ಚೀನಾ ರಕ್ಷಣಾ ಬಜೆಟ್ 15.27 ಲಕ್ಷ ಕೋಟಿ ರೂ.ಗೇರಿಕೆ
Team Udayavani, Mar 5, 2021, 10:35 PM IST
ಬೀಜಿಂಗ್: ಭಾರತದ ಶತ್ರುರಾಷ್ಟ್ರ ಚೀನಾ ಈ ಬಾರಿಯೂ ತನ್ನ ರಕ್ಷಣಾ ಬಜೆಟನ್ನು ಭಾರೀ ಪ್ರಮಾಣದಲ್ಲಿ ಏರಿಸಿದೆ. ಸತತ 6ನೇ ವರ್ಷವೂ ಬಜೆಟನ್ನು ಒಂದಂಕಿ ಪ್ರಮಾಣದಲ್ಲಿ (ಈ ವರ್ಷ ಶೇ.6.8) ಏರಿಸಿರುವ ಅದು, ಪ್ರಸ್ತುತ ಮೊತ್ತವನ್ನು 209 ಬಿಲಿಯನ್ ಡಾಲರ್‌ಗೆ (15.276 ಲಕ್ಷ ಕೋಟಿ ರೂ.) ಮುಟ್ಟಿಸಿದೆ.
ಆದರೆ ಹೀಗೆ ರಕ್ಷಣೆಗೆ ಹೆಚ್ಚಿನ ಹಣ ನೀಡಿರುವುದು ತನ್ನ ರಕ್ಷಣೆಗಾಗಿಯೇ ವಿನಃ ಯಾವುದೇ ದೇಶವನ್ನು ಗುರಿಯಾಗಿಸಿಕೊಂಡಲ್ಲ ಎಂದು ಚೀನಾ ಸಂಸತ್ ವಕ್ತಾರ ಝಾಂಗ್ ಯೆಸುಯಿ ಹೇಳಿದ್ದಾರೆ.
ಅಮೆರಿಕದ ರಕ್ಷಣಾ ಬಜೆಟ್‌ಗೆ ಹೋಲಿಸಿದರೆ, ಚೀನಾ ನೀಡಿರುವ ಮೊತ್ತ ಅದರ ಕಾಲುಭಾಗವಾಗಿದೆ. 2020-21ರ ಭಾರತದ ಒಟ್ಟು ಬಜೆಟ್ ಮೊತ್ತದ ಅರ್ಧಕ್ಕಿಂತ ಸ್ವಲ್ಪ ಕಡಿಮೆ ಹಣವನ್ನು ಚೀನಾ ತನ್ನ ರಕ್ಷಣೆಗೆ ಮೀಸಲಿಟ್ಟಿದೆ!
ಇದನ್ನೂ ಓದಿ:ಇರಾಕ್‌ಗೆ ಪೋಪ್ ಭೇಟಿ :ಕ್ರಿಶ್ಚಿಯನ್ನರ ನೆರವಿನಿಂದ ಇಸ್ಲಾಂ ರಾಷ್ಟ್ರ ಮರುಕಟ್ಟುವ ಚಿಂತನೆ