ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಡೆಲ್ಲಿಗೆ 5 ವಿಕೆಟ್‌ಗಳ ರೋಚಕ ಗೆಲುವು


Team Udayavani, Oct 17, 2020, 11:56 PM IST

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಡೆಲ್ಲಿಗೆ 5 ವಿಕೆಟ್‌ಗಳ ರೋಚಕ ಗೆಲುವು

ಶಾರ್ಜಾ: ಆರಂಭಿಕ ಶಿಖರ್‌ ಧವನ್‌ ಅವರ ಆಕರ್ಷಕ ಶತಕ (101 ಔಟಾಗದೇ) ಮತ್ತು ಅಂತಿಮ ಓವರಿನಲ್ಲಿ ಅಕ್ಷರ್‌ ಪಟೇಲ್‌ ಸಿಡಿಸಿದ ಮೂರು ಭರ್ಜರಿ ಸಿಕ್ಸರ್‌ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಶನಿವಾರದ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು.

ಅಂತಿಮ ಓವರಿನಲ್ಲಿ ಡೆಲ್ಲಿ ಗೆಲುವಿಗೆ 17 ರನ್‌ ಬೇಕಿತ್ತು. ರವೀಂದ್ರ ಜಡೇಜ ಎಸೆದ ಈ ಓವರನ್ನು ಆರಂಭದಲ್ಲಿ ಧವನ್‌ ಎದುರಿಸಿದ್ದರು. ಮೊದಲ ಎಸೆತ ವೈಡ್‌ ಆಗಿದ್ದರೆ ಎರಡನೇ ಎಸೆತದಲ್ಲಿ ಧವನ್‌ ಒಂಟಿ ರನ್‌ ತೆಗೆದರು. ಮತ್ತಿನೆರಡು ಎಸೆತಗಳಲ್ಲಿ ಅಕ್ಷರ್‌ ಸಿಕ್ಸರ್‌ ಬಾರಿಸಿ ರೋಮಾಂಚನಗೊಳಿಸಿದರು. ನಾಲ್ಕನೇ ಎಸೆತದಲ್ಲಿ ಎರಡು ರನ್‌ ಬಂದರೆ ಐದನೇ ಎಸೆತದಲ್ಲಿ ಮತ್ತೆ ಸಿಕ್ಸರ್‌ ಬಾರಿಸಿದ ಅಕ್ಷರ್‌ ಡೆಲ್ಲಿಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಈ ಗೆಲುವಿನಿಂದ ಡೆಲ್ಲಿ ತಂಡ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಚೆನ್ನೈ ಫಾ ಡು ಪ್ಲೆಸಿಸ್‌ ಅವರ ಅಮೋಘ ಅರ್ಧಶತಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ರಾಯುಡು, ಜಡೇಜ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟಿಗೆ 179 ರನ್‌ಗಳ ಸವಾಲಿನ ಮೊತ್ತ ಪೇರಿಸಿ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಡೆಲ್ಲಿ 19.5 ಓವರ್‌ಗಳಲ್ಲಿ 5 ವಿಕೆಟಿಗೆ 185 ರನ್‌ ಪೇರಿಸಿ ಜಯಭೇರಿ ಬಾರಿಸಿತು.

ಬ್ಯಾಟಿಂಗ್‌ ಆಯ್ದುಕೊಂಡ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ ಕಳೆದ ಪಂದ್ಯದಲ್ಲಿ ಆರಂಭಿಕನಾಗಿ ಭಡ್ತಿ ಹೊಂದಿ ಮಿಂಚಿದ್ದ ಸ್ಯಾಮ್‌ ಕರನ್‌ ಬ್ಯಾಟಿಂಗ್‌ ಅಬ್ಬರ ಈ ಪಂದ್ಯದಲ್ಲಿ ನಡೆಯಲ್ಲಿಲ್ಲ ತಂಡದ ಖಾತೆ ತರೆಯುವ ಮುನ್ನವೇ ಶೂನ್ಯಕ್ಕೆ ಔಟಾಗಿ ನಿರಾಶೆ ಮೂಡಿಸಿದರು. ಆದರೆ ದ್ವಿತೀಯ ವಿಕೆಟಿಗೆ ಆಡಲಿಳಿದ ಫಾ ಡು ಪ್ಲೆಸಿಸ್‌ ಮತ್ತು ವಾಟ್ಸನ್‌ ತಂಡಕ್ಕೆ ಹಿನ್ನೆಡೆಯಾಗದ ರೀತಿಯಲ್ಲಿ ಆಡಲಾರಂಭಿಸಿದರು. ಈ ಜೋಡಿ ಎರಡನೇ ವಿಕೆಟಿಗೆ 87 ರನ್‌ಗಳ ಭರ್ಜರಿ ಜತೆಯಾಟವಾಡಿತು.
ವಾಟ್ಸನ್‌ 28 ಎಸೆತ ಎದುರಿಸಿ ಆರು ಬೌಂಡರಿ ಒಳಗೊಂಡಂತೆ 36 ರನ್‌ ಬಾರಿಸಿದರು. ಶಿಖರ್‌ ಧವನ್‌ ಅವರಿಂದ ಒಂದು ಜೀವದಾನ ಪಡೆದ ಫಾ ಡು ಪ್ಲೆಸಿಸ್‌ ಮತ್ತೆ ಧವನ್‌ ಅವರೀಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು.

ಧೋನಿ ಮತ್ತೆ ವಿಫ‌ಲ
ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ ನಾಯಕ ಧೋನಿ ಈ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಅನ್ರಿಚ್‌ ನೋರ್ಜೆ ಈ ವಿಕೆಟ್‌ ಉರುಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ರಾಯುಡು ಮತ್ತು ಜಡೇಜ ಸಿಡಿದು ನಿಂತು ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಈ ಜೋಡಿ 21 ಎಸೆತಗಳಿಂದ 50 ರನ್‌ ಸೂರಗೈದಿತು. ರಾಯುಡು ಅಜೇಯ 25 ಎಸೆತಗಳಿಂದ 45 ರನ್‌ ಗಳಿಸಿದರೆ ಜಡೇಜ 13 ಎಸೆತಗಳಿಂದ 33 ರನ್‌ ಬಾರಿಸಿ ಅಜೇಯರಾಗಿ ಉಳಿದರು. 18 ಓವರ್‌ ತನಕ ಬೌಲಿಂಗ್‌ ಹಿಡಿತ ಸಾಧಿಸಿದ ಡೆಲ್ಲಿ ಬೌಲರ್‌ಗಳು ಅಂತಿಮ ಎರಡು ಓವರ್‌ನಲ್ಲಿ 32 ರನ್‌ ಬಿಟ್ಟುಕೊಟ್ಟು ಹಳಿ ತಪ್ಪಿದವರಂತೆ ಗೋಚರಿಸಿದರು.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟಿಗೆ 179 (ಫಾ ಡು ಪ್ಲೆಸಿಸ್‌ 58, ರಾಯುಡು ಅಜೇಯ 45, ವಾಟ್ಸನ್‌ 36, ಜಡೇಜ ಅಜೇಯ 33, ನೋರ್ಜೆ 44ಕ್ಕೆ 2)

ಟಾಪ್ ನ್ಯೂಸ್

munenkoppa

ನನಗೆ ರಾಜಕೀಯ ಬದ್ಧತೆಯಿದೆ, ಬೇರೆ ಪಕ್ಷಕ್ಕೆ ಹೋಗಲ್ಲ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

3yakshagana

ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್ ನಿಧನ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

thavarchand gahlot

ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ನನ್ನ ಸರ್ಕಾರ ಬದ್ಧ: ರಾಜ್ಯಪಾಲರ ಗಣರಾಜ್ಯೋತ್ಸವ ಸಂದೇಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuvraj singh and hazel keech

ಮೊದಲ ಮಗುವಿನ ಸಂತಸದಲ್ಲಿ ಯುವರಾಜ್ ಸಿಂಗ್-ಹೇಜಲ್ ಕೀಚ್

ಏಶ್ಯ ಕಪ್‌ ಮಹಿಳಾ ಹಾಕಿ ಸೆಮಿಫೈನಲ್‌: ಇಂದು ಭಾರತಕ್ಕೆ ಕೊರಿಯಾ ಸವಾಲು

ಏಶ್ಯ ಕಪ್‌ ಮಹಿಳಾ ಹಾಕಿ ಸೆಮಿಫೈನಲ್‌: ಇಂದು ಭಾರತಕ್ಕೆ ಕೊರಿಯಾ ಸವಾಲು

ಶ್ರೀಲಂಕಾ ಪ್ರವಾಸ: ಡೇವಿಡ್‌  ವಾರ್ನರ್‌, ಮಿಚೆಲ್‌ ಮಾರ್ಷ್‌ಗೆ ವಿಶ್ರಾಂತಿ

ಶ್ರೀಲಂಕಾ ಪ್ರವಾಸ: ಡೇವಿಡ್‌  ವಾರ್ನರ್‌, ಮಿಚೆಲ್‌ ಮಾರ್ಷ್‌ಗೆ ವಿಶ್ರಾಂತಿ

8ನೇ ಆವೃತ್ತಿ ಪ್ರೊ ಕಬಡ್ಡಿಗೂ ಕೋವಿಡ್‌ ಕಾಟ!

8ನೇ ಆವೃತ್ತಿ ಪ್ರೊ ಕಬಡ್ಡಿಗೂ ಕೋವಿಡ್‌ ಕಾಟ!

“ರಣಜಿ ಕೂಟ ರದ್ದು ಮಾಡಬೇಡಿ’: ರಾಜ್ಯ ಕ್ರಿಕೆಟ್‌ ಸಂಸ್ಥೆ ಮನವಿ

“ರಣಜಿ ಕೂಟ ರದ್ದು ಮಾಡಬೇಡಿ’: ರಾಜ್ಯ ಕ್ರಿಕೆಟ್‌ ಸಂಸ್ಥೆ ಮನವಿ

MUST WATCH

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

ಹೊಸ ಸೇರ್ಪಡೆ

munenkoppa

ನನಗೆ ರಾಜಕೀಯ ಬದ್ಧತೆಯಿದೆ, ಬೇರೆ ಪಕ್ಷಕ್ಕೆ ಹೋಗಲ್ಲ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

5democracy

ಮತದಾರರ ಕೈಯಲ್ಲಿದೆ ಸುಭದ್ರ ಪ್ರಜಾಪ್ರಭುತ್ವ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

4——–

ಕಲಬುರಗಿ-ಬೆಂಗಳೂರು ರೈಲು ಶೀಘ್ರ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.