
ಪತ್ನಿ, ಮಕ್ಕಳನ್ನು ಟೂರ್ ಗೆಂದು ಮಂಗಳೂರಿಗೆ ಕರೆತಂದು ಕೊಂದು ಬಿಟ್ಟನಾ ಉದ್ಯಮಿ?
ಆರ್ಥಿಕ ಸಮಸ್ಯೆಯ ಬಗ್ಗೆ ಹೇಳಿರಲಿಲ್ಲ..ಮಂಗಳೂರಿಗೆ ಬಂದ ಬಳಿಕ ನಿರ್ಧಾರ?
Team Udayavani, Mar 31, 2023, 9:58 PM IST

ಮಂಗಳೂರು: ಮೈಸೂರಿನ ಉದ್ಯಮಿ ದೇವೇಂದ್ರ ಮತ್ತು ಆತನ ಪತ್ನಿ, ಅವರ ಅವಳಿ ಜವಳಿ ಪುತ್ರಿಯರ ಶವ ಇಂದು ನಗರದ ಲಾಡ್ಜ್ ನಲ್ಲಿ ಪತ್ತೆಯಾಗಿದ್ದು ದೇವೇಂದ್ರ ಪ್ರವಾಸಕ್ಕೆಂದು ಅವರನ್ನು ಮಂಗಳೂರಿಗೆ ಕರೆತಂದಿದ್ದ ಎನ್ನಲಾಗಿದೆ.
ಮಾ.27ರಂದು ಲಾಡ್ಜ್ ಗೆ ಪತ್ನಿ, ಮಕ್ಕಳೊಂದಿಗೆ ಬಂದಿದ್ದ ದೇವೇಂದ್ರ ಮತ್ತೆ ಎರಡು ದಿನ ಉಳಿದುಕೊಳ್ಳುವುದಾಗಿ ಲಾಡ್ಜ್ ನವರಿಗೆ ತಿಳಿಸಿದ್ದ. ಶುಕ್ರವಾರ ಬೆಳಗ್ಗೆ ಕೂಡ ರೂಮಿನಿಂದ ಯಾರೂ ಹೊರ ಬರದಿದ್ದಾಗ ಲಾಡ್ಜ್ ಸಿಬಂದಿ ಬೇರೊಂದು ಕೀ ಹಾಕಿ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿತ್ತು. ದೇವೇಂದ್ರ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತೊಟ್ಟಿದ್ದರೆ ಪತ್ನಿ ಮತ್ತು ಮಕ್ಕಳು ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲೆ ಸಾವನ್ನಪ್ಪಿದ್ದರು.
ದೇವೆಂದ್ರ ತನ್ನ ಪತ್ನಿ ಮತ್ತು ಮಕ್ಕಳನ್ನು ಹತ್ಯೆಗೈದು ಅನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರಬಹುದು. ನಿದ್ದೆ ಮಾತ್ರೆ, ವಿಷ ನೀಡಿರಬಹುದು ಅಥವ ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂಬುದು ಪೊಲೀಸರ ಅಂದಾಜು. ಸ್ಪಷ್ಡ ಮಾಹಿತಿ ಮರಣೋತ್ತರ ಪರೀಕ್ಷಾ ವರದಿ ಬಂದ ಅನಂತರವೇ ಸಿಗಲಿದೆ.
ಆರ್ಥಿಕ ಸಮಸ್ಯೆಯ ಬಗ್ಗೆ ಹೇಳಿರಲಿಲ್ಲ
ದೇವೇಂದ್ರ ಮೈಸೂರಿನಲ್ಲಿ ಉದ್ಯಮ ಹೊಂದಿದ್ದು ಆತನ ಜತೆ ಹಲವರು ಕೆಲಸ ಮಾಡುತ್ತಿದ್ದರು.ಆದರೆ ಆತ ಆರ್ಥಿಕ ಸಮಸ್ಯೆಯ ಬಗ್ಗೆ ಹೇಳಿಕೊಂಡಿರಲಿಲ್ಲ ಎಂದು ದೇವೇಂದ್ರ ಅವರ ಸಹೋದರ ತಿಳಿಸಿದ್ದಾರೆ.
ಮಂಗಳೂರಿಗೆ ಬಂದ ಬಳಿಕ ನಿರ್ಧಾರ?
ದೇವೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೆ ಬಂದಿದ್ದರೆ ಅಥವಾ ಮಂಗಳೂರಿಗೆ ಬಂದ ಮೇಲೆ ಏಕಾಏಕಿ ನಿರ್ದಾರ ಮಾಡಿದರೆ ಗೊತ್ತಾಗಿಲ್ಲ. ಲಾಡ್ಜ್ ನಲ್ಲೊ ಕೃತ್ಯ ಎಸಗುವ ಮೊದಲು ದೇವೇಂದ್ರ ಅವರಿಗೆ ಬಂದಿರುವ ಕರೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪತಿ ಪತ್ನಿ ಅನ್ಯೋನ್ಯವಾಗಿದ್ದರೆಂದು ಕುಟುಂಬ ಮೂಲಗಳು ತಿಳಿಸಿವೆ. ಒಂಭತ್ತು ವರ್ಷ ವಯಸ್ಸಿನ ಇಬ್ಬರು ಹೆಣ್ಮಕ್ಕಳು ಸೇರಿದಂತೆ ನಾಲ್ವರ ಸಾವು ಮನಕಲಕುವಂತಿದೆ. ಇಂತಹ ದುಡುಕಿನ ನಿರ್ಧಾರ ಅಕ್ಷಮ್ಯ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ ಎಂಬ ಸತ್ಯ ಎಲ್ಲರನ್ನು ತಲುಬೇಕಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್ ವಿರುದ್ಧ ಜೈಲು ಅಧಿಕಾರಿಗಳ ದೂರು

Thailand Open Badminton: ಕಿರಣ್, ಸೇನ್ ಕ್ವಾರ್ಟರ್ ಫೈನಲಿಗೆ