Udayavni Special

ಮಾತೃಪೂರ್ಣದಡಿ ಕಿಟ್‌ ವಿತರಣೆಯೇ ಯಶಸ್ವಿ

3 ವರ್ಷಗಳ ಬಳಿಕ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಶತ ಪ್ರತಿಶತ ಸಾಧನೆ

Team Udayavani, Jun 27, 2020, 6:30 AM IST

ಮಾತೃಪೂರ್ಣದಡಿ ಕಿಟ್‌ ವಿತರಣೆಯೇ ಯಶಸ್ವಿ

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಇಲಾಖೆಯು ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಾತೃಪೂರ್ಣ ಯೋಜನೆಯಡಿ ಶತ ಪ್ರತಿಶತ ಪ್ರಗತಿಯನ್ನು ಸಾಧಿಸಿದೆ. ಈ ಮೂಲಕ ಸರಕಾರ ಹಾಕಿದ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಯೋಜನೆಯಡಿ ಬಿಸಿಯೂಟದ ಬದಲು ಸಾಮಗ್ರಿಗಳ ಕಿಟ್‌ ವಿತರಣೆ ಮಾಡುತ್ತಿರು ವುದು ಈ ಯಶಸ್ಸಿಗೆ ಕಾರಣ.

ಕೋವಿಡ್-19  ಹಿನ್ನೆಲೆಯಲ್ಲಿ ಸರಕಾರವು ಮಾತೃಪೂರ್ಣದಡಿ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ತಯಾರಿಸಿ ನೀಡುವುದನ್ನು ಸ್ಥಗಿತಗೊಳಿಸಿದೆ. ಪರ್ಯಾಯವಾಗಿ ಕಿಟ್‌ ನೀಡುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸಿದೆ. ಎಪ್ರಿಲ್‌, ಮೇ ತಿಂಗಳಿನಲ್ಲಿ ಒಬ್ಬರಿಗೆ 1,260 ರೂ. ವೆಚ್ಚದ ಸಾಮಗ್ರಿಗಳನ್ನು ಒಳಗೊಂಡ ಕಿಟ್‌ ನೀಡಲಾಗಿದೆ. ಈ ಯೋಜನೆ ಜೂನ್‌ಗೂ ವಿಸ್ತರಣೆಯಾಗಿದ್ದು, ಒಬ್ಬರಿಗೆ 630 ರೂ. ಮೊತ್ತದ ಕಿಟ್‌ ವಿತರಣೆಯಾಗಲಿದೆ.

ಶೇ. 100 ಪ್ರಗತಿ
ಉಡುಪಿ ಜಿಲ್ಲೆಯಲ್ಲಿ 5,989 ಗರ್ಭಿಣಿಯರು, 5,559 ಬಾಣಂತಿಯರು ಹಾಗೂ ದ.ಕ. ಜಿಲ್ಲೆಯಲ್ಲಿ 24,000 ಫ‌ಲಾನುಭವಿಗಳು ಮಾತೃಪೂರ್ಣ ಯೋಜ ನೆಯ ಕಿಟ್‌ ಪಡೆದುಕೊಂಡಿದ್ದಾರೆ. ಬಿಸಿಯೂಟ ಯೋಜನೆ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಇಲಾಖೆಯು ಮಾತೃಪೂರ್ಣ ಯೋಜನೆಯಡಿಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಿದೆ.

ಬಿಸಿಯೂಟಕ್ಕೆ ಯೋಜನೆ
2020ರ ಮಾರ್ಚ್‌ ವರೆಗೆ ಉಡುಪಿ ಜಿಲ್ಲೆಯಲ್ಲಿ 1,191 ಅಂಗನವಾಡಿ ಕೇಂದ್ರಗಳಲ್ಲಿ 4,912 ಗರ್ಭಿಣಿಯರು, 5,267 ಬಾಣಂತಿಯರು ನೋಂದಾಯಿಸಿ ಕೊಂಡಿದ್ದು, ಅವರಲ್ಲಿ 1,199 ಗರ್ಭಿಣಿಯರು ಮತ್ತು 976 ಬಾಣಂತಿಯರು ಬಿಸಿಯೂಟಕ್ಕೆ ಹಾಜರಾಗುತ್ತಿದ್ದರು. ಈ ಮೂಲಕ ಯೋಜನೆಯು ಶೇ. 20ರಷ್ಟು ಪ್ರಗತಿಯನ್ನಷ್ಟೇ ಸಾಧಿಸಿತ್ತು. ದಕ್ಷಿಣ ಕನ್ನಡದಲ್ಲಿ ಸುಮಾರು 2,400 ಫ‌ಲಾನುಭವಿಗಳು ಮಾತ್ರ ಬಿಸಿಯೂಟ ಸೇವಿಸುತ್ತಿದ್ದರು.

ಇದೇ ಪದ್ಧತಿ ಮುಂದುವರಿಸಿ
ಕಳೆದ ಮೂರು ವರ್ಷಗಳಿಂದ ಯೋಜನೆಯಡಿ ಪ್ರತೀ ತಿಂಗಳು ಶೇಕಡಾವಾರು ಪ್ರಗತಿಯ ಪರಿ ಶೀಲನೆ ನಡೆಯುತ್ತಿದೆ. ಇದುವರೆಗೆ ಶೇ . 100ರಷ್ಟು ಪ್ರಗತಿ ಸಾಧಿಸಲಾಗಿರಲಿಲ್ಲ. ಅವಿ ಭಜಿತ ದ.ಕ. ಜಿಲ್ಲೆಯಲ್ಲಿ ಯೋಜನೆ ಬಳಸಿ ಕೊಳ್ಳುವ ಫ‌ಲಾನುಭವಿಗಳ ಸಂಖ್ಯೆ ಕಡಿಮೆ ಇದೆ. ಇದ ರಿಂದಾಗಿ ಯೋಜನೆಯನ್ನು ಪರಿಣಾಮ ಕಾರಿ ಯಾಗಿ ಜಾರಿ ಮಾಡುವುದು ಇಲಾಖೆಗೆ ಕಷ್ಟವಾಗುತ್ತಿದೆ. ಆದ್ದರಿಂದ ಬಿಸಿಯೂಟದ ಬದಲು ಪೌಷ್ಟಿಕ ಆಹಾರವನ್ನು ತಿಂಗಳಿಗೊಮ್ಮೆ ಮನೆಗೆ ವಿತರಿಸಲು ಅವಕಾಶ ಮಾಡಿಕೊಡುವಂತೆ ಈ ಹಿಂದೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿ ಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಫ‌ಲಾನುಭವಿಗಳೂ ಇದೇ ಬೇಡಿಕೆ ಹೊಂದಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾತೃ ಪೂರ್ಣ ಯೋಜನೆ ಯಡಿ ಕಿಟ್‌ ವಿತ ರಿಸು ತ್ತಿದೆ. ಇದ ರಿಂದಾಗಿ ಇಲಾಖೆ ಶೇ. 100 ರಷ್ಟು ಪ್ರಗತಿ ಸಾಧಿಸಿದೆ. ಯೋಜನೆ ಯಡಿಯಲ್ಲಿ ಬಿಸಿ ಯೂಟ ವಿತರಣೆ ಯಾಗುತ್ತಿರುವ ಸಂದರ್ಭ ದಲ್ಲಿ ಇಲಾಖೆಯು ಉಡುಪಿ ಶೇ. 34 ಮತ್ತು ದ.ಕ. ದಲ್ಲಿ ಶೇ. 20ರಷ್ಟು ಮಾತ್ರ ಪ್ರಗತಿ ಸಾ ಧಿಸಿತ್ತು.
– ಶೇಸಪ್ಪ , ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ, ಉಡುಪಿ
– ಉಸ್ಮಾನ್‌, ಮಹಿಳಾ ಮಕ್ಕಳ ಇಲಾಖೆ ಉಪನಿರ್ದೇಶಕ, ದ.ಕ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ; ಓರ್ವನಿಗೆ ಗಾಯ

ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ; ಪವಾಡಸದೃಶ ರೀತಿಯಲ್ಲಿ ಪಾರಾದ ಚಾಲಕ

01

ಮುಂಬೈ vs ಡೆಲ್ಲಿ ಬಲಾಢ್ಯರ ಕಾಳಗ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಶಿಕ್ಷಕಿಗೆ ಹೋಂ ವರ್ಕ್ ತೋರಿಸಲು 40 ಕಿ.ಮೀ ಪ್ರಯಾಣಿಸಿದ ಎಂಟರ ಬಾಲಕ

ಶಿಕ್ಷಕಿಗೆ ಹೋಂ ವರ್ಕ್ ತೋರಿಸಲು 40 ಕಿ.ಮೀ ಪ್ರಯಾಣಿಸಿದ ಎಂಟರ ಬಾಲಕ

ಬಾಂಬೆ ಗುಂಡಾಗಿರಿ ಸಾಬೀತಾದರೆ ರಾಜಕೀಯ ನಿವೃತ್ತಿ: ಶಾಸಕ ಪರಣ್ಣ ಮುನವಳ್ಳಿ

ಬಾಂಬೆ ಗುಂಡಾಗಿರಿ ಸಾಬೀತಾದರೆ ರಾಜಕೀಯ ನಿವೃತ್ತಿ: ಶಾಸಕ ಪರಣ್ಣ ಮುನವಳ್ಳಿ

ಹಣಕಾಸು ವ್ಯವಹಾರದಲ್ಲಿ ವೈಮನಸ್ಸು: ಊಟ ಮಾಡಲು ಕರೆಸಿ ಕೊಲೆ, ಶವವನ್ನು ನದಿಗೆಸೆದ ಸ್ನೇಹಿತರು

ಹಣಕಾಸು ವ್ಯವಹಾರದಲ್ಲಿ ವೈಮನಸ್ಸು: ಊಟ ಮಾಡಲು ಕರೆಸಿ ಕೊಲೆ, ಶವವನ್ನು ನದಿಗೆಸೆದ ಸ್ನೇಹಿತರು

ನೀವು ಸರಿಯಿದ್ದರೆ ಇಂತಹ ಪರಿಸ್ಥಿತಿ ಯಾಕೆ ಬರುತ್ತಿತ್ತು? ಕೈ ಪಕ್ಷದ ವಿರುದ್ಧ ಮುನಿರತ್ನ ಕಿಡಿ

ನೀವು ಸರಿಯಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು? ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

ಉಪಚುನಾವಣೆಯಲ್ಲಿ ಮುನಿರತ್ನ ಗೆದ್ದ ಕೂಡಲೇ ಸಚಿವ ಸ್ಥಾನ ನೀಡುತ್ತೇವೆ: ಬಿ ಎಸ್ ಯಡಿಯೂರಪ್ಪ

ಉಪಚುನಾವಣೆಯಲ್ಲಿ ಗೆದ್ದ ಕೂಡಲೇ ಮುನಿರತ್ನಗೆ ಸಚಿವ ಸ್ಥಾನ: ಬಿ ಎಸ್ ಯಡಿಯೂರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ; ಓರ್ವನಿಗೆ ಗಾಯ

ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ; ಪವಾಡಸದೃಶ ರೀತಿಯಲ್ಲಿ ಪಾರಾದ ಚಾಲಕ

Covid ಕಾಲದಲ್ಲಿ ಸಹಾಯ ಮಾಡಿದ ಪೊಲೀಸ್ ಸಿಬ್ಬಂದಿಗೆ ಮೊಮ್ಮಗನ ಮದುವೆಯಲ್ಲಿ ಸನ್ಮಾನಿಸಿದ ಅಜ್ಜಿ

Covid ಕಾಲದಲ್ಲಿ ಸಹಾಯ ಮಾಡಿದ ಪೊಲೀಸ್ ಸಿಬ್ಬಂದಿಗೆ ಮೊಮ್ಮಗನ ಮದುವೆಯಲ್ಲಿ ಸನ್ಮಾನಿಸಿದ ಅಜ್ಜಿ

ಯಕ್ಷಗಾನ ಮೇಳಗಳ ತಿರುಗಾಟ; ಕ್ಷೇತ್ರಗಳಲ್ಲೇ ಪ್ರದರ್ಶನಕ್ಕೆ  ಒತ್ತು

ಯಕ್ಷಗಾನ ಮೇಳಗಳ ತಿರುಗಾಟ; ಕ್ಷೇತ್ರಗಳಲ್ಲೇ ಪ್ರದರ್ಶನಕ್ಕೆ  ಒತ್ತು

Vote

ಪಂಚಾಯತ್‌ ಚುನಾವಣೆಗೆ ತಾಲೀಮು

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

ಪೇಜಾವರ ಶ್ರೀಗಳು ಇಂದು ಅಯೋಧ್ಯೆಗೆ

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

mysuru-tdy-2

ಅಪರೂಪದ ಕೆಂಗಂದು ಬಣ್ಣದ ಜೇನುಬಾಕ ಪ್ರತ್ಯಕ್ಷ

MYSURU-TDY-1

ಪಕ್ಷೇತರರ ಒಲವು ಪಡೆದವರಿಗೆ ಅಧಿಕಾರದ ಗದ್ದುಗೆ

ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ; ಓರ್ವನಿಗೆ ಗಾಯ

ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ; ಪವಾಡಸದೃಶ ರೀತಿಯಲ್ಲಿ ಪಾರಾದ ಚಾಲಕ

ಕನಿಷ್ಠ 30 ಗ್ರಾಪಂ ವಶಕ್ಕೆ ಪಡೆಯಿರಿ: ಗಣೇಶ್‌ಪ್ರಸಾದ್‌

ಕನಿಷ್ಠ 30 ಗ್ರಾಪಂ ವಶಕ್ಕೆ ಪಡೆಯಿರಿ: ಗಣೇಶ್‌ಪ್ರಸಾದ್‌

01

ಮುಂಬೈ vs ಡೆಲ್ಲಿ ಬಲಾಢ್ಯರ ಕಾಳಗ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.