ಬಾಸ್ಕೆಟ್ಬಾಲ್ ತಾರೆ ಎವಿಂಗ್ಗೆ ಕೋವಿಡ್-19 ಸೋಂಕು
Team Udayavani, May 23, 2020, 9:30 PM IST
ನ್ಯೂಯಾರ್ಕ್: ಜಮೈಕಾ ಮೂಲದ ಅಮೆರಿಕದ ಬಾಸ್ಕೆಟ್ಬಾಲ್ ಲೆಜೆಂಡ್ ಪ್ಯಾಟ್ರಿಕ್ ಎವಿಂಗ್ ಅವರಿಗೆ ಕೋವಿಡ್-19 ಅಂಟಿಕೊಂಡಿದೆ. 57 ವರ್ಷದ ಎವಿಂಗ್ ಸ್ವತಃ ಈ ವಿಷಯವನ್ನು ಟ್ವೀಟ್ ಮಾಡಿದ್ದಾರೆ.
“ಇದೊಂದು ಭಯಾನಕ ಹಾಗೂ ಗಂಭೀರ ವೈರಸ್ ಆಗಿದ್ದು, ಲಘುವಾಗಿ ಪರಿಗಣಿಸುವಂತಿಲ್ಲ. ಈ ಸಂದರ್ಭದಲ್ಲಿ ಎಲ್ಲರೂ ಸುರಕ್ಷಿತವಾಗಿರಿ ಎಂದು ಸ್ಫೂರ್ತಿ ತುಂಬಲು ನಾನು ಬಯಸುತ್ತೇನೆ. ನಿಮ್ಮ ಹಾಗೂ ನೀವು ಪ್ರೀತಿಸುವವರ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಿ. ನಾನು ಕ್ಷೇಮ. ನಾವೆಲ್ಲರೂ ಇದರಿಂದ ಪಾರಾಗಿ ಬರಬೇಕಿದೆ’ ಎಂದು ನ್ಯೂಯಾರ್ಕ್ ನಿಕ್ಸ್ ತಂಡದ ಮಾಜಿ ಆಟಗಾರ ಎವಿಂಗ್ ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಜಾರ್ಜ್ಟೌನ್ ಯುನಿವರ್ಸಿಟಿಯಲ್ಲಿ ಪುರುಷರ ಬಾಸ್ಕೆಟ್ಬಾಲ್ ತಂಡಕ್ಕೆ ತರಬೇತಿ ನೀಡುತ್ತಿದ್ದ ಪ್ಯಾಟ್ರಿಕ್ ಎವಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.