ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭದ್ರತೆ ಇಳಿಸಿಲ್ಲ: ಕೇಂದ್ರದ ಸ್ಪಷ್ಟನೆ
Team Udayavani, Feb 25, 2021, 11:15 PM IST
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಒದಗಿಸಲಾಗಿದ್ದ ಭದ್ರತೆಯನ್ನು ತಗ್ಗಿಸಲಾಗಿದೆ. ಕೇಜ್ರಿವಾಲ್ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸ್ ಕಮಾಂಡೋಗಳ ಸಂಖ್ಯೆಯನ್ನು ಆರರಿಂದ ಮೂರಕ್ಕೆ ಇಳಿಸಲಾಗಿದೆ ಎಂದು ಕೇಳಿಬಂದಿರುವ ಆರೋಪಗಳನ್ನು ಕೇಂದ್ರ ಗೃಹ ಇಲಾಖೆ ತಳ್ಳಿಹಾಕಿದೆ.
ಕೇಜ್ರಿವಾಲ್ ಅವರ ಭದ್ರತೆಯನ್ನು ಇಳಿಸುವಂಥ ಯಾವುದೇ ನಿರ್ಧಾರವನ್ನು ಇಲಾಖೆ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಇತ್ತೀಚೆಗೆ, ಗುಜರಾತ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಆಮ್ ಆದ್ಮಿ ಪಕ್ಷ ಉತ್ತಮ ಸಾಧನೆ ಮಾಡಿದೆ. ಅದರ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕೇಜ್ರಿವಾಲ್ ಅವರ ಭದ್ರತೆ ಇಳಿಸಲಾಗಿದೆ ಎಂದು ಆ ಪಕ್ಷದ ಕೆಲವರು ವದಂತಿ ಹರಡಿದ್ದರು.
ಇದನ್ನೂ ಓದಿ:ಚಾರಣ ಪ್ರಿಯರ ನೆಚ್ಚಿನ ತಾಣ ದಾಂಡೇಲಿಯ ಶಿರೋಲಿ ಶಿಖರ