ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್
Team Udayavani, Oct 29, 2020, 5:09 PM IST
ಬೆಂಗಳೂರು: ‘ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಅನ್ಯ ಪಕ್ಷಗಳ ಅನೇಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಗುರುವಾರ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಅವರು ‘ಕುಸುಮಾ ಅವರು ತಮ್ಮ ಜೀವನ ನೆನೆಸಿಕೊಂಡು, ತಮಗಾದ ನಷ್ಟ, ನೋವುಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಆದರೆ, ಮುನಿರತ್ನ ಅವರು ತಮಗೆ ಇಂತಾ ಸ್ಥಿತಿ ತಂದುಕೊಂಡನಲ್ಲಾ ಅಂತಾ ಕಣ್ಣೀರು ಹಾಕುತ್ತಿದ್ದಾರೆ.
ಕಾಂಗ್ರೆಸ್ ನನ್ನ ಉಸಿರು, ನನ್ನ ರಕ್ತ ಅಂತಾ ಹೇಳಿದ್ದ ಮುನಿರತ್ನ ಈಗ ಬಿಜೆಪಿಯಲ್ಲಿ ಮತ ಕೇಳುತ್ತಿದ್ದೇನಲ್ಲಾ ಅಂತಾ ನೆನೆಸಿಕೊಂಡು ಅತ್ತಿದ್ದಾರೆ.
ಮುನಿರತ್ನ ಉತ್ತಮ ಆ್ಯಕ್ಟರ್, ಪ್ರೋಡ್ಯುಸರ್ ಅಲ್ವಾ? ಜನರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಣ್ಣೀರು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ವಿರುದ್ಧ ಭಾಷಣ ಮಾಡಿದ್ದರು, ಈಗ ಅವರ ಪಕ್ಷ ಸೇರಿಕೊಂಡು ಚುನಾವಣೆ ಎದುರಿಸಬೇಕಾಗಿದೆಯಲ್ಲ ಅಂತಾ ಕಣ್ಣೀರಾಕಿರಬಹುದು.
ಇದನ್ನೂ ಓದಿ:ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಸೋರಿಕೆಯಾದ ಪತ್ರದ ಗುಟ್ಟು
ಹಿಂದೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತಿದ್ದರು, ಈಗ ಡಿ.ಕೆ ಶಿವಕುಮಾರ್ ಅವರ ಹಿಂದೆ ಯಾರೂ ಇಲ್ಲ ಅಂತಾ ಹೇಳಿದ್ದಾರೆ. ಒಟ್ಟಾರೆ ಅವರು ಪರಿಸ್ಥಿತಿಗೆ ತಕ್ಕಂತೆ ಅಭಿನಯಿಸುವ ಉತ್ತಮ ನಟ. ಇದನ್ನೆಲ್ಲಾ ನೋಡುತ್ತಿರುವ ಜನ ದಡ್ಡರಲ್ಲ. ನಾನು ಕಣ್ಣೀರು ಹಾಕಿದರೂ ಬೇರೆಯವರು ಹಾಕಿದರೂ ಏನು ಆಗುವುದಿಲ್ಲ. ಈಗ ಕಣ್ಣೀರು ಹಾಕಿ ಪ್ರಯೋಜನ ಇಲ್ಲ ಎಂದರು.
ಇಂದು ದೇವಾಲಯಕ್ಕೆ ಹೋಗಿ ದೇವರ ಆಶೀರ್ವಾದ ಪಡೆದೆ ಹಾಗೂ ಚರ್ಚ್ ಗೆ ಭೇಟಿ ಕೊಟ್ಟು ಪಾದ್ರಿಗಳನ್ನು ಭೇಟಿ ಮಾಡಿದೆ. ನೀವು ಆಶೀರ್ವಾದ ಮಾಡಿದರೂ ತೆಗೆದುಕೊಳ್ಳುತ್ತೇನೆ.’
3ರ ನಂತರ ಧರ್ಮದ ವಿಚಾರ:
ಕಪಾಲಿ ಬೆಟ್ಟದ ವಿಚಾರವಾಗಿ ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ‘3ರಂದು ನಡೆಯುವ ಚುನಾವಣೆ ಆಗಲಿ ಆಮೇಲೆ ಧರ್ಮದ ವಿಚಾರವಾಗಿ ಮಾತನಾಡೋಣ’ ಎಂದರು.