ಮುಂಬೈನ ಅಲಿಬಾಗ್ ಪ್ರದೇಶಕ್ಕೆ ಬಡಿದಪ್ಪಳಿಸಿದ ನಿಸರ್ಗ ಚಂಡಮಾರುತ, ಹೈ ಅಲರ್ಟ್
ಸುಮಾರು 60 ಕಿಮೀ ವೇಗದಲ್ಲಿ ಅಲಿಬಾಗ್ ಪ್ರದೇಶಕ್ಕೆ ನಿಸರ್ಗ ಚಂಡಮಾರುತ ಬಡಿದಪ್ಪಳಿಸಿದೆ
Team Udayavani, Jun 3, 2020, 1:49 PM IST
ಮುಂಬೈ:ವಾಣಿಜ್ಯ ನಗರಿ ಮುಂಬೈನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಅಲಿಭಾಗ್ ಪ್ರದೇಶಕ್ಕೆ ನಿರೀಕ್ಷೆಯಂತೆ ನಿಸರ್ಗ ಚಂಡಮಾರುತ ಅಪ್ಪಳಿಸಿದ್ದು, ಈ ಬಿರುಗಾಳಿ ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಪ್ರದೇಶದಲ್ಲಿ ಬಂದಪ್ಪಳಿಸಿದೆ ಎಂಬ ಹವಾಮಾನ ಇಲಾಖೆಯ ಸೂಚನೆ ನಿಟ್ಟಿನಲ್ಲಿ ಎಲ್ಲೆಡೆ ಹೈಅಲರ್ಟ್ ಘೋಷಿಸಲಾಗಿದೆ.
ಸುಮಾರು 60 ಕಿಮೀ ವೇಗದಲ್ಲಿ ಅಲಿಬಾಗ್ ಪ್ರದೇಶಕ್ಕೆ ನಿಸರ್ಗ ಚಂಡಮಾರುತ ಬಡಿದಪ್ಪಳಿಸಿದ್ದು, ದಕ್ಷಿಣ ಮುಂಬೈಗೆ 110 ಕಿಲೋ ಮೀಟರ್ ನಷ್ಟು ವೇಗದಲ್ಲಿ ಹಾಗೂ ದಕ್ಷಿಣ ಗುಜರಾತ್ ಪ್ರದೇಶಕ್ಕೆ 340 ಕಿಮೀ ವೇಗದಲ್ಲಿ ಚಂಡಮಾರುತ ಬಡಿದಪ್ಪಳಿಸಲಿದೆ ಎಂದು ವರದಿ ವಿವರಿಸಿದೆ.
ಭೀಕರ ನಿಸರ್ಗ ಚಂಡಮಾರುತದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿದ್ದು, ಮುಂಬೈ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ನಿಸರ್ಗ ಚಂಡಮಾರುತ ಹೈಲೈಟ್ಸ್:
*ನಿಸರ್ಗ ಚಂಡಮಾರುತ ಬಂದಪ್ಪಳಿಸುವ ಪ್ರಕ್ರಿಯೆ ಸುಮಾರು ಮೂರು ಗಂಟೆ ತೆಗೆದುಕೊಳ್ಳಲಿದೆ’
*ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಪ್ರದೇಶದಲ್ಲಿನ ಸುಮಾರು 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
*ಜನರ ಸುರಕ್ಷತೆಯ ದೃಷ್ಟಿಯಿಂದ ಮುಂಬೈಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
*ನಿಸರ್ಗ ಚಂಡಮಾರುತ ಮುಂಬೈ ಕರಾವಳಿ ಪ್ರದೇಶಕ್ಕೆ 120 ಕಿಲೋ ಮೀಟರ್ ವೇಗದಲ್ಲಿ ಬಡಿದಪ್ಪಳಿಸಲಿದೆ. ಅಂದಾಜು 1.5 ಮೀಟರ್ ಎತ್ತರಕ್ಕೆ ಅಲೆಗಳು ಮೇಲಕ್ಕೇಳಲಿದೆ.