ಕುರಿ, ಉಣ್ಣೆ ಅಭಿವೃದ್ಧಿ ನಿಗಮ ಮಾಂಸ ಉತ್ಪಾದನ ಒಕ್ಕೂಟವಾಗಿ ಪರಿವರ್ತನೆ: ಬೊಮ್ಮಾಯಿ

Team Udayavani, Aug 14, 2022, 10:32 PM IST

ಕುರಿ, ಉಣ್ಣೆ ಅಭಿವೃದ್ಧಿ ನಿಗಮ ಮಾಂಸ ಉತ್ಪಾದನ ಒಕ್ಕೂಟವಾಗಿ ಪರಿವರ್ತನೆ: ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವನ್ನು ಮಾಂಸ ಉತ್ಪಾದನ ಒಕ್ಕೂಟವಾಗಿ ಪರಿವರ್ತಿಸಲು ಅಪೆಕ್ಸ್‌ ಸಂಸ್ಥೆ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಭಾನುವಾರ ನಡೆದ ಕುರಿಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ ಡಿ.ಪಿ.ಆರ್‌ ಆಗಿದೆ. ಶೇ. 25 ಸಹಾಯಧನದ ಜೊತೆಗೆ ಶೇ.50 ಸಾಲ ನೀಡುವ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿರುವುದಾಗಿ ಅವರು ತಿಳಿಸಿದರು.

ಇದಕ್ಕಾಗಿ ಕುರಿಗಾಹಿಗಳ ಒಕ್ಕೂಟ ಮತ್ತು ನಿಗಮ ಎರಡನ್ನೂ ಉಪಯೋಗಿಸಿಕೊಳ್ಳಬೇಕು. ಎರಡರ ಸಮನ್ವಯದೊಂದಿಗೆ ಮುನ್ನಡೆಯಬೇಕು. ಯೋಜನೆಯ ಅನುಷ್ಠಾನಕ್ಕೆ ರಚಿಸುವ ಅಪೆಕ್ಸ್‌ ಸಂಸ್ಥೆಯು ನಿಗಮದವರನ್ನೂ ಒಳಗೊಂಡಿರಬೇಕು. ಇದು ಮೊದಲ ಹಂತ. ಇನ್ನೂ ಸುಧಾರಣೆಗೆ ಅವಕಾಶಗಳಿವೆ ಎಂದರು.

ಕೇಂದ್ರ ಸರ್ಕಾರದ ಎನ್‌.ಸಿ.ಡಿ.ಸಿ ಸಾಲ ಪಡೆಯಬಹುದು. ಶೇ.50 ಸಾಲ, ಶೇ.25 ಸಹಾಯಧನವಾದರೆ ಇನ್ನುಳಿದ ಮೊತ್ತವನ್ನು ಕೊಡುಗೆ ರೂಪದಲ್ಲಿ ಪಡೆಯಬೇಕು. ಕೊಡುಗೆ ನೀಡುವ ವಿಚಾರದಲ್ಲಿ ಒಕ್ಕೂಟದ ಕೆಲಸ ಬಹಳ ಮುಖ್ಯ. ಕುರಿಗಾಹಿಗಳನ್ನು ಸದಸ್ಯರನ್ನಾಗಿಸಿಕೊಳ್ಳಬೇಕು. ಇದಕ್ಕಾಗಿ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನವರೊಂದಿಗೆ ಪ್ರತ್ಯೇಕ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ನವೆಂಬರ್‌ ಒಳಗೆ ಫ‌ಲಾನುಭವಿಗಳ ಆಯ್ಕೆ: ಯೋಜನೆಗೆ ವ್ಯಾಪಕ ಪ್ರಚಾರ ನೀಡಬೇಕು. ಅರ್ಜಿ ಹಾಕದೆಯೇ ಫ‌ಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಬಡವರಿಗೆ, ಬಿಸಿಲು,ಮಳೆ ಗಾಳಿಯಲ್ಲಿ ಕೆಲಸ ಮಾಡುವವರಿಗೆ ಸಣ್ಣ ಸಹಾಯ ಮಾಡುವ ಯೋಜನೆ ಇದಾಗಿದೆ. ನವೆಂಬರ್‌ ಒಳಗೆ ಆಯ್ಕೆಗಳನ್ನು ಪೂರ್ಣಗೊಳಿಸಿದರೆ, ಚೆಕ್‌ ಗಳನ್ನು ನೀಡಲು ಪ್ರಾರಂಭಿಸಬಹುದು. ಅನುಷ್ಠಾನ ಮಾಡುವ ನಿಟ್ಟಿನಲ್ಲಿ ನಿಗಮದವರು ಸೂಕ್ತ ಕೆಲಸ ಮಾಡಬೇಕು. ಎಷ್ಟು ಕುರಿ ಹೆಚ್ಚಾಗಿದೆ, ಅವುಗಳ ತೂಕದ ಮಾಪನವಾಗಬೇಕು. ಸಂಘಟನೆಯನ್ನು ಬಲಪಡಿಸುವ ಕೆಲಸವೂ ಆಗಬೇಕಿದೆ ಎಂದರು.

