ಕೊರೊನಾದ ಎರಡನೇ ಅಲೆ; ಆಗದಿರಲಿ ಅನಾರೋಗ್ಯದ ಬಲೆ!


Team Udayavani, Apr 12, 2021, 6:20 AM IST

ಕೊರೊನಾದ ಎರಡನೇ ಅಲೆ; ಆಗದಿರಲಿ ಅನಾರೋಗ್ಯದ ಬಲೆ!

ಗೆಳೆಯರೇ ಕೊರೊನಾದ ಆರ್ಭಟ ಸಾಕಷ್ಟು ಕಡಿಮೆ ಯಾಯಿತು ಎಂದುಕೊಳ್ಳುತ್ತಿದ್ದಾಗಲೇ ಎರಡನೇ ಅಲೆ ಏಳತೊಡಗಿದೆ. ನಮ್ಮೊಳಗಿನ ಅಸಡ್ಡೆ ಮತ್ತು ಅತಿಯಾದ ಆತ್ಮವಿಶ್ವಾಸವೂ ಈ ಅಲೆಗೆ ಕಾರಣವಾಗಿರಲೂಬಹುದು ಎಂದರೆ ತಪ್ಪಲ್ಲ. ಈ ಅಲೆಯನ್ನು ಒಂದೇ ಬಾರಿಗೆ ಹತೋಟಿಗೆ ತರುವುದಂತೂ ಸಾಧ್ಯವಿಲ್ಲ. ಏಕೆಂದರೆ ಪ್ರಸ್ತುತ ಬಂದಿರುವ ವ್ಯಾಕ್ಸಿನ್‌ ಕೇವಲ ಒಂದು ರಕ್ಷಣ ಕವಚವೇ ಹೊರತು ಸಂಪೂರ್ಣ ಔಷಧಯಲ್ಲ. ಹಾಗೆಂದು ಭಯಪಡಬೇಕಾದ ಆವಶ್ಯಕತೆಯೂ ಇಲ್ಲ. ಏಕೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದೇ ಕೊರೊನಾಕ್ಕೆ ಅತ್ಯಂತ ಉತ್ತಮ ಔಷಧ.

ಕೊರೊನಾದ ನಿರ್ವಹಣೆಗೆ ಸರಕಾರ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದು ಕೊಂಡಿದೆ. ಹಾಗಿದ್ದೂ ಕೊರೊನಾ ಗುಣಮುಖ ಹೊಂದಿ ರುವವರಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಪಾರ್ಶ್ವ ಪರಿಣಾಮ, ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದಲ್ಲಿ ಪ್ರತಿಯೋರ್ವನೂ ಸ್ವತಃ ಎಚ್ಚೆತ್ತುಕೊಳ್ಳುವ ಸಾಧ್ಯತೆಗಳು ಜಾಸ್ತಿ. (ಧೂಮಪಾನ, ಮದ್ಯಪಾನದ ಕುರಿತಾಗಿ ಹೇಳುವಂತೆ). ಈಗಾಗಲೇ ಗಮನಿಸಿರುವಂತೆ ಕೊರೊನಾದಿಂದ ಗುಣಮುಖ ಹೊಂದಿ ರು ವವರಲ್ಲಿ ಶ್ವಾಸಕೋಶದ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ಕಡಿಮೆಯಾಗಿರುವುದು ಕಂಡು ಬರುತ್ತಿದೆ. ಇದರಿಂದ ದೀರ್ಘಾವಧಿಯಲ್ಲಿ ಅಸ್ತಮಾ, ದಮ್ಮು ಮುಂತಾದ ಶ್ಚಾಸಕೋಶ ಸಂಬಂಧೀ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಜಾಸ್ತಿ. ಜತೆಗೆ ಯಕೃತ್‌, ಕಿಡ್ನಿ, ರಕ್ತದೊತ್ತಡ, (ಅಪೊರ್ಚುನಿಷ್ಟಿಕ್‌) ಸೋಂಕಿನ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಮಾನವರ ಸರಾಸರಿ ಜೀವಿತಾವಧಿ ಕಡಿಮೆಯಾಗುವ ಭಯವೂ ಆವರಿಸಿದೆ.

ಒಟ್ಟಾರೆ ಈ ಕೋವಿಡ್‌ನ‌ 2ನೇ ಅಲೆಯ ನಿಯಂತ್ರಣ ಸಂಪೂರ್ಣ ನಮ್ಮ ಕೈಯಲ್ಲಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ “ಉದ್ದರೇದಾತ್ಮನಾತ್ಮಾನಾಂ ಆತ್ಮಾನಾಂ ಅವಸಾ ಧಯೇತ್‌’ ಮನುಷ್ಯನು ತನ್ನನ್ನು ತಾನು ಕೆಳಮಟ್ಟಕ್ಕಿಳಿಸಿ ಕೊಳ್ಳದೆ ತನ್ನನ್ನು ತಾನೇ ಮೇಲೆತ್ತಿಕೊಳ್ಳಬೇಕು. ಅವನಿಗೆ ಅವನ ಮನಸ್ಸೇ ಬಂಧು, ಅಂತೆಯೇ ಶತ್ರುವೂ ಕೂಡ. ಹಾಗೆಯೇ ನಾವೂ ಸರಿಯಾದ ಕ್ರಮ, ನಿಯಮಗಳನ್ನು ಪಾಲಿಸಿದರೆ ಕೊರೊನಾ ನಿಯಂತ್ರಣ ಸಾಧ್ಯ.

ಸ್ವತಃ ಪಾಲಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳು
– ಜನಜಂಗುಳಿಗೆ ಅವಕಾಶ ಕೊಡದಿರುವುದು ಉತ್ತಮ. ಮಾಸ್ಕ್ನ ಸರಿಯಾದ ಬಳಕೆ
– ಜನಸಂದಣಿ ಇರುವಲ್ಲಿ ಕಡ್ಡಾಯ ಸಾಮಾಜಿಕ ಅಂತರದ ಪಾಲನೆ.
– ಸ್ಯಾನಿಟೈಸರ್‌ನ ಯೋಗ್ಯ ಬಳಕೆ. ಮನೆಗೆ ಮರಳಿದ ತತ್‌ಕ್ಷಣ ಬಿಸಿನೀರಿನಿಂದ ಚೆನ್ನಾಗಿ ಕೈ, ಬೆರಳುಗಳನ್ನು ತೊಳೆದುಕೊಳ್ಳುವುದು.
– ಹೊರಗಿನಿಂದ ತಂದ ಸಾಮಗ್ರಿಗಳನ್ನು ಸ್ವಲ್ಪ ಹೊತ್ತು ಬಿಸಿಲಿಗೆ ಇಡುವುದು.
– ಹವಾಮಾನದ ಉಷ್ಣತೆಯೂ ಜಾಸ್ತಿ ಇರುವ ಕಾರಣ ಸಾಕಷ್ಟು ನೀರಿನ ಸೇವನೆ.
– ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ದಲ್ಲಿ ಬೆಳ್ಳುಳ್ಳಿ, ಶುಂಠಿ, ಮೆಂತ್ಯೆ, ಕರಿಬೇವಿನ ಸೊಪ್ಪು ಮುಂತಾದ ಪದಾರ್ಥಗಳ ಬಳಕೆ.
– ದಿನನಿತ್ಯ ಉಸಿರಾಟದ ವ್ಯಾಯಾಮಗಳು, ಪ್ರಾಣಾಯಾಮ ಮುಂತಾದ ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳುವುದು.

– ಡಾ| ಪುನೀತ್‌ ರಾಘವೇಂದ್ರ, ಆಯುರ್ವೇದ ವೈದ್ಯರು

ಟಾಪ್ ನ್ಯೂಸ್

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

1-d-s-sfsf

ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

1-fsfdf

ಹೆಚ್ಚುತ್ತಿರುವ ಮಂಕಿ ಪಾಕ್ಸ್ ಸೋಂಕಿನ ಪ್ರಮಾಣ : ಸಲಿಂಗಕಾಮಿಗಳಿಗೆ ಎಚ್ಚರಿಕೆ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೀನ vs ತೈವಾನ್‌ : ಮಗದೊಂದು ಮಹಾಯುದ್ಧ?

ಚೀನ vs ತೈವಾನ್‌ : ಮಗದೊಂದು ಮಹಾಯುದ್ಧ?

news

ಐನ್‌ ಸ್ಟೈನ್ ಇನ್ನೊಮ್ಮೆ ವಿಜಯಿಯಾದರೆ?

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

19

ಮಕ್ಕಳು ಮರಳಿ ಶಾಲೆಗೆ: ಹೆತ್ತವರು ಏನು ಮಾಡಬಹುದು?

MUST WATCH

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

ಹೊಸ ಸೇರ್ಪಡೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

Untitled-1

ಶಿಥಿಲಗೊಂಡ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸಿ

huvinahadagali

ರೈತರ ಹೊಲಗಳಿಗೆ ಕಲುಷಿತ ನೀರು ತಡೆಗೆ ಮನವಿ

17

ಪಶು ಆಸ್ಪತ್ರೆಗೆ ಸಿಬ್ಬಂದಿ ನೇಮಿಸಲು ಒತ್ತಾಯ

1-f-fdsf

ಗೋವಾದಲ್ಲಿ ಸನ್‍ಬರ್ನ್ ಫೆಸ್ಟಿವಲ್ ಆಯೋಜನೆಗೆ ಅವಕಾಶವಿಲ್ಲ : ಸಚಿವ ಖಂವಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.