
ಸುಶಾಂತ್ ಮೃತದೇಹದ ಫೋಟೊ ಬಗ್ಗೆ ಮುಂಬೈ ಪೊಲೀಸರು ಗಂಭೀರ ಎಚ್ಚರಿಕೆ ಕೊಟ್ಟಿದ್ದೇಕೆ?
ಯಾರಾದರೂ ಇಂತಹ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದರೆ ಡಿಲೀಟ್ ಮಾಡಿ ಎಂದು ಟ್ವೀಟ್ ನಲ್ಲಿ ಸೂಚಿಸಿದ್ದಾರೆ.
Team Udayavani, Jun 15, 2020, 3:47 PM IST

ನವದೆಹಲಿ: ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆ ಸಂಬಂಧಿಸಿದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕ್ಯೂಲೇಟ್ ಆಗುತ್ತಿದ್ದು, ಇದು ಕೆಟ್ಟ ಚಾಳಿಯಾಗಿದೆ ಎಂದು ಟ್ವೀಟ್ ಮಾಡಿರುವ ಮಹಾರಾಷ್ಟ್ರ ಪೊಲೀಸರು, ಇಂತಹ ಪೋಟೋಗಳನ್ನು ಶೇರ್ ಮಾಡಿದರೆ ಕಾನೂನನ್ನು ಮೈಮೇಲೆ ಎಳೆದುಕೊಂಡಂತೆ, ಕೂಡಲೇ ಅಂತಹ ಫೋಟೋಗಳನ್ನು ಡಿಲೀಟ್ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂಬೈನ ಬಾಂದ್ರಾದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಮೃತದೇಹದ ಫೋಟೋಗಳನ್ನು ಶೇರ್ ಮಾಡುತ್ತಿರುವ ಬಗ್ಗೆ ಮುಂಬೈ ಪೊಲೀಸರು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮೃತ ಸುಶಾಂತ್ ಸಿಂಗ್ ರಜಪೂತ್ ಫೋಟೋಗಳು ಹರಿದಾಡುತ್ತಿರುವುದನ್ನು ಮಹಾರಾಷ್ಟ್ರ ಸೈಬರ್ ವಿಭಾಗ ಪತ್ತೆ ಹಚ್ಚಿದ್ದು, ಇದು ತುಂಬಾ ಕಿರಿಕಿರಿಯುಂಟು ಮಾಡುತ್ತಿದೆ. ಯಾರಾದರೂ ಇಂತಹ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದರೆ ಡಿಲೀಟ್ ಮಾಡಿ ಎಂದು ಟ್ವೀಟ್ ನಲ್ಲಿ ಸೂಚಿಸಿದ್ದಾರೆ.
A disturbing trend has been observed on Social Media platforms by Maharashtra Cyber that pictures of deceased actor Shri. Sushant Singh Rajput are being circulated, which are disturbing and in bad taste. (1/n)
— Maharashtra Cyber (@MahaCyber1) June 14, 2020
ಇಂತಹ ಫೋಟೊಗಳನ್ನು ಹರಿಯಬಿಡುವುದು ಕಾನೂನು ವ್ಯಾಪ್ತಿಯನ್ನು ಉಲ್ಲಂಘಿಸಿದಂತೆ. ಅಷ್ಟೇ ಅಲ್ಲ ಕೋರ್ಟ್ ನಿರ್ದೇಶನವನ್ನೂ ಉಲ್ಲಂಘಿಸಿದಂತೆ ಇದರಿಂದ ನೀವೇ ಕಾನೂನು ಕುಣಿಕೆಯನ್ನು ಆಹ್ವಾನಿಸಿಕೊಂಡಂತೆ ಆಗುತ್ತದೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಮುಂಬೈ ಪೊಲೀಸರು ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಠಾಣ್: ಮೂರು ದಿನದಲ್ಲಿ 313 ಕೋಟಿ ರೂ. ಕಲೆಕ್ಷನ್

ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು!: ರಜನಿಕಾಂತ್

ಸೆಲ್ಫಿ ತೆಗೆಯಲು ಪ್ರಯತ್ನಿಸಿದ ಅಭಿಮಾನಿಯ ಮೊಬೈಲ್ ಫೋನ್ ಎಸೆದ ರಣಬೀರ್ ಕಪೂರ್ ವಿಡಿಯೋ ವೈರಲ್!

ತೆಲುಗು ಸಿನಿಮಾರಂಗದ ಜನಪ್ರಿಯ ಡಬ್ಬಿಂಗ್ ಕಲಾವಿದ ಶ್ರೀನಿವಾಸ ಮೂರ್ತಿ ಹೃದಯಾಘಾತದಿಂದ ನಿಧನ

ʼಪಠಾಣ್ʼ ಮೋಡಿ: 32 ವರ್ಷದ ಬಳಿಕ ಹೌಸ್ ಫುಲ್ ಆದ ಕಾಶ್ಮೀರದ ಥಿಯೇಟರ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
