Udayavni Special

ತಲೆಗೆ ಜಾಕ್ ಲಿವರ್ ನಿಂದ ಹೊಡೆದು 40 ಅಡಿ ಆಳಕ್ಕೆ ಎಸೆದರೂ ಬದುಕುಳಿದ ಮಹಿಳೆ : ನಾಲ್ವರ ಬಂಧನ

ಕೊಲೆ ಯತ್ನ : ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

Team Udayavani, Sep 19, 2021, 12:55 PM IST

ಕೊಲೆ ಯತ್ನ : ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ದಾಂಡೇಲಿ : ಕೊಲೆ ಮಾಡಲು ಪ್ರಯತ್ನಿಸಿದ್ದ ಅಂತರ್ ಜಿಲ್ಲಾ ಆರೋಪಿಗಳನ್ನು 24 ಗಂಟೆಯೊಳಗಡೆ ಬಂಧಿಸಿದ ಘಟನೆ ದಾಂಡೇಲಿ ಗ್ರಾಮೀಣಾ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಘಟನೆಯ ವಿವರ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ವೀರಭದ್ರೇಶ್ವರ ಕೃಷಿ ಕೇಂದ್ರದ ಹತ್ತಿರದ ನಿವಾಸಿ 29 ವರ್ಷ ವಯಸ್ಸಿನ ಗೀತಾ ಇವರು ಅನ್ಯಜಾತಿಯ ಅರ್ಜುನ ಗೌಡಾ ಹೊನ್ನಾಗೌಡ್ರು ಈತನನ್ನು 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು. ಸೆ:16 ರಂದು ಅರ್ಜುನ ಗೌಡಾ ತನ್ನ ಸಂಬಂಧಿಗಳಾದ ಧಾರವಾಡ ಜಿಲ್ಲೆಯ ಅರಳಿಕಟ್ಟೆ ನಿವಾಸಿ ಬಸವರಾಜ ಗದಿಗೆಪ್ಪಾ ಹೊಸಮನಿ, ಶಿಗ್ಗಾವಿಯ ಮಾರ್ಕೆಟ್ ರಸ್ತೆ ನಿವಾಸಿ ರವಿ ಅಶೋಕ ಬುಳಕ್ಕನವರ, ಶಿಗ್ಗಾವಿ ತಾಲೂಕಿನ ಹಿತ್ಲಮನಿ ನಿವಾಸಿ ಮಂಜುನಾಥ ಬಸವಣ್ಣೆಪ್ಪಾ ಹಿತ್ತಲಮನಿ ಇವರಲ್ಲಿ ತನ್ನ ಹೆಂಡತಿ ಗೀತಾಳನ್ನು ಕೊಲೆ ಮಾಡಿ ಶವವನ್ನು ಬೇರೆ ಕಡೆಗೆ ಹಾಕಿ ಬರಲು ತಿಳಿಸಿದ್ದಾನೆ, ಅದರಂತೆ ಈ ಮೂವರು ಗೀತಾ ಅರವರಿಗೆ ಕರೆ ಮಾಡಿ ಸೆ:16 ರಂದು ಸಂಜೆ 7 ಗಂಟೆಗೆ ಶಿಗ್ಗಾವಿ ಪಟ್ಟಣದ ಹೊರ ವಲಯಕ್ಕೆ ಬರುವಂತೆ ತಿಳಿಸಿದ್ದಾರೆ. ಅದರಂತೆ ಗೀತಾ ಅಲ್ಲಿಗೆ ಬಂದಿದ್ದಾರೆ ಈ ವೇಳೆ ಅವರ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಕಾರಿನ ಜಾಕ್ ಲಿವರ್ ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿ ಬಳಿಕ ಕೆ.ಎ-27, ಎನ್:5562 ಸಂಖ್ಯೆಯ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಶಿಗ್ಗಾವಿಯಿಂದ ಮುಂಡಗೋಡ, ಕಲಘಟಗಿ ಮಾರ್ಗವಾಗಿ ಬಂದು ದಾಂಡೇಲಿಯ ಕರ್ಕಾ ಹಳ್ಳದ ಸೇತುವೆಯ ಮೇಲಿಂದ ಕೆಳಗೆ ಎಸೆದು ಹೋಗಿದ್ದರು.

