗೆ ಹೇಗೆ ಶಕ್ತಿ ತುಂಬಿದ್ದೀರಿ, ಹಾಗೇ ನನ್ನ ಜೊತೆಗೂ ನೀವು ನಿಲ್ಲಬೇಕು.ದಯಮಾಡಿ ನನಗೆ ನಿಮ್ಮ ಆಸರೆ ಬೇಕು ಎಂದು ಪ್ರಾರ್ಥಿಸಿದರು.

ನಾನೊಂದು ಮಾತು ಹೇಳುತ್ತಿದ್ದೇನೆ , ನಾನು ಯಾರಿಗೂ ಕೆಟ್ಟದ್ದು ಮಾಡದೇ ಇಂದು ಅನುಭವಿಸುವ ಹಾಗಾಗಿದೆ. ಸಾಕಷ್ಟು ಬಾರಿ ಕೇಳಿಕೊಂಡೆ, ಹೇಳಿಕೊಂಡರೂ ನನ್ನನ್ನು ದ್ವೇಷಿಸುವುದು ಬಿಡುತ್ತಿಲ್ಲ. ಅನಾವಶ್ಯಕ ನನ್ನ ಹೆಸರು ಹಾಳು ಮಾಡುತ್ತಿದ್ದಾರೆ. ನನಗೆ ಬಹಳ ಮಂದಿ ಹೇಳುತ್ತಿದ್ದಾರೆ ಸಾಹುಕಾರ ನೀವು ಗಟ್ಟಿ ಆಗಬೇಕು ಅಂತಾ.ಈಗ ನಾನು ಗಟ್ಟಿಯಾಗಿಯೇ ಬಿಟ್ಟಿದ್ದೇನೆ, ಅದು ಎಲ್ಲಿಗೆ ಹತ್ತುತ್ತೇ ಹತ್ತಲಿ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಭೀಮಸೇನ ಮಾತಿಗೆ ಕೇಕೆ ಹಾಕಿ ಚಪ್ಪಾಳೆ ತಟ್ಟಿದ ಬೆಂಬಲಿಗರು, ನಾವಿದ್ದೆವೆ ಸಾಹುಕಾರ್ ನೀವು ಕಣ್ಣಿರು ಹಾಕಬೇಡಿ. ಏನೇ ಬರಲಿ ನೋಡೋಣ ಎಂದು ಧೈರ್ಯ ತುಂಬಿದರು.

ನನ್ನ ಹಣೆ ಬರಹ ಏನಿದಿಯೋ ಗೊತ್ತಿಲ್ಲ, ನಿಮ್ಮ ಉಡಿಯಲ್ಲಿ ಬಿದ್ದಿದ್ದೇನೆ. ನನ್ನ ಎತ್ತಿಕೊಳ್ಳುವುದು, ಬಿಡುವುದು ನಿಮ್ಮ ಜವಾಬ್ದಾರಿ. ನನ್ನ ತಂದೆಯವರಂತೆ ನನ್ನನ್ನು ಬೆಂಬಲಿಸಿ ಉಳಿಸಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿ ಎಂದರು.

ಇಂದು ಗೊತ್ತಾಯ್ತು ನೀವು ನನ್ನ ಜೊತೆಗೆ ನಿಂತಿದ್ದೀರಿ ಎಂದು, ಈ ಮುಖಾಂತರನೇ ತೋರಿಸಬೇಕಿತ್ತು, ಈ ಸಮಯಕ್ಕಾಗಿ ನಾನು ಕಾಯುತ್ತಿದ್ದೆ ಎಂದು ಮುಂದಿನ ವಿಧಾನ ಸಭೆಯಲ್ಲಿ ಅಭ್ಯರ್ಥಿಯಾಗುವ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ನಾಯಕರಿಗೆ ರವಾನಿಸಿದರು.

ಸಿದ್ದರಾಮಯ್ಯ ಅವರಿಗಾಗಿ ಚಿಮ್ಮನಕಟ್ಟಿ ಅವರು ಕ್ಷೇತ್ರ ಬಿಟ್ಟು ಕೊಟ್ಟಿದ್ದರು, ಕೆಲ ದಿನಗಳ ಹಿಂದೆ ಚಿಮ್ಮನಕಟ್ಟಿ ವೇದಿಕೆಯಲ್ಲೇ ಅಸಮಾಧಾನ ಹೊರ ಹಾಕಿದ್ದರು. ಆ ಘಟನೆ ಕಾಂಗ್ರೆಸ್ ನಲ್ಲಿ ಭಾರಿ ಗೊಂದಲಕ್ಕೆ ಕಾರಣವಾಗಿತ್ತು.

ಟಾಪ್ ನ್ಯೂಸ್

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಸುಬ್ರಹ್ಮಣ್ಯ : ವ್ಯಕ್ತಿಗೆ ಚೂರಿ ಇರಿತ; ಆರೋಪಿ ಪರಾರಿ

ಸುಬ್ರಹ್ಮಣ್ಯ : ವ್ಯಕ್ತಿಗೆ ಚೂರಿ ಇರಿತ; ಆರೋಪಿ ಪರಾರಿ

1-sa-dsd

ಅಮರನಾಥ ಯಾತ್ರೆ : ಬೆಳಗ್ಗೆ 7 ರಿಂದ ಸಂಜೆ 6 ರ ನಡುವೆ ಮಾತ್ರ ಪ್ರಯಾಣ

mamata

ಸಿಎಂ ಮಮತಾ ಬ್ಯಾನರ್ಜಿ ಮನೆಯಲ್ಲಿ ಭಾರಿ ಭದ್ರತಾ ಲೋಪ ; ತನಿಖೆ

kejriwal 2

ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋದ ಯುವತಿ ನಾಪತ್ತೆ

1-sf-s-fdf

ಪ್ರಧಾನಿ ಕಚೇರಿ ಅಧಿಕಾರಿ ಎಂದು ಡಿಸಿಗೆ ಕರೆ : ದೂರು ದಾಖಲು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK

ಮಂಕುಬೂದಿ ಎರಚಿ…; ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೆಚ್ ಡಿಕೆ ಕಿಡಿ

ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದರ‍್ಯಾರು : ಹೇಳೋರು-ಕೇಳೋರು ಇಲ್ಲಿಲ್ಲ…

ಹೆದ್ದಾರಿ ಅತಿಕ್ರಮಣಕ್ಕಿಲ್ಲಿ ರಹದಾರಿ ನೀಡಿದವರ‍್ಯಾರು : ಹೆದ್ದಾರಿ ಸವಾರಿ ಆಯೋಮಯ..

ವಿಜಯಪುರ : ಸಾತಪುರ ಗ್ರಾಮದ ಜನರಲ್ಲಿ ವಾಂತಿ ಭೇದಿ ಉಲ್ಬಣ : ನೂರಾರು ಮಂದಿ ಆಸ್ಪತ್ರೆಗೆ ದಾಖಲು

ವಿಜಯಪುರ : ಸಾತಪುರ ಗ್ರಾಮದ ಜನರಲ್ಲಿ ವಾಂತಿ ಭೇದಿ : ನೂರಾರು ಮಂದಿ ಆಸ್ಪತ್ರೆಗೆ ದಾಖಲು

1-dsf-sdfsdf

ಯಾವುದೇ ಷರತ್ತುಗಳಿಲ್ಲದೆ ಎಚ್.ಆರ್.ಶ್ರೀನಾಥ್ ಕಾಂಗ್ರೆಸ್ ಸೇರ್ಪಡೆ

ಕುಣಿಗಲ್ : ಸ್ನೇಹಿತನ ಅಂತ್ಯಕ್ರಿಯೆಗೆ ಬಂದವ ರಸ್ತೆ ಅಪಘಾತಕ್ಕೆ ಬಲಿ

ಕುಣಿಗಲ್ : ಸ್ನೇಹಿತನ ಅಂತ್ಯಕ್ರಿಯೆಗೆ ಬಂದವ ರಸ್ತೆ ಅಪಘಾತಕ್ಕೆ ಬಲಿ

MUST WATCH

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

udayavani youtube

ಎಂ.ಎಸ್ ಧೋನಿಯ 17 ವರ್ಷ ಹಿಂದಿನ ದಾಖಲೆ ಮುರಿದ ರಿಷಭ್ ಪಂತ್

udayavani youtube

ಮಲ್ಪೆಯಲ್ಲಿ ಲಂಗರು ಹಾಕಿದ್ದ ದೋಣಿಯ ಅವಶೇಷ ಕಾಪು ಪರಿಸರದಲ್ಲಿ ಪತ್ತೆ… ಅಪಾರ ನಷ್ಟ

udayavani youtube

ಹುಣಸೂರು : ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂಪಾಯಿ ನಷ್ಟ… ಕಂಗಾಲಾದ ಮಾಲೀಕ

ಹೊಸ ಸೇರ್ಪಡೆ

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಸುಬ್ರಹ್ಮಣ್ಯ : ವ್ಯಕ್ತಿಗೆ ಚೂರಿ ಇರಿತ; ಆರೋಪಿ ಪರಾರಿ

ಸುಬ್ರಹ್ಮಣ್ಯ : ವ್ಯಕ್ತಿಗೆ ಚೂರಿ ಇರಿತ; ಆರೋಪಿ ಪರಾರಿ

1-sa-dsd

ಅಮರನಾಥ ಯಾತ್ರೆ : ಬೆಳಗ್ಗೆ 7 ರಿಂದ ಸಂಜೆ 6 ರ ನಡುವೆ ಮಾತ್ರ ಪ್ರಯಾಣ

mamata

ಸಿಎಂ ಮಮತಾ ಬ್ಯಾನರ್ಜಿ ಮನೆಯಲ್ಲಿ ಭಾರಿ ಭದ್ರತಾ ಲೋಪ ; ತನಿಖೆ

kejriwal 2

ಉದಯಪುರ-ಅಮರಾವತಿ ಹತ್ಯೆಗಳನ್ನು ಖಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.