ಕೊರೊನಾ ಸೋಂಕು ಏರಿಕೆ: ಬೆಳಗಾವಿ ಜಿಲ್ಲೆಯ ಶಾಲೆಗಳಿಗೆ ಒಂದು ವಾರ ರಜೆ
Team Udayavani, Jan 10, 2022, 6:58 PM IST
Representative Image
ಬೆಳಗಾವಿ: ಕಿತ್ತೂರಿನ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೊನಾ ಸೋಂಕು ಏರಿಕೆ ಆಗಿದ್ದಕ್ಕೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಜಿಲ್ಲೆಯ 1ರಿಂದ 9ನೇ ತರಗತಿ ವರೆಗಿನ ಶಾಲೆಗಳಿಗೆ ಒಂದು ವಾರಗಳ ಕಾಲ ರಜೆ ನೀಡಿ ಆದೇಶ ಹೊರಡಿಸಿದೆ.
ಜ. 11ರಿಂದ 18ರ ವರೆಗೆ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ನೀಡಲಾಗಿದೆ. ಕೊರೊನಾ ಮೂರನೇ ಅಲೆ ವ್ಯಾಪಿಸುತ್ತಿರುವುದರಿಂದ ಮಕ್ಕಳಿಗೆ ಸೋಂಕು ಹರಡದಂತೆ ಮುಂಜಾಗ್ರತ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಿ ಆದೇಶ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.
ಕಿತ್ತೂರು ಪಟ್ಟಣದಲ್ಲಿರುವ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಸೇರಿ 70ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಐಸೋಲೇಷನ್ ಗೆ ಒಳಪಡಿಸಲಾಗಿದೆ.