ಇದನ್ನೂ ಓದಿ :25 ವರ್ಷ ನಂತರ ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

ಆದರೆ ಸೇತುವೆಯ ಕೆಳಗಡೆ ಬಿದ್ದಿದ್ದ ಗೀತಾ ಅವರು ಅದೇ ದಿನ ರಾತ್ರಿ 12 ಗಂಟೆಗೆ ಹಳ್ಳದಿಂದ ಎದ್ದು ರಸ್ತೆಗೆ ಬಂದು ಸಾರ್ವಜನಿಕರ ಮೂಲಕ ದಾಂಡೇಲಿ ಗ್ರಾಮೀಣ ಠಾಣೆಗೆ ವಿಷಯ ತಿಳಿಸಿದ್ದಾರೆ. ತಕ್ಷಣವೆ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಗೀತಾರವರನ್ನು 108 ವಾಹನದ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಉಪಚಾರವನ್ನು ನೀಡಿ ಅವರಿಂದ ಹೇಳಿಕೆಯನ್ನು ದಾಖಲಿಸಿ, ನಂತರ ಗ್ರಾಮೀಣ ಠಾಣೆಯಲ್ಲಿ ಕಲಂ: 307,323, 324, 364, 341, 109 ಸಹಿತ 34 ಐಪಿಸಿ ಮತ್ತು ಕಲಂ 3(2) (5) ಎಸ್.ಸಿ/ಎಸ್.ಟಿ ಕಾಯ್ದೆ 1989 ಮತ್ತು ಅಮೆಂಡ್ಮೆಂಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣವನ್ನು ದಾಖಲಿಸಿದ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬದ್ರಿನಾಥ್.ಎಸ್ ಅವರುಗಳ ಮಾರ್ಗದರ್ಶನದಲ್ಲಿ ದಾಮಡೇಲಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಗಣೇಶ್.ಕೆ.ಎಲ್ ಅವರ ನೇತೃತ್ವದಲ್ಲಿ ಸಿಪಿಐ ಪ್ರಭು ಗಂಗನಹಳ್ಳಿ, ಪಿಎಸೈಗಳಾದ ಯಲ್ಲಾಲಿಂಗ ಕುನ್ನೂರು, ಐ.ಆರ್.ಗಡ್ಡೇಕರ, ಎಎಸೈ ವೆಂಕಟೇಶ ತಗ್ಗಿನ, ಪೊಲೀಸ್ ಸಿಬ್ಬಂದಿಗಳಾದ ಭೀಮಪ್ಪ, ಉಮೇಶ ತುಂಬರಗಿ, ದಯಾನಂದ ಲೋಂಡಿ, ರೋಹಿತ್ ಮತ್ತು ರವಿ ಚೌವ್ಹಾಣ್ ಅವರುಗಳ ವಿಶೇಷ ತಂಡವನ್ನು ರಚಿಸಿ ಆಪಾದಿತರಾದ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕ್ಷೀಪ್ರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪೊಲೀಸ್ ವರಿಷ್ಠಧಿಕಾರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗಂಭೀರ ಗಾಯಗೊಂಡು, ಕಾರಿನ ಡಿಕ್ಕಿಯಲ್ಲಿ ಬಹಳಷ್ಟು ಹೊತ್ತು ಇದ್ದು, ಆನಂತರದಲ್ಲಿ ಸರಿ ಸುಮಾರು 40 ಅಡಿ ಆಳಕ್ಕೆ ಎಸೆದಿದ್ದರೂ ಗೀತಾರವರು ಬದುಕುಳಿದಿದ್ದೇ ಪವಾಡವಾಗಿದೆ. ಸಹಕರಿಸಿದ ಸಾರ್ವಜನಿಕರು ಮತ್ತು ತಡವರಿಯದೇ ಸ್ಪಂದಿಸಿದ ದಾಂಡೇಲಿ ಗ್ರಾಮೀಣ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಟಾಪ್ ನ್ಯೂಸ್

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

ವಿಕಲ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

ವಿಕಲ ಚೇತನರ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

araga jnanendra

ಅಲ್ಪಸಂಖ್ಯಾತ ಮತಗಳಿಗೆ ಸಿದ್ದರಾಮಯ್ಯ, ಎಚ್ಡಿಕೆ ಹಲ್ಲು ಗಿಂಜುತ್ತಿದ್ದಾರೆ: ಆರಗ ಜ್ಞಾನೇಂದ್ರ

communal voilance bangla

ಬಾಂಗ್ಲಾದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ: ಕಾಳಿ ದೇವಸ್ಥಾನದ 6 ವಿಗ್ರಹಗಳು ಧ್ವಂಸ

sidu

ಕಾರ್ಖಾನೆ ನುಂಗಿ ನೀರು ಕುಡಿದಿದ್ದ ಬಿಜೆಪಿ ಅಭ್ಯರ್ಥಿಗೆ ತಕ್ಕಪಾಠ ಕಲಿಸಿ : ಸಿದ್ದರಾಮಯ್ಯ

ಪ್ಲೆಸಿಸ್,ತಾಹಿರ್ ಗೆ ಮತ್ತೆ ಅವಮಾನ ಮಾಡಿದ ದ.ಆಫ್ರಿಕಾ ಕ್ರಿಕೆಟ್ ಮಂಡಳಿ! ಕಿಡಿಕಾರಿದ ಸ್ಟೇನ್

ಪ್ಲೆಸಿಸ್,ತಾಹಿರ್ ಗೆ ಮತ್ತೆ ಅವಮಾನ ಮಾಡಿದ ದ.ಆಫ್ರಿಕಾ ಕ್ರಿಕೆಟ್ ಮಂಡಳಿ! ಕಿಡಿಕಾರಿದ ಸ್ಟೇನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

araga jnanendra

ಅಲ್ಪಸಂಖ್ಯಾತ ಮತಗಳಿಗೆ ಸಿದ್ದರಾಮಯ್ಯ, ಎಚ್ಡಿಕೆ ಹಲ್ಲು ಗಿಂಜುತ್ತಿದ್ದಾರೆ: ಆರಗ ಜ್ಞಾನೇಂದ್ರ

sidu

ಕಾರ್ಖಾನೆ ನುಂಗಿ ನೀರು ಕುಡಿದಿದ್ದ ಬಿಜೆಪಿ ಅಭ್ಯರ್ಥಿಗೆ ತಕ್ಕಪಾಠ ಕಲಿಸಿ : ಸಿದ್ದರಾಮಯ್ಯ

pratap

ಡಿಕೆಶಿ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರ: ಪ್ರತಾಪ್ ಸಿಂಹ ಹೊಸ ಬಾಂಬ್

1-aa

ಇಬ್ರಾಹಿಂ ನನ್ನ ಆತ್ಮೀಯ ಸ್ನೇಹಿತರು, ಯಾವಾಗ ಜ್ಞಾನೋದಯ ಆಗುತ್ತದೋ ಗೊತ್ತಿಲ್ಲ

1-aaa

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ ಸಿಎಂ

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

ದೀರ್ಘ‌ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ

Untitled-1

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ನಟ ರಾಜ್ ದೀಪ ನಾಯ್ಕ್

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

2022ರಲ್ಲಿ ಸಿಡಬ್ಲ್ಯುಸಿ ಚುನಾವಣೆ; ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಸಾಧ್ಯತೆ?

ಅಣ್ಣೂರಲ್ಲಿ ಗ್ರಾಮ ದೇವತೆಗಳ ಉತ್ಸವ

ಅಣ್ಣೂರಲ್ಲಿ ಗ್ರಾಮ ದೇವತೆಗಳ ಉತ್ಸವ

Untitled-1

ಗೋವಾ: ದಿನ ಕಳೆದಂತೆ ಹೆಚ್ಚಾಗುತ್ತಿದೆ ಪ್ರವಾಸಿಗರ ಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.