ಮೌಲ್ಯವೃದ್ಧಿ ಆಗಬೇಕು: ಸುಲಭವಾಗಿ ಬ್ಯಾಂಕ್‌ ಖಾತೆ ತೆರೆದು ಕುರಿ ಸಾಕಾಣಿಕೆಗೆ ಸಹಕಾರಿ ಆಗಬೇಕು. ರಫ್ತುದಾರರೊಂದಿಗೆ ನೇರವಾಗಿ ಟೈ ಅಪ್‌, ಒಪ್ಪಂದ ಮಾಡಿಕೊಳ್ಳಬೇಕು. ಕುರಿ ಮತ್ತು ಕುರಿ ಮಾಂಸ ದೊಡ್ಡ ಆರ್ಥಿಕತೆಯಾಗಬೇಕು. ಇದಕ್ಕೊಂದು ಹೊಸ ಆಯಾಮ ಸಿಗಲಿದೆ. ಕೆಎಂಎಫ್ ಕಟ್ಟಿದಂತೆಯೇ ಮಾಂಸ ಉತ್ಪಾದನೆ ದೊಡ್ಡ ಆರ್ಥಿಕತೆಯಾಗಬೇಕು. ಹಾಲು, ಮಾಂಸದ ಗುಣಮಟ್ಟ ಹೆಚ್ಚಿಸುವುದಲ್ಲದೆ ಮೌಲ್ಯವೃದ್ಧಿ ಮಾಡುವಂತಾಗಬೇಕು. ಈ ಕುರಿತಂತೆ 8 -10 ದಿನಗಳಲ್ಲಿ ಆದೇಶ ಹೊರಡಿಸುವುದಾಗಿ ಮುಖ್ಯ ಮಂತ್ರಿಗಳು ಭರವಸೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಗೋ ಮತ್ತು ಕುರಿ ಸಾಕಾಣಿಕೆ ಪ್ರಮುಖವಾದದ್ದು. ನಮ್ಮಲ್ಲಿ ಶೇ.70 ಬಯಲುಸೀಮೆ ಇದೆ. ಒಣ ಹವೆ ಹೆಚ್ಚಿದ್ದು, ಹಸಿರು ಹುಲ್ಲು ಮೇಯುವ ಪ್ರಾಣಿಗಳ ಸಂಖ್ಯೆ ಇಲ್ಲಿ ಹೆಚ್ಚು. ನಮ್ಮ ಆಸ್ತಿ ಇದು. ಇದರ ಅನುಗುಣವಾಗಿ ನಮ್ಮ ಆಹಾರ ಪದ್ಧತಿಯೂ ಇದೆ. ಕೋಳಿ ಮತ್ತು ಕುರಿಗೆ ಬೇಡಿಕೆ ಇದೆ. ಗೋ ಮಾಂಸಕ್ಕೆ ಧಾರ್ಮಿಕ ಮತ್ತಿತರ ಕಾರಣಗಳಿಂದ ಬೇಡಿಕೆ ಕಡಿಮೆ ಇದೆ. ಕುರಿ ಮಾಂಸ ವಿದೇಶಕ್ಕೆ ರಫ್ತು ಆಗುತ್ತದೆ. ಆದರೆ ಕುರಿಗಾಹಿಗೆ ಈ ಲಾಭ ಮುಟ್ಟುತ್ತಿಲ್ಲ. ಏಕೆಂದರೆ ಅವರು ಸಂಘಟಿತರಾಗಿಲ್ಲ. ಸಾಮಾಜಿಕವಾಗಿಯೂ ಸಮಾಜ ಅವರನ್ನು ಗುರುತಿಸದೆ ದೂರ ಇಟ್ಟಿದೆ. ಇದು ನಮ್ಮ ದುರ್ದೈವ ಎಂದು ಹೇಳಿದರು.

ಈ ಬಾರಿಯ ಆಯವ್ಯಯದಲ್ಲಿ ಕುರಿಗಾರಿಗಳಿಗೆ ಅನುಗ್ರಹ ಯೋಜನೆ ಪುನಃ ಜಾರಿ ಮಾಡಿದ್ದೇವೆ. ಕುರಿಗಳ ಹಟ್ಟಿ ನಿರ್ಮಿಸಲು ಅನುದಾನ ನೀಡಲಾಗಿದೆ. ಇದರಿಂದ 5-6 ಲಕ್ಷ ಜನರಿಗೆ ಅನುಕೂಲವಾಗಲಿದೆ, ಸ್ಥಿರವಾದ ಬದುಕು ಸಿಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.