ವಿದಿಶಾ; ರಕ್ಷಿಸಲು ಹೋದ 30 ಜನರು ಬಾವಿಗೆ ಬಿದ್ದ ಘಟನೆ – ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಈ ಸಂದರ್ಭದಲ್ಲಿ ಮೋಟುಗೋಡೆ ಕುಸಿದು ಅವರೂ ಬಾವಿಪಾಲಾಗಿದ್ದಾರೆ. ದುರದೃಷ್ಟ ಇಷ್ಟಕ್ಕೂ ನಿಲ್ಲಲಿಲ್ಲ.

Team Udayavani, Jul 17, 2021, 9:35 AM IST

ವಿದಿಶಾ; ರಕ್ಷಿಸಲು ಹೋದ 30 ಜನರು ಬಾವಿಗೆ ಬಿದ್ದ ಘಟನೆ – ಸಾವಿನ ಸಂಖ್ಯೆ 11ಕ್ಕೆ ಏರಿಕೆ

ವಿದಿಶಾ: ನೀರು ತರಲು ಹೋಗಿದ್ದ 14 ವರ್ಷದ ಹುಡುಗನೊಬ್ಬ ಗುರುವಾರ ರಾತ್ರಿ ಅನಿರೀಕ್ಷಿತವಾಗಿ ಬಾವಿಗೆ ಬಿದ್ದಿದ್ದಾನೆ. ದುರಂತವೆಂದರೆ ಆತನನ್ನು ರಕ್ಷಿಸಲು ಹೋದಾಗ ಸುಮಾರು 30 ಮಂದಿ ಬಾವಿಗೆ ಬಿದ್ದಿದ್ದಾರೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಲಾಲ್‌ ಪತರ್‌ ಎಂಬ ಹಳ್ಳಿಯಲ್ಲಿ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:30 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಿದ ಮಹಾನ್ ಪರಿಸರ ಪ್ರೇಮಿ ಈ ‘ಅಂತರ್ಯಾಮಿ’

ಬಾವಿಗೆ ಬಿದ್ದು ಮೃತಪಟ್ಟ ಕುಟುಂಬ ಸದಸ್ಯರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ ಎಂದು ಶನಿವಾರ (ಜುಲೈ 17) ವರದಿ ತಿಳಿಸಿದೆ.

19 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ದಳ ರಕ್ಷಿಸಿದೆ.ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಮೃತರ ಕುಟುಂಬವರ್ಗಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಆಗಿದ್ದೇನು?: ಗುರುವಾರ ರಾತ್ರಿ ನೀರು ತರಲು ಹೋಗಿದ್ದ ಹುಡುಗ ಅಚಾನಕ್ಕಾಗಿ ಬಾವಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಇನ್ನುಳಿದವರು ಬಾವಿಗೆ ಹಾರಿದ್ದಾರೆ. ಇನ್ನೊಂದಷ್ಟು ಮಂದಿ ಬಾವಿಯ ಮೋಟುಗೋಡೆಯ ಮೇಲೆ ನಿಂತು, ಕೆಳಕ್ಕೆ ಹಾರಿದವರಿಗೆ ರಕ್ಷಣೆ ನೀಡಲು ಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಮೋಟುಗೋಡೆ ಕುಸಿದು ಅವರೂ ಬಾವಿಪಾಲಾಗಿದ್ದಾರೆ. ದುರದೃಷ್ಟ ಇಷ್ಟಕ್ಕೂ ನಿಲ್ಲಲಿಲ್ಲ. ಇವರನ್ನು ರಕ್ಷಿಸಲೆಂದು ರಕ್ಷಣಾಪಡೆಯೊಂದು ಟ್ರ್ಯಾಕ್ಟರ್‌ನೊಂದಿಗೆ ತೆರಳಿತ್ತು. ಟ್ರ್ಯಾಕ್ಟರ್‌ ಕೂಡ ಅದರಲ್ಲಿದ್ದ 4 ಪೊಲೀಸರೊಂದಿಗೆ ಬಾವಿಗೆ ಬಿದ್ದಿದೆ. ಇದರಿಂದ ಮೊದಲೇ ಒಳಗಿದ್ದವರು ಈ ಟ್ರ್ಯಾಕ್ಟರ್‌ನಡಿ ಸಿಲುಕಿಕೊಳ್ಳುವಂತಾಗಿತ್ತು ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

1-dsd

ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರಧಾನಿ ಜೊತೆ ಮಂಗಳೂರಿನ ಬಾಲೆಯ ಮಾತು

babar

ಪಾಕ್ ನಾಯಕ ಬಾಬರ್ ಅಜಮ್ 2021ರ ಐಸಿಸಿ ಏಕದಿನ ಕ್ರಿಕೆಟಿಗ

money 2

ಭಾಲ್ಕಿ ನಗರ ಪೊಲೀಸ್ ಠಾಣೆಯ ಸಿಪಿಐ ಲಂಚ ಪಡೆಯುತ್ತಿದ್ದ ವಿಡಿಯೋ ವೈರಲ್

ಇಬ್ಬರು ಭಾರತೀಯರ ಸಾವು: ಹೌತಿ ಬಂಡುಕೋರರ 2 ಕ್ಷಿಪಣಿ ಹೊಡೆದುರುಳಿಸಿದ ಯುಎಇ

ಇಬ್ಬರು ಭಾರತೀಯರ ಸಾವು: ಹೌತಿ ಬಂಡುಕೋರರ 2 ಕ್ಷಿಪಣಿ ಹೊಡೆದುರುಳಿಸಿದ ಯುಎಇ

jds

ಸಿದ್ದರಾಮಯ್ಯ ಕಾಲದ ಹಗರಣ ಪ್ರಶ್ನೆಗೆ ಎಚ್ ಡಿಕೆ ಸಿದ್ದತೆ: ಮತ್ತೆ ಅರ್ಕಾವತಿ ಸದ್ದು?

1assds

ದೇಶ ಶಿವಸೇನೆಯ ಪ್ರಧಾನಿಯನ್ನು ನೋಡುತ್ತಿತ್ತು: ಬಿಜೆಪಿಗೆ ಬಿಟ್ಟು ಕೊಟ್ಟೆವು ಎಂದ ರಾವುತ್

ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!

ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1assds

ದೇಶ ಶಿವಸೇನೆಯ ಪ್ರಧಾನಿಯನ್ನು ನೋಡುತ್ತಿತ್ತು: ಬಿಜೆಪಿಗೆ ಬಿಟ್ಟು ಕೊಟ್ಟೆವು ಎಂದ ರಾವುತ್

ಭಾರತ; 24ಗಂಟೆಯಲ್ಲಿ 3,06,064 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ 22 ಲಕ್ಷಕ್ಕೆ ಏರಿಕೆ

ಭಾರತ; 24ಗಂಟೆಯಲ್ಲಿ 3,06,064 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ 22 ಲಕ್ಷಕ್ಕೆ ಏರಿಕೆ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

MUST WATCH

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

ಹೊಸ ಸೇರ್ಪಡೆ

16student

ಪ್ರಾಯೋಗಿಕ ಕಲಿಕೆಯಲ್ಲೇ ವಿದ್ಯಾರ್ಥಿಗಳ ಗಳಿಕೆ

1-dsd

ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರಧಾನಿ ಜೊತೆ ಮಂಗಳೂರಿನ ಬಾಲೆಯ ಮಾತು

ಬೇವಿನ ಮರಗಳ ಮಾರಣ ಹೋಮ

ಬೇವಿನ ಮರಗಳ ಮಾರಣ ಹೋಮ

babar

ಪಾಕ್ ನಾಯಕ ಬಾಬರ್ ಅಜಮ್ 2021ರ ಐಸಿಸಿ ಏಕದಿನ ಕ್ರಿಕೆಟಿಗ

15karnataka

ಕ್ಷಯ ರೋಗ ಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.