ಐಟಿಬಿಪಿ ಶ್ವಾನದಳಕ್ಕೆ 17 ಮುದ್ದಾದ “ಬೆಲ್ಜಿಯನ್’ ಮರಿಗಳು ಪಾದಾರ್ಪಣೆ
Team Udayavani, Nov 6, 2020, 1:59 PM IST
ಹೊಸದಿಲ್ಲಿ: ಇಂಡೋ- ಟಿಬೆಟನ್ ಗಡಿ ಪೊಲೀಸ್ ಪಡೆ (ಐಟಿಬಿಪಿ)ಯ ಶ್ವಾನಪಡೆಗೆ 17 “ಬೆಲ್ಜಿಯನ್ ಮಾಲಿನಾಯ್ಸ್ ‘ ಮರಿಗಳು ಪಾದಾರ್ಪಣೆ ಮಾಡಿವೆ. ಐಟಿಬಿಪಿ ಇವುಗಳಿಗೆ ತರಬೇತಿ ನೀಡಿ ಗಸ್ತು ಮತ್ತು ಉಗ್ರನಿಗ್ರಹ ಕಾರ್ಯಾಚರಣೆಗೆ ಬಳಸಿಕೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಓಲ್ಗಾ ಮತ್ತು ಒಲೆಶ್ಯಾ ಎಂಬ ಎರಡು ಶ್ವಾನಗಳು ಒಟ್ಟು ಹದಿನೇಳು ಮುದ್ದಾದ ಮರಿಗೆ ಜನ್ಮ ನೀಡಿವೆ.
ಸ್ಫೋಟಕ ಪತ್ತೆ, ಶತ್ರುಗಳ ಮೇಲಿನ ದಾಳಿಗೆ ಖ್ಯಾತಿ ಪಡೆದಿರುವ “ಬೆಲ್ಜಿಯನ್ ಮಾಲಿನಾಯ್ಸ್’ ಶ್ವಾನಗಳ ಮೂಲ ಬೆಲ್ಜಿಯಂ ಆದರೂ ದಶಕಗಳಿಂದ ಈ ತಳಿಗಳನ್ನು ಸ್ವದೇಶದಲ್ಲಿಯೇ ಅಭಿವೃದ್ಧಿಗೊಳಿಸಲಾಗುತ್ತಿದೆ. ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆ ಸೇರಿದಂತೆ ಉಗ್ರರ ಜಾಡು ಪತ್ತೆಗೂ ಇವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಾಕ್‌ನಲ್ಲಿ ಉಗ್ರ ಉಸಾಮಾ ಬಿನ್ ಲಾಡೆನ್ ಹತ್ಯೆ ಕಾರ್ಯಾಚರಣೆಗೆ ಸಹಕರಿಸುವ ಮೂಲಕ ಈ ತಳಿ ಜಾಗತಿಕ ಖ್ಯಾತಿ ಸಂಪಾದಿಸಿತ್ತು.
Indo-Tibetan Border Police (ITBP) Pups born to Fighter Moms. Sister K9s dogs Olga and Oleshya given birth to 17 boisterous Malinois pups at NTCD ITBP Bhanu. pic.twitter.com/nhecgj2q3d
— ITBP (@ITBP_official) November 5, 2020