Udayavni Special

ಕೋವಿಡ್ 19 ಸೋಂಕಿಗೆ ಸಗಣಿ ಥೆರಪಿ ಪರಿಣಾಮಕಾರಿಯೇ? ವೈದ್ಯರು ಮತ್ತು ವಿಜ್ಞಾನಿಗಳು ಹೇಳುವುದೇನು

ಈ ರೀತಿ ಥೆರಪಿ ಮಾಡಿಸಿಕೊಳ್ಳುವವರು ಯಾವುದೇ ಭಯವಿಲ್ಲದೇ ಕೋವಿಡ್ ರೋಗಿಗಳ ಬಳಿ ಹೋಗುತ್ತಾರೆ

Team Udayavani, May 11, 2021, 10:12 AM IST

ಕೋವಿಡ್ 19 ಸೋಂಕಿಗೆ ಸಗಣಿ ಥೆರಪಿ ಪರಿಣಾಮಕಾರಿಯೇ? ವೈದ್ಯರು ಮತ್ತು ವಿಜ್ಞಾನಿಗಳು ಹೇಳುವುದೇನು

ಅಹಮದಾಬಾದ್: ಕೋವಿಡ್ ಎರಡನೇ ಅಲೆ ಕ್ಷಿಪ್ರವಾಗಿ ಹರಡುತ್ತಿದ್ದು, ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಫುಟ್ನಿಕ್ 5 ಲಸಿಕೆ ಬಳಕೆ ಮಾಡಲಾಗುತ್ತಿದೆ. ಏತನ್ಮಧ್ಯೆ ಹಲವಾರು ಊಹಾಪೋಹ, ನಂಬಿಕೆಗಳು ಹರದಾಡುತ್ತಿದ್ದು, ಇದರಲ್ಲಿ ಹಸುವಿನ ಸಗಣಿಯೂ ಸೇರಿದೆ. ಹಸುವಿನ ಸಗಣಿಯನ್ನು ಮೈಗೆ ಹಚ್ಚಿಕೊಂಡರೆ ಕೋವಿಡ್ ಸೋಂಕು ತಗಲುವುದಿಲ್ಲ ಎಂಬ ನಂಬಿಕೆಗೆ ಸಂಬಂಧಿಸಿದಂತೆ ಇದೀಗ ಭಾರತ ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.

ಹಸುವಿನ ಸಗಣಿ ಬಳಸಿದರೆ ಕೋವಿಡ್ 19 ಸೋಂಕು ತಡೆಗಟ್ಟುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಅದು ಪರಿಣಾಮಕಾರಿಯೂ ಅಲ್ಲ. ಇದರಿಂದ ಬೇರೆ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಭಾರತದಲ್ಲಿ ಮಾರಣಾಂತಿಕ ಕೋವಿಡ್ ಎರಡನೇ ಅಲೆ ತೀವ್ರ ಭೀತಿಯನ್ನು ಹುಟ್ಟುಹಾಕಿದ್ದು, ಈಗಾಗಲೇ 22.66 ಲಕ್ಷ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 2,46,116 ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ.

ತಜ್ಞರ ಪ್ರಕಾರ, ಕೋವಿಡ್ ಪ್ರಕರಣಗಳ ಸಂಖ್ಯೆ ಐದರಿಂದ ಹತ್ತು ಪಟ್ಟು ಹೆಚ್ಚಳವಾಗಿದೆ. ಅಲ್ಲದೇ ದೇಶಾದ್ಯಂತ ಜನರು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ಔಷಧಕ್ಕಾಗಿ ಪರದಾಡುವಂತಾಗಿದ್ದು, ಸೂಕ್ತ ಚಿಕಿತ್ಸೆ ದೊರೆಯದೆ ಹಲವು ಜನರು ಸಾವಿಗೀಡಾಗಲು ಕಾರಣವಾಗಿದೆ ಎಂದು ಹೇಳಿದೆ.

ಏನಿದು ಸಗಣಿ ಥೆರಪಿ?
ಗುಜರಾತ್ ನಲ್ಲಿ ಕೆಲವರು ಹಸುವಿನ ಕೊಟ್ಟಿಗೆಗೆ ತೆರಳಿ ವಾರಕ್ಕೊಂದು ಬಾರಿ ಗೋ ಮೂತ್ರದೊಂದಿಗೆ ಸಗಣಿಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಕೋವಿಡ್ 19 ಸೋಂಕನ್ನು ತಡೆಗಟ್ಟಬಹುದು ಎಂದು ನಂಬಿದ್ದಾರೆ. ಸಗಣಿಯನ್ನು ಮೈಗೆ ಹಚ್ಚಿಕೊಳ್ಳುವ ಥೆರಪಿಯಿಂದ ತಮ್ಮ ದೇಹಕ್ಕೆ ವೈರಸ್ ತಗಲುವುದಿಲ್ಲ ಎಂಬ ನಂಬಿಕೆ ಹೊಂದಿದ್ದು, ಇದು ವೈಜ್ಞಾನಿಕವಾಗಿ ಸಮರ್ಪಕವಾದ ಥೆರಪಿ ಅಲ್ಲ, ಇದು
ಪರಿಣಾಮಕಾರಿಯೂ ಅಲ್ಲ ಎಂದು ಭಾರತದ ವೈದ್ಯರು ತಿಳಿಸಿದ್ದಾರೆ.

ಹಿಂದೂಗಳಿಗೆ ಹಸು ಮತ್ತು ಹಸುವಿನ ಸಗಣಿ ಪವಿತ್ರವಾದದ್ದು, ಮನೆಯನ್ನು ಸ್ವಚ್ಛಗೊಳಿಸಿ ಸಗಣಿ ಸಾರಿಸುವುದು ಹಿಂದಿನ ಪದ್ಧತಿಯಾಗಿದೆ. ಈಗಲೂ ಹಳ್ಳಿಗಳಲ್ಲಿ ಹಸುವಿನ ಸಗಣಿಗೆ ತುಂಬಾ ಪ್ರಾಮುಖ್ಯತೆ ಇದೆ ಎಂದು ವರದಿ ತಿಳಿಸಿದೆ.

ಸಗಣಿ ಥೆರಪಿ ಪರಿಣಾಮಕಾರಿ?
“ನಾವು ಇದನ್ನು ನೋಡಿದ್ದೇವೆ, ವೈದ್ಯರು ಕೂಡಾ ಇಲ್ಲಿಗೆ ಆಗಮಿಸಿ ಪರಿಶೀಲಿಸಿದ್ದಾರೆ. ಸಗಣಿ ಥೆರಪಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಸುಳ್ಳಲ್ಲ. ಈ ರೀತಿ ಥೆರಪಿ ಮಾಡಿಸಿಕೊಳ್ಳುವವರು ಯಾವುದೇ ಭಯವಿಲ್ಲದೇ ಕೋವಿಡ್ ರೋಗಿಗಳ ಬಳಿ ಹೋಗುತ್ತಾರೆ ಎಂದು ಔಷಧ ಕಂಪನಿಯ ಅಸೋಸಿಯೇಟ್ ಮ್ಯಾನೇಜರ್ ಗೌತಮ್ ಮಣಿಲಾಲ್ ಬೋರಿಸಾ ತಿಳಿಸಿದ್ದಾರೆ. ಈ ಅಭ್ಯಾಸದಿಂದ ಕಳೆದ ವರ್ಷ ಕೋವಿಡ್ 19 ಸೋಂಕಿಗೆ ಒಳಗಾದವರು ಚೇತರಿಸಿಕೊಳ್ಳಲು ಸಹಾಯವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

ಈ ರೀತಿ ಥೆರಪಿ ಮಾಡಿಸಿಕೊಂಡು ಸಗಣಿ ಒಣಗುತ್ತದೆ. ನಂತರ ಯೋಗ ಮಾಡುವ ಮೂಲಕ ದೈಹಿಕ ಶಕ್ತಿ ಹೆಚ್ಚುತ್ತದೆ. ಕೊನೆಗೆ ದೇಹವನ್ನು ಹಾಲು ಅಥವಾ ಮಜ್ಜಿಗೆಯಿಂದ ತೊಳೆದುಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.

ಆದರೆ ಕೋವಿಡ್ ಗೆ ಅಧಿಕೃತವಲ್ಲದ ಇಂತಹ ಥೆರಪಿಯನ್ನು ಮಾಡಿಸಿಕೊಳ್ಳಬಾರದು ಎಂದು ವೈದ್ಯರು ಮತ್ತು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದರಿಂದ ಬೇರೆ, ಬೇರೆ ಆರೋಗ್ಯ ಸಮಸ್ಯೆಗಳು ತಲೆದೋರಲು ಕಾರಣವಾಗಬಹುದು ಎಂದು ಹೇಳಿದ್ದಾರೆ. ಗೋಮೂತ್ರ, ಸಗಣಿ ಉಪಯೋಗಿಸುವುದರಿಂದ ಕೋವಿಡ್ ಸೋಂಕು ಎದುರಿಸಲು ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ಯಾವುದೇ ಬಲವಾದ ಪುರಾವೆ ಇಲ್ಲ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಕಪ್ಪು ರಂಧ್ರಗಳ ಬಗೆಗಿನ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್ಸ್‌ ಪ್ರಮೇಯಕ್ಕೆ ವಿಜ್ಞಾನಿಗಳ ಮೊಹರು

ಕಪ್ಪು ರಂಧ್ರಗಳ ಬಗೆಗಿನ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್ಸ್‌ ಪ್ರಮೇಯಕ್ಕೆ ವಿಜ್ಞಾನಿಗಳ ಮೊಹರು

ಮೂಗಿನಲ್ಲೇ ಟೈಪ್‌ ಮಾಡಿ ದಾಖಲೆ! ಬರೋಬ್ಬರಿ 9 ಗಿನ್ನೆಸ್‌ ದಾಖಲೆಗಳ ಸರದಾರ ವಿನೋದ್‌ ಕುಮಾರ್‌

ಮೂಗಿನಲ್ಲೇ ಟೈಪ್‌ ಮಾಡಿ ದಾಖಲೆ! ಬರೋಬ್ಬರಿ 9 ಗಿನ್ನೆಸ್‌ ದಾಖಲೆಗಳ ಸರದಾರ ವಿನೋದ್‌ ಕುಮಾರ್‌

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ಇಬ್ಬರು ಹೆಣ್ಣು ಮಕ್ಕಳ ಜತೆ ತಂದೆ ಆತ್ಮಹತ್ಯೆ : ಅಪ್ಪಂದಿರ ದಿನದಂದೇ ನಡೆದ ದುರಂತ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

Cristiano Ronaldo sets another record, becomes first person to reach 300 million followers mark on Instagram

ಇನ್ ಸ್ಟಾಗ್ರಾಮ್ ನಲ್ಲಿ 300ಮಿಲಿಯನ್ ಫಾಲೋವರ್ಸ್ ದಾಟಿದ ಫುಟ್ ಬಾಲ್ ಸ್ಟಾರ್ ಆಟಗಾರ ರೊನಾಲ್ಡೋಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಗಿನಲ್ಲೇ ಟೈಪ್‌ ಮಾಡಿ ದಾಖಲೆ! ಬರೋಬ್ಬರಿ 9 ಗಿನ್ನೆಸ್‌ ದಾಖಲೆಗಳ ಸರದಾರ ವಿನೋದ್‌ ಕುಮಾರ್‌

ಮೂಗಿನಲ್ಲೇ ಟೈಪ್‌ ಮಾಡಿ ದಾಖಲೆ! ಬರೋಬ್ಬರಿ 9 ಗಿನ್ನೆಸ್‌ ದಾಖಲೆಗಳ ಸರದಾರ ವಿನೋದ್‌ ಕುಮಾರ್‌

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ : ಪುನರ್ವಿಂಗಡಣೆಯೇ ಅಜೆಂಡಾ?

ಬ್ಲ್ಯಾಕ್ ಫಂಗಸ್ ನಕಲಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ, ಹತ್ತು ಮಂದಿ ಬಂಧನ

ಬ್ಲ್ಯಾಕ್ ಫಂಗಸ್ ನಕಲಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಜಾಲ ಪತ್ತೆ, ಹತ್ತು ಮಂದಿ ಬಂಧನ

Gova Lockodown Extended

ಗೋವಾ : ಜೂನ್ 28ರ ತನಕ ಕರ್ಫ್ಯೂ ವಿಸ್ತರಣೆ : ಕೆಲವು ನಿರ್ಬಂಧಗಳ ಸಡಿಲಿಕೆ

ಯೋಗಿ ಸಿಎಂ ಆಗಿ ಮುಂದುವರಿಯಲ್ಲ, 2022ರ ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸಮುಖ

ಯೋಗಿ ಸಿಎಂ ಆಗಿ ಮುಂದುವರಿಯಲ್ಲ, 2022ರ ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸಮುಖ!

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

20-19

ಬೆಳೆ ನಷ್ಟ ಅಂದಾಜಿಗೆ ಸಮಿತಿ ರಚಿಸಿ

ಕಪ್ಪು ರಂಧ್ರಗಳ ಬಗೆಗಿನ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್ಸ್‌ ಪ್ರಮೇಯಕ್ಕೆ ವಿಜ್ಞಾನಿಗಳ ಮೊಹರು

ಕಪ್ಪು ರಂಧ್ರಗಳ ಬಗೆಗಿನ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್ಸ್‌ ಪ್ರಮೇಯಕ್ಕೆ ವಿಜ್ಞಾನಿಗಳ ಮೊಹರು

ಮೂಗಿನಲ್ಲೇ ಟೈಪ್‌ ಮಾಡಿ ದಾಖಲೆ! ಬರೋಬ್ಬರಿ 9 ಗಿನ್ನೆಸ್‌ ದಾಖಲೆಗಳ ಸರದಾರ ವಿನೋದ್‌ ಕುಮಾರ್‌

ಮೂಗಿನಲ್ಲೇ ಟೈಪ್‌ ಮಾಡಿ ದಾಖಲೆ! ಬರೋಬ್ಬರಿ 9 ಗಿನ್ನೆಸ್‌ ದಾಖಲೆಗಳ ಸರದಾರ ವಿನೋದ್‌ ಕುಮಾರ್‌

madya news

ಹಾಲು-ನೀರು ಹಗರಣ ಸಿಬಿಐಗೆ ವಹಿಸಲು ಒತ್ತಡ

dav

ಕಾಳಗಿಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.