ಕುಷ್ಟಗಿ: ರುದ್ರಭೂಮಿ ಉಳಿಸಲು ಶವದ ಅಣಕು ಪ್ರದರ್ಶನ

Team Udayavani, Nov 26, 2021, 12:55 PM IST

14protest

ಕುಷ್ಟಗಿ: ರುದ್ರಭೂಮಿಯನ್ನು ವಾಣಿಜ್ಯೀಕರಣಕ್ಕೆ ಬಳಸದೇ ಗ್ರಾಮಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ನಿಡಶೇಸಿ ಗ್ರಾಮಸ್ಥರು ಕುಷ್ಟಗಿ ತಹಶೀಲ್ದಾರ ಕಛೇರಿವರೆಗೆ ಬಾಯಿ ಬಡಿದುಕೊಳ್ಳುತ್ತಾ ಶುಕ್ರವಾರ ಬೆಳಗ್ಗೆ ಪಾದಯಾತ್ರೆ ನಡೆಸಿದರು.

ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮಸ್ಥರ, ಇತಿಹಾಸವಿರುವ ರುದ್ರಭೂಮಿ ತಾಲೂಕಾಡಳಿತ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಖಾಸಗಿಯವರಿಗೆ ವ್ಯವಸ್ಥಿತವಾಗಿ ಪರಭಾರೆಯಾಗಿದೆ. ಗ್ರಾಮದ ಸರ್ವ ಜನಾಂಗದ ರುದ್ರಭೂಮಿ ನಮ್ಮ ಪೂರ್ವಜರ ಶವ ಸಂಸ್ಕಾರದ ಭೂಮಿಯನ್ನು ವಾಣಿಜ್ಯೀಕರಣಕ್ಕೆ ಬಳಸದೇ ಗ್ರಾಮಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಲಾಯಿತು.

ಗ್ರಾಮದ ಹೊರವಲಯದ ರುದ್ರಭೂಮಿಯಿಂದ ಆರಂಭಗೊಂಡ ಪಾದಯಾತ್ರೆ ತಾಲೂಕಾಡಳಿತದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ತಹಶಿಲ್ದಾರ ಕಛೇರಿ ಆವರಣದಲ್ಲಿ ಅಣಕು ಶವದೊಂದಿಗೆ ಪ್ರತಿಭಟಿಸಿದರು.

ನಿಡಶೇಸಿ ಗ್ರಾಮದ ಹೊರವಲಯದಲ್ಲಿರುವ ಮೂಲ ರುದ್ರಭೂಮಿ ಒಟ್ಟು 2 ಎಕರೆ 17 ಗುಂಟೆ ಜಮೀನು ಕಳೆದ 200 ವರ್ಷಗಳಿಂದ ಗ್ರಾಮದ ರುದ್ರಭೂಮಿಯಾಗಿದೆ. ಗ್ರಾಮಸ್ಥರ ಭಾವನಾತ್ಮಕ ಸಂಬಂಧದ ಈ ಭೂಮಿಯನ್ನು ಸ್ಥಳೀಯರಲ್ಲದವರು ಮೂಲ ಜಮೀನ್ದಾರರಿಂದ ಪ್ರಭಾವಿ ಡಿವೈಎಸ್ಪಿ ಹುದ್ದೆಯಲ್ಲಿರುವ ವ್ಯಕ್ತಿ ಖರೀದಿಸಿ ಅದೆ ಜಾಗೆಯಲ್ಲಿ ನಿವೇಶನ ವಿನ್ಯಾಸಕ್ಕೆ ಮುಂದಾಗಿದ್ದಾರೆ. ಸದರಿ ಜಮೀನು ಉಳಿಸುವ ಸಲುವಾಗಿ ಸಚಿವ ಹಾಲಪ್ಪ ಆಚಾರ, ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮನವಿ ಸಲ್ಲಿಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಾಳ್ಕರ್  ಅವರು, ಸದರಿ ಪ್ರಕರಣದ ವಿಚಾರಣೆಗೆ ಎರಡು ಬಾರಿ ಸಭೆ ನಿಗದಿಯಾಗಿದ್ದರೂ, ಯಾವುದೇ ಸ್ಪಷ್ಟ ನಿರ್ಣಯ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಡೆ ಅನುಮಾನ ಹುಟ್ಟಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟ ತೀವ್ರ ಸ್ವರೂಪಕ್ಕೆ ಕೊಂಡೊಯ್ಯಲು ಪಾದಯಾತ್ರೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ:ನಾಳೆ ಉತ್ತರ ವಿವಿ ಪ್ರಥಮ ಘಟಿಕೋತ್ಸವ

ಗ್ರಾಮದ ಏಕೈಕ ರುದ್ರಭೂಮಿ ಆಗಿದ್ದು, ಈಗ ಯಾರಾದರೂ ಸತ್ತರೆ ಹೆಣ ಹೂಳಲು ಜಾಗ ಇಲ್ಲ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಯಾರಾದರೂ ಸತ್ತರೆ ತಹಶೀಲ್ದಾರ ಕಛೇರಿ ಆವರಣದಲ್ಲಿ ಶವ ಸಂಸ್ಕಾರ ಮಾಡಲಿದ್ದೇವೆ. ಈ ಹೋರಾಟದಲ್ಲಿ‌ಪ್ರಾಣ ತ್ಯಾಗಕ್ಕೆ ಸಿದ್ದರಿದ್ದೇವೆ ಎಂದು ಗ್ರಾಮದ ರಾಮಣ್ಣ ಬಂಡಿಹಾಳ ಎಚ್ಚರಿಸಿದರು. ಈ ಹೋರಾಟಕ್ಕೆ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಹಾಗೂ ಅಮರಣಾಂತ ಸತ್ಯಾಗ್ರಹ ಅನಿವಾರ್ಯವಾಗಲಿದೆ.  ಎಂದು ಎಚ್ಚರಿಸಿದರು.

ಟಾಪ್ ನ್ಯೂಸ್

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಯುವಕರು ಸ್ವಾತಂತ್ರ್ಯ  ಸೇನಾನಿ ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಬೇಕು:ಶಾಸಕ ಪರಣ್ಣ ಮುನವಳ್ಳಿ

ಯುವಕರು ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಬೇಕು:ಶಾಸಕ ಪರಣ್ಣ ಮುನವಳ್ಳಿ

ಜಗಳ ಬಿಡಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು : ಇಬ್ಬರ ಬಂಧನ

ಮಗನಿಂದ ಸೊಸೆಯ ಮೇಲಿನ ಹಲ್ಲೆ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡಿದ್ದ ತಾಯಿ ಸಾವು : ಇಬ್ಬರ ಬಂಧನ

ಹಕ್ಕು,ಕರ್ತವ್ಯ ಬಳಸಿಕೊಂಡು ದೇಶ ಸೇವೆಗೆ ಮುಂದಾಗಿ: ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ಹಕ್ಕು,ಕರ್ತವ್ಯ ಬಳಸಿಕೊಂಡು ದೇಶ ಸೇವೆಗೆ ಮುಂದಾಗಿ: ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ಗಂಗಾವತಿ : ದೇಶಕ್ಕೆ ಮಾದರಿಯಾದ ಇಂಗುಗುಂಡಿ ಕಾಮಗಾರಿ ಯೋಜನೆ,  ಕೇಂದ್ರ ಸಚಿವರಿಂದ ಪ್ರಶಂಸೆ

ಗಂಗಾವತಿ : ದೇಶಕ್ಕೆ ಮಾದರಿಯಾದ ಇಂಗುಗುಂಡಿ ಕಾಮಗಾರಿ ಯೋಜನೆ,  ಕೇಂದ್ರ ಸಚಿವರಿಂದ ಪ್ರಶಂಸೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

ಧಾರ್ಮಿಕ ಕ್ಷೇತ್ರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಡಾ| ಹೆಗ್ಗಡೆ

ಧಾರ್ಮಿಕ ಕ್ಷೇತ್ರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಡಾ| ಹೆಗ್ಗಡೆ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.