ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ
ಸಂಸದ ಬಿಟ್ಟು ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ.
Team Udayavani, Jan 25, 2021, 11:57 AM IST
ಚಂಡೀಗಢ್: ಸಿಂಘು ಗಡಿ ಪ್ರದೇಶದಲ್ಲಿ ಆಯೋಜಿಸಿದ್ದ “ಜನ್ ಸಂಸದ್” ಕಾರ್ಯಕ್ರಮಕ್ಕೆ ತೆರಳಿದ್ದ ಕಾಂಗ್ರೆಸ್ ಸಂಸದ ರವ್ ನೀತ್ ಸಿಂಗ್ ಬಿಟ್ಟು ಅವರ ಮೇಲೆ ಹಲ್ಲೆ ನಡೆಸಿ, ಟರ್ಬನ್ ಅನ್ನು ಹಿಡಿದೆಳೆದ ಘಟನೆ ನಡೆದಿರುವುದಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ:ವಿಟ್ಲ: ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವು
ಅಮೃತ್ ಸರದ ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜಿಲಾ, ಕಾಂಗ್ರೆಸ್ ಶಾಸಕ ಕುಲ್ಬೀರ್ ಸಿಂಗ್ ಝಿರಾ ಅವರ ಜೊತೆ ತೆರಳಿದ್ದ ಲುಧಿಯಾನಾ ಸಂಸದ ಬಿಟ್ಟು ಅವರ ವಾಹನ ಅನ್ನು ಕೂಡಾ ಜಖಂಗೊಳಿಸಿರುವುದಾಗಿ ವರದಿ ತಿಳಿಸಿದೆ.
ಕೆಲವು ದುಷ್ಕರ್ಮಿಗಳು ನಮ್ಮ ಮೂವರ ಮೇಲೆ ದಾಳಿ ನಡೆಸಿ ಇಡೀ ಪರಿಸ್ಥಿತಿಯನ್ನು ಹಾಳುಗೆಡವಲು ಯತ್ನಿಸಿದ್ದು, ಇದೊಂದು ಕೊಲೆ ಯತ್ನದಂತಹ ದಾಳಿಯಾಗಿದೆ ಎಂದು ಸಂಸದ ಬಿಟ್ಟು ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಬಜೆಟಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನ ಕ್ರಮ ಘೋಷಣೆ ನಿರೀಕ್ಷೆ
ಕೆಲವು ವ್ಯಕ್ತಿಗಳು ಏಕಾಏಕಿ ನಮ್ಮ ಬಳಿ ಬಂದು ಎಳೆದಾಡಿದ್ದರು. ನಮ್ಮ ಟರ್ಬನ್ ಅನ್ನು ಕಿತ್ತು ತೆಗೆದಿದ್ದರು. ಇದೊಂದು ಕೊಲೆ ಯತ್ನವಾಗಿದೆ. ಈ ಸಂದರ್ಭದಲ್ಲಿ ಕೆಲವರು ಬಂದು ನಮ್ಮನ್ನು ರಕ್ಷಿಸಿದ್ದರು. ಆದರೂ ನಮ್ಮ ಎಸ್ ಯುವಿ ಮೇಲೆ ದೊಣ್ಣೆಯಿಂದ ಹೊಡೆದು ಜಖಂಗೊಳಿಸಿ, ಕಾರಿನ ಗಾಜನ್ನು ಪುಡಿಗೈದಿರುವುದಾಗಿ ಬಿಟ್ಟು ಆರೋಪಿಸಿದ್ದಾರೆ.
ಸಂಸದ ಬಿಟ್ಟು ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ. 1995ರಲ್ಲಿ ಬಿಯಾಂತ್ ಅವರ ಹತ್ಯೆಯಾಗಿತ್ತು. ಔಜಿಲಾ ಮತ್ತು ಝಿರಾ ಅವರು ರೈತರ ಪ್ರತಿಭಟನೆ ಬೆಂಬಲಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಕೆಲವು ದಿನಗಳ ಕಾಲ ಪ್ರತಿಭಟನೆಯನ್ನು ಆಯೋಜಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TRP ತಿರುಚಿದ ಪ್ರಕರಣದ ಆರೋಪಿ ಪಾರ್ಥೋ ದಾಸ್ ಗುಪ್ತಾಗೆ ಬಾಂಬೆ ಕೋರ್ಟ್ ಜಾಮೀನು..!
ಕೋವ್ಯಾಕ್ಸಿನ್ ಪಡೆದ ನಟ ಕಮಲ್ ಹಾಸನ್, ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ!
ಬಿಜೆಪಿ ಹಿರಿಯ ಮುಖಂಡ, ಲೋಕಸಭಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನ
ದಕ್ಷಿಣ ಭಾರತ ಹೊರತು ಪಡಿಸಿ ಉಳಿದೆಡೆ ಬಿಸಿಲ ಬೇಗೆ ಇನ್ನಷ್ಟು ಏರಿಕೆ ಸಾಧ್ಯತೆ : ಐ ಎಮ್ ಡಿ
ಈ ಅಂಗಡಿಯಲ್ಲಿ ಒಂದು ಕಪ್ ಟೀ ಬೆಲೆ ಬರೋಬ್ಬರಿ 1000ರೂ